For Quick Alerts
  ALLOW NOTIFICATIONS  
  For Daily Alerts

  'ದಬಾಂಗ್-3' ಚಿತ್ರೀಕರಣಕ್ಕೆ ಬ್ರೇಕ್ ಹಾಕಿ ವಾಪಸ್ ಆಗಿದ್ದೇಕೆ ಸುದೀಪ್ : ಕಾರಣ ಇಲ್ಲಿದೆ

  |
  ಕಿಚ್ಚ ಸುದೀಪ್ ಸದ್ಯ 'ದಬಾಂಗ್-3' ಚಿತ್ರೀಕರಣದಲ್ಲಿ ಬ್ಯುಸಿ | FILMIBEAT KANNADA

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ 'ದಬಾಂಗ್-3' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಹೈ ಮೋಲ್ಟೆಟ್ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಫೈಟ್ ಮಾಡುತ್ತಿರುವ ಕಿಚ್ಚ ದಿಢೀರನೆ ಚಿತ್ರೀಕರಣಕ್ಕೆ ಬ್ರೇಕ್ ಹಾಕಿ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ.

  ಸ್ಯಾಂಡಲ್ ವುಡ್ ಮಾಣಿಕ್ಯ 'ದಬಾಂಗ್-3' ಚಿತ್ರೀಕರಣ ನಿಲ್ಲಿಸಿ ವಾಪಸ್ ಬರಲು ಕಾರಣವಾಗಿದ್ದು ಮುದ್ದು ಮಗಳು ಸಾನ್ವಿ. ಹೌದು, ಸುದೀಪ್ ಪುತ್ರಿ ಸಾನ್ವಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಮಗಳ ಹುಟ್ಟುಹಬ್ಬದ ವಿಶೇಷವಾಗಿ ಸುದೀಪ್ ಚಿತ್ರೀಕರಣಕ್ಕೆ ರಜೆ ಹಾಕಿ ಮನೆಗೆ ಬಂದಿದ್ದಾರಂತೆ.

  ಮುದ್ದು ಮಗಳನ್ನು ಜೀವತಕ್ಕಿಂತ ಹೆಚ್ಚು ಪ್ರೀತಿಸುವ ಸುದೀಪ್ ಮಗಳಿಗಾಗಿ ಮುಂಬೈಯಿಂದ ಬಂದಿದ್ದಾರೆ. ಬಿಡುವಿನ ವೇಳೆಯಲ್ಲಿ ಮಗಳ ಜೊತೆ ಹೆಚ್ಚು ಸಮಯ ಕಳೆಯುತ್ತಾರೆ ಸುದೀಪ್. ಸದ್ಯ ಚಿತ್ರೀಕರಣ ನಿಲ್ಲಿಸಿ ವಾವಾಸ್ ಬಂದಿರುವ ಕಿಚ್ಚ ಮಗಳ ಹಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

  ಮಗಳಿಗೆ ಕಿಚ್ಚ ಸುದೀಪ್ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಮಗಳ ಜೊತೆಗಿನ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡುವ ಮೂಲಕ ಸಾನ್ವಿಗೆ ಶುಭಾಶಯಕೋರಿದ್ದಾರೆ.

  "ನನ್ನ ಪ್ರೀತಿಯ ಏಂಜೆಲ್ ಗೆ ಹುಟ್ಟುಹಬ್ಬದ ಶುಭಾಶಯಗಳು. ಯಾವಾಗಲು ಸಂತೋಷದಿಂದಿರು ಸಾನು ಬೇಬಿ. ಯಾವಾಗಲು ನಿನ್ನನ್ನ ಹೆಚ್ಚು ಪ್ರೀತಿಸುತ್ತೇನೆ" ಎಂದು ಮುದ್ದು ಮಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸಿದ್ದಾರೆ.

  ಇನ್ನು ಸುದೀಪ್ ಪತ್ನಿ ಪ್ರೀಯಾರಾಧಕೃಷ್ಣನ್ ಸಹ ಮಗಳಿಗೆ ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ. ಒಟ್ನಲ್ಲಿ ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಸಂತಸದಿಂದ ಆಚರಿಸುತ್ತಿದ್ದಾರೆ ಸುದೀಪ್ ದಂಪತಿ. ಸಾನ್ವಿ ಹೀಗೆ ನಗುನಗುತಾ ಸಂತೋಷವಾಗಿ ಇರಲಿ ಎನ್ನುವುದೆ ನಮ್ಮ ಆಶಯ. ನಮ್ಮ ಕಡೆಯಿಂದನೂ ಹುಟ್ಟುಹಬ್ಬದ ಶುಭಾಶಯಗಳು ಸಾನ್ವಿ.

  English summary
  Kanada actor sudeep is taking a short break from shooting for his upcoming film dabangg-3. because he celebrates his daughter's birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X