»   »  'ದರ್ಶನ್-ಸುದೀಪ್ ಸಂಬಂಧ ಸರಿಯಿಲ್ಲ' ಎನ್ನುವುದಕ್ಕು ಮುಂಚೆ ಇಲ್ಲಿ ನೋಡಿ

'ದರ್ಶನ್-ಸುದೀಪ್ ಸಂಬಂಧ ಸರಿಯಿಲ್ಲ' ಎನ್ನುವುದಕ್ಕು ಮುಂಚೆ ಇಲ್ಲಿ ನೋಡಿ

Posted By:
Subscribe to Filmibeat Kannada

ನಟ ದರ್ಶನ್ ಮತ್ತು ಸುದೀಪ್ ನಡುವೆ ಮನಸ್ತಾಪವಿರುವುದು ಬಹಿರಂಗವಾಗಿರುವ ವಿಚಾರ. 'ಇನ್ನೂ ಮುಂದೆ ಸುದೀಪ್ ಮತ್ತು ನಾನು ಗೆಳೆಯರಲ್ಲ' ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದರು. ಆ ಬಳಿಕ ಕುಚುಕು ಗೆಳೆಯರು ಪರಸ್ಪರ ಬೇರೆಯಾಗಿ ಬಿಟ್ಟರು ಎಂಬ ಮಾತು ಜೋರಾಗಿತ್ತು.

ಕನ್ನಡದ ಈ ನಟನನ್ನು ನಿರ್ದೇಶಕ ರಾಜಮೌಳಿ ಫಾಲೋ ಮಾಡ್ತಿದ್ದಾರೆ..!

ಹೀಗಾಗಿ, ದರ್ಶನ್ ಮತ್ತು ಸುದೀಪ್ ನಡುವೆ ಎಲ್ಲವೂ ಸರಿ ಇಲ್ಲ ಎಂದು ಅನೇಕರು ಬಾಯಿಗೆ ಬಂದ ಹಾಗೆ ಮಾತನಾಡುವುದಕ್ಕೆ ಶುರು ಮಾಡಿದರು. ಆದರೆ ದೈಹಿಕವಾಗಿ ಇವರಿಬ್ಬರೂ ಹತ್ತಿರ ಇರದಿದ್ದರೂ, ನಟ ಸುದೀಪ್ ಅವರ ಮನಸ್ಸಿನಲ್ಲಿ ದರ್ಶನ್ ಅವರಿಗೆ ಇನ್ನು ಜಾಗ ಇದೆ ಎಂಬುದಕ್ಕೆ ಇಲ್ಲೊಂದು ಸಾಕ್ಷಿ ಇದೆ.

 Sudeep Is Following Darshan In Twitter

ಯಾಕಂದ್ರೆ, ದರ್ಶನ್ ಅವರು ಸುದೀಪ್ ಅವರನ್ನ ತಮ್ಮ ಟ್ವಿಟ್ಟರ್ ನಲ್ಲಿ ಅನ್ ಫಾಲೋ ಮಾಡಿದ್ದಾರೆ. ಆದ್ರೆ, ಸುದೀಪ್ ಇಂದಿಗೂ ಕೂಡ ಟ್ವಿಟ್ಟರ್ ನಲ್ಲಿ ದರ್ಶನ್ ಅವರನ್ನು ಫಾಲೋ ಮಾಡುತ್ತಿದ್ದಾರೆ. ಸುದೀಪ್ ಟ್ವಿಟ್ಟರ್ ನಲ್ಲಿ ಫಾಲೋ ಮಾಡುತ್ತಿರುವುದು ಕೇವಲ 26 ಜನರನ್ನ ಮಾತ್ರ. ಆ 26 ಜನರಲ್ಲಿ ದರ್ಶನ್ ಕೂಡ ಒಬ್ಬರು ಎನ್ನುವುದು ವಿಶೇಷ.

ಕನ್ನಡದ ಸ್ಟಾರ್ ನಟರು ಈಗ ಯಶಸ್ವಿ ನಿರ್ಮಾಪಕರು

Sudeep Is Following Darshan In Twitter

ದರ್ಶನ್ ಮತ್ತು ಸುದೀಪ್ ನಡುವೆ ಏನೇ ಇದ್ದರೂ ಕಿಚ್ಚ ಇಂದಿಗೂ ಟ್ವಿಟ್ಟರ್ ನಲ್ಲಿ ದರ್ಶನ್ ಅವರನ್ನು ಫಾಲೋ ಮಾಡುತ್ತಿದ್ದಾರೆ. ಈ ಮನಸ್ತಾಪ ಎಷ್ಟು ದಿನ ಇರುತ್ತೋ ಗೊತ್ತಿಲ್ಲ. ಆದ್ರೆ, ಅದಷ್ಟೂ ಬೇಗ ಕುಚುಕು ಗೆಳೆಯರು ಒಂದಾಗಲಿ ಎನ್ನುವುದಷ್ಟೇ ಅಭಿಮಾನಿಗಳ ಆಸೆ.

English summary
Kannada Actor Sudeep is Still Following Darshan In Twitter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada