ಕಿಚ್ಚ ಸುದೀಪ್ ಗೆ ಹೊಸ ಬಿರುದು ನೀಡಿದ 'ಪೈಲ್ವಾನ್' ತಂಡ
ಅಭಿನಯ ಚಕ್ರವರ್ತಿ, ಕಿಚ್ಚ, ಮಾಣಿಕ್ಯ, ಹೀಗೆ ಅಭಿಮಾನಿಗಳು ಪ್ರೀತಿಯಿಂದ ಸುದೀಪ್ ಅವರನ್ನ ಒಂದೊಂದು ಹೆಸರಿನಿಂದ ಕರೆಯುತ್ತಾರೆ. ಇದೀಗ, 'ಪೈಲ್ವಾನ್' ತಂಡ ಸುದೀಪ್ ಗಾಗಿ ಹೊಸ ಬಿರುದು ನೀಡಿದೆ.
'ಪೈಲ್ವಾನ್' ಚಿತ್ರದ ಕುಸ್ತಿ ಪೋಸ್ಟರ್ ಬಿಡುಗಡೆ ಮಾಡಿದ ನಿರ್ದೇಶಕ ಕೃಷ್ಣ, ಜೊತೆಗೆ ಹೊಸದೊಂದು ಬಿರುದು ನೀಡಿ ಗಮನ ಸೆಳೆದಿದ್ದಾರೆ.
ಕಿಚ್ಚ ಸುದೀಪ್ ಇನ್ಮುಂದೆ ಬಾದ್ ಶಾ. ಪ್ರೀತಿಯಿಂದ ಪೈಲ್ವಾನ್ ತಂಡ ಸುದೀಪ್ ಅವರಿಗೆ ಬಾದ್ ಶಾ ಎಂಬ ಬಿರುದು ನೀಡಿದೆ. ಇದು ಕಿಚ್ಚನ ಅಭಿಮಾನಿಗಳಿಗೆ ಸಂಭ್ರಮ ಹೆಚ್ಚಿಸಿದೆ.

'ಪೈಲ್ವಾನ್' ಚಿತ್ರದ ಹೊಸ ಪೋಸ್ಟರ್ ಆಕರ್ಷಕವಾಗಿದ್ದು, ಕುಸ್ತಿ ಅಖಾಡದಿಂದ ಸುದೀಪ್ ಎದ್ದು ನಿಂತಿದ್ದಾರೆ. ಸುದೀಪ್ ಅವರ ಬಾಡಿ ಬಿಲ್ಡಿಂಗ್ ಕೂಡ ಈ ಪೋಸ್ಟರ್ ನಲ್ಲಿ ರಿವೀಲ್ ಆಗಿದೆ. ಪೈಲ್ವಾನ್ ಚಿತ್ರಕ್ಕಾಗಿ ಸುದೀಪ್ ಎಷ್ಟು ಹಾರ್ಡ್ ವರ್ಕ್ ಮಾಡಿದ್ದಾರೆ ಎಂಬುದನ್ನ ಈ ಪೋಸ್ಟರ್ ಹೇಳುತ್ತಿದೆ.
ಇನ್ನು ಬಾದ್ ಶಾ ಬಿರುದಿನ ಬಗ್ಗೆ ಹೇಳುವುದಾದರೇ, ಬಾಲಿವುಡ್ ನಲ್ಲಿ ಶಾರೂಕ್ ಖಾನ್ ಗೆ ಬಾಲಿವುಡ್ ಬಾದ್ ಶಾ ಎಂದು ಕರೆಯುತ್ತಾರೆ. ವಿಶೇಷ ಅಂದ್ರೆ, ಸ್ಯಾಂಡಲ್ ವುಡ್ ನಲ್ಲಿ 'ಬಾದ್ ಶಾ' ಎಂದು ಶಿವರಾಜ್ ಕುಮಾರ್ ಸಿನಿಮಾವೊಂದು ಘೋಷಣೆಯಾಗಿತ್ತು. ಇನ್ಮುಂದೆ ಸ್ಯಾಂಡಲ್ ವುಡ್ ಬಾದ್ ಶಾ ಆಗಿ ಸುದೀಪ್ ಮಿಂಚಲಿದ್ದಾರೆ.


Click it and Unblock the Notifications











