»   » 'ಜಸ್ಟ್ ಮಾತ್ ಮಾತಲ್ಲಿ-2' ನಿರ್ದೇಶಿಸಲಿದ್ದಾರೆ ಕಿಚ್ಚ ಸುದೀಪ್

'ಜಸ್ಟ್ ಮಾತ್ ಮಾತಲ್ಲಿ-2' ನಿರ್ದೇಶಿಸಲಿದ್ದಾರೆ ಕಿಚ್ಚ ಸುದೀಪ್

Posted By:
Subscribe to Filmibeat Kannada

ಕಿಚ್ಚ ಸುದೀಪ್ ಮತ್ತೆ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ. 'ಮಾಣಿಕ್ಯ' ಚಿತ್ರದ ನಂತರ ಅಪ್ಪಟ ಸ್ವಮೇಕ್ ಚಿತ್ರಕ್ಕೆ ಕಿಚ್ಚ ಸುದೀಪ್ ನಿರ್ದೇಶನ ಮಾಡಲಿದ್ದಾರೆ.

ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, 'ಜಸ್ಟ್ ಮಾತ್ ಮಾತಲ್ಲಿ' ಚಿತ್ರದ ಮುಂದುವರಿದ ಭಾಗ 'ಜಸ್ಟ್ ಮಾತ್ ಮಾತಲ್ಲಿ-2' ಚಿತ್ರ ನಿರ್ದೇಶನ ಮಾಡುವುದಕ್ಕೆ ಸುದೀಪ್ ಮನಸ್ಸು ಮಾಡಿದ್ದಾರೆ.

Sudeep is scripting for 'Just Maath Maathalli-2'

2010 ರಲ್ಲಿ ತೆರೆಕಂಡಿದ್ದ ಸೂಪರ್ ಡ್ಯೂಪರ್ ಹಿಟ್ ಸಿನಿಮಾ 'ಜಸ್ಟ್ ಮಾತ್ ಮಾತಲ್ಲಿ'. ಕಿಚ್ಚ ಸುದೀಪ್ ನಟಿಸಿ, ನಿರ್ದೇಶಿಸಿದ್ದ ಈ ಚಿತ್ರಕ್ಕೆ ರಘು ದೀಕ್ಷಿತ್ ಮ್ಯೂಸಿಕ್ ಬಹು ದೊಡ್ಡ ಪ್ಲಸ್ ಪಾಯಿಂಟ್ ಆಗಿತ್ತು. [ಸುದೀಪ್, ರಮ್ಯಾ 'ಜಸ್ಟ್ ಮಾತ್ ಮಾತಲ್ಲಿ' ವಿಮರ್ಶೆ]

ಸುದೀಪ್-ರಮ್ಯಾ ಕಾಂಬಿನೇಷನ್ ನಲ್ಲಿ ಮೂಡಿಬಂದ ಈ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಇದೀಗ ಇದೇ ಚಿತ್ರದ ಸೀಕ್ಷೆಲ್ ಮಾಡುತ್ತಿದ್ದಾರೆ ಸುದೀಪ್. ಈಗಾಗಲೇ ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್ ಗೆ ಚಾಲನೆ ನೀಡಿದ್ದು, ಸ್ಕ್ರಿಪ್ಟಿಂಗ್ ವರ್ಕ್ ನಲ್ಲಿ ಸುದೀಪ್ ಬಿಜಿಯಾಗಿದ್ದಾರೆ.

ರಿಯಾಲಿಟಿ ಶೋ 'ಬಿಗ್ ಬಾಸ್-3', ಕ್ರಿಕೆಟ್ ಮತ್ತು ಪರಭಾಷೆಯ ಚಿತ್ರಗಳಲ್ಲಿ ಮುಳುಗಿರುವ ಸುದೀಪ್ ಟೈಮ್ ಸಿಕ್ಕಾಗ 'ಜಸ್ಟ್ ಮಾತ್ ಮಾತಲ್ಲಿ-2' ಚಿತ್ರದ ಬಗ್ಗೆ ಗಮನ ಹರಿಸುತ್ತಿದ್ದಾರಂತೆ.

ಅಂತೂ ಬರೀ ರೀಮೇಕ್ ಚಿತ್ರಗಳಿಂದಲೇ ಸುದೀಪ್ ಗುರುತಿಸಿಕೊಳ್ಳುತ್ತಾರೆ ಅಂತ ಮೂಗು ಮುರಿಯುತ್ತಿದ್ದವರಿಗೆ 'ಜಸ್ಟ್ ಮಾತ್ ಮಾತಲ್ಲಿ-2' ಸ್ವಮೇಕ್ ಸುದ್ದಿ ಕೇಳಿ ಹಾಲು ಕುಡಿದಷ್ಟೇ ಸಂತಸವಾಗಿರುವುದರಲ್ಲಿ ಡೌಟ್ ಬೇಡ.

English summary
According to the sources, Kannada Actor Kiccha Sudeep is presently working on the sequel of 'Just Maath Maathalli'. Sudeep is busy scripting for the movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada