K3 : ಶಾಲೆ ಬದಲಾಯಿಸಿದ ಮಗುವಿನ ಹಾಗಿದೆ ಕಿಚ್ಚನ ಫೀಲಿಂಗ್
ನಟ ಕಿಚ್ಚ ಸುದೀಪ್ ಗೆ ಈಗ ಶಾಲೆಯನ್ನು ಬದಲಾಯಿಸಿದ ಮಗುವಿನ ರೀತಿಯಲ್ಲಿ ಫೀಲ್ ಆಗುತ್ತಿದೆಯಂತೆ. ಅದಕ್ಕೆ ಕಾರಣ ಸುದೀಪ್ ಚಿತ್ರೀಕರಣದ ಸಿನಿಮಾ ಬದಲಾಗಿದೆ.
ಇಷ್ಟು ದಿನ 'ಪೈಲ್ವಾನ್' ಸಿನಿಮಾದ ಶೂಟಿಂಗ್ ನಲ್ಲಿ ಸುದೀಪ್ ಬ್ಯುಸಿ ಇದ್ದರು. ಅವರ ನಂತರ, ಈಗ ಮತ್ತೆ 'ಕೋಟಿಗೊಬ್ಬ 3' ಟೀಮ್ ಸೇರಿಕೊಂಡಿದ್ದಾರೆ. ಇಂದಿನಿಂದ ಈ ಸಿನಿಮಾದ ಶೂಟಿಂಗ್ ಪ್ರಾರಂಭ ಆಗುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ ''K3 (ಕೋಟಿಗೊಬ್ಬ 3) ಸಿನಿಮಾದ ಶೂಟಿಂಗ್ ಇಂದಿನಿಂದ ಶುರು ಆಗುತ್ತಿದೆ. 'ಪೈಲ್ವಾನ್' ಸುತ್ತಿ ಇದೀಗ ಇನ್ನೊಂದು ಸಿನಿಮಾ ಸೆಟ್ ಗೆ ಬಂದಿದ್ದೇನೆ. ನನ್ನ ಹೊಸ ತಂಡವನ್ನು ಸೇರಿಕೊಂಡಿದ್ದೇನೆ. ಶಾಲೆ ಬದಲಾಯಿಸಿದ ಮಗುವಿನ ಹಾಗೆ ನನಗೀಗ ಫೀಲ್ ಆಗುತ್ತಿದೆ. ಆದರೆ ಈ ಭಾವನೆಯೇ ಅಧ್ಭುತ.'' ಎಂದಿದ್ದಾರೆ.

'ಪೈಲ್ವಾನ್' ನಂತರ 'ಕೋಟಿಗೊಬ್ಬ 3' ಚಿತ್ರದ ಕೆಲಸದಲ್ಲಿ ಸುದೀಪ್ ತೊಡಗಿದ್ದಾರೆ. ಸೂರಪ್ಪ ಬಾಬು ಈ ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ. ಇದು ಶಿವ ಕಾರ್ತಿಕ್ ನಿರ್ದೇಶನ ಸಿನಿಮಾವಾಗಿದೆ.
ಸುದೀಪ್ ಗೆ ಜೋಡಿಯಾಗಿ 'ಪ್ರೇಮಂ' ಖ್ಯಾತಿಯ ನಟಿ ಮಡೋನ ಸೆಬಾಸ್ಟಿಯನ್ ಕಾಣಿಸಿಕೊಳ್ಳುತ್ತಿದ್ದಾರೆ. ಅಫ್ತಾಬ್ ಶಿವದಾಸಾನಿ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶ್ರದ್ಧಾ ದಾಸ್ ಸಹ ಚಿತ್ರದಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











