'ದಬಂಗ್-3'ಅಡ್ಡಾಗೆ ಎಂಟ್ರಿ ಕೊಟ್ಟ ಸುದೀಪ್: ಕಿಚ್ಚನಿಗೆ ಶುಭಾಶಯ ಹೇಳಿದ ರಕ್ಷಿತಾ ದಂಪತಿ

Recommended Video

ದಬಾಂಗ್ 3 ಸಿನಿಮಾ ತಂಡ ಸೇರಿದ ನಟ ಸುದೀಪ್ | ಇಂದಿನಿಂದ ಶೂಟಿಂಗ್ ಆರಂಭ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ದಬಂಗ್-3' ಅಡ್ಡಾಗೆ ಎಂಟ್ರಿ ಕೊಟ್ಟಿದ್ದಾರೆ. ಸುದೀಪ್ ಯಾವಾಗ ಬಾಲಿವುಡ್ ಸಿನಿಮಾ ಚಿತ್ರೀಕರಣದಲ್ಲಿ ಬಾಗಿಯಲಾಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಿತ್ತು. ಆದ್ರೆ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಇವತ್ತಿನಿಂದ ಸುದೀಪ್ 'ದಬಂಗ್-3' ಚಿತ್ರತಂಡ ಸೇರಿಕೊಳ್ಳಲಿದ್ದಾರೆ.

ಕನ್ನಡದಲ್ಲಿ 'ಪೈಲ್ವಾನ್' ಚಿತ್ರೀಕರಣ ಮುಗಿಸಿ 'ಕೊಟಿಗೊಬ್ಬ-3' ಚಿತ್ರದಲ್ಲಿ ಬ್ಯುಸಿ ಇದ್ದ ಸುದೀಪ್ ಈಗ ಬಾಲಿವುಡ್ ಫ್ಲೈಟ್ ಹತ್ತಿದ್ದಾರೆ. ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷೆಯ 'ದಬಂಗ್-3 'ಚಿತ್ರದಲ್ಲಿ ಸುದೀಪ್ ವಿಲನ್ ಆಗಿ ಅಬ್ಬರಿಸಲಿದ್ದಾರೆ. ಈಗಾಗಲೆ 'ದಬಂಗ್-3' ಚಿತ್ರೀಕರಣ ಪ್ರಾರಂಭವಾಗಿದೆ.

'ದಬಂಗ್-3' ಎರಡನೇ ಹಂತದ ಚಿತ್ರೀಕರಣ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಆದ್ರೆ ಇವತ್ತಿನಿಂದ ಸುದೀಪ್ ಭಾಗದ ಚಿತ್ರೀಕರಣ ಪ್ರಾರಂಭವಾಗಿದೆ. ಬಾಲಿವುಡ್ ನತ್ತ ಪಯಣ ಬೆಳೆಸಿರುವ ಅಭಿನಯ ಚಕ್ರವರ್ತಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ ಕನ್ನಡ ಸ್ಟಾರ್ಸ್.ಮುಂದೆ ಓದಿ..

ಕಿಚ್ಚನಿಗೆ ಶುಭಾಶಯ ಹೇಳಿದ ರಕ್ಷಿತಾ

'ದಬಂಗ್-3' ಚಿತ್ರೀಕರಣಕ್ಕೆ ಹೊರಡುತ್ತಿರುವ ಕಿಚ್ಚನಿಗೆ ನಟಿ ರಕ್ಷಿತಾ ಪ್ರೇಮ್ ದಂಪತಿ ಶುಭಾಶಯ ತಿಳಿಸಿದ್ದಾರೆ. 'ನನ್ನ ನೆಚ್ಚಿನ ನಟ ಸಲ್ಮಾನ್ ಖಾನ್ ಸಿನಿಮಾದ ಚಿತ್ರೀಕರಣದಲ್ಲಿ ಸುದೀಪ್ ಬಾಗಿಯಾಗುತ್ತಿದ್ದಾರೆ, ಒಳ್ಳೆಯದಾಗಲಿ. ಪ್ರೇಮ್ ಮತ್ರ ಆಹ್ವಾನ ಮಾಡಿದ್ದಾರೆ. ಆದ್ರೆ ನನಗೆ ಆಹ್ವಾನ ಮಾಡಿಲ್ಲ. ಆದ್ರೂ ಉತ್ತಮ ಗಳೆಯ ಸುದೀಪ್" ಎಂದು ಹೇಳಿದ್ದಾರೆ. ಅಂದ್ಹಾಗೆ ಸಲ್ಮಾನ್ ಖಾನ್ ರಕ್ಷಿತಾ ಅವರ ಫೇವರಿಟ್ ನಟ ಅಂತೆ. ಸುದೀಪ್ ಜೊತೆ ಉತ್ತಮ ಗೆಳೆತನ ಇಟ್ಟುಕೊಂಡಿರುವ ಕ್ರೇಜಿ ಕ್ವೀನ್ ಶುಭಾಶಯ ಅಭಿಮಾನಿಗಳಿಗೆ ಸಂತಸ ತಂದಿದೆ.

ದಬಂಗ್ ಸೆಟ್ ಪ್ರೇಮ್ ಗೆ ಆಹ್ವಾನ ನೀಡಿದ ಸುದೀಪ್

ಒಂದೆಡೆ ಕಿಚ್ಚನಿಗೆ ರಕ್ಷಿತಾ ಶುಭಾಶಯ ಹೇಳಿದ್ರೆ ಮತ್ತೊಂಡೆದೆ ಪತಿ ಪ್ರೇಮ್ ಕೂಡ ಬಾಲಿವುಡ್ ಗೆ ಹೊರಡುತ್ತಿರುವ ಕಿಚ್ಚನಿಗೆ ವಿಶ್ ಮಾಡಿದ್ದಾರೆ. ಅವರದೆ ಶೈಲಿಯಲ್ಲಿ 'ಒಳ್ಳೆಯದಾಗಲಿ ಡಾರ್ಲಿಂಗ್' ಎಂದು ಗೆಳೆಯ ಸುದೀಪ್ ಗೆ ಹರಿಸಿದ್ದಾರೆ. ಎಲ್ಲಾ ಭಾಷೆಯಲ್ಲು ಅದ್ಭುತವಾಗಿ ಅಭಿನಯಿಸುತ್ತೀರಿ. ಹಾಗೆ ಸಲ್ಮಾನ್ ಖಾನ್ ಚಿತ್ರದಲ್ಲೂ ನಿಮ್ಮ ನಟನೆ ಉತ್ತಮವಾಗಿರಲಿದೆ" ಎಂದು ಹೇಳಿದ್ದಾರೆ. ಆದ್ರೆ ಪ್ರೇಮ್ ಗೆ ಸುದೀಪ್ ದಬಂಗ್ ಸೆಟ್ ಗೆ ಬರುವಂತೆ ವಿಶೇಷವಾಗಿ ಆಹ್ವಾನ ನೀಡಿದ್ದಾರೆ.

ಸಿಕಂದರ್ ಭಾರದ್ವಜ್ ಪಾತ್ರದಲ್ಲಿ ಸುದೀಪ್

ಸಿಕಂದರ್ ಭಾರದ್ವಜ್ ಪಾತ್ರದಲ್ಲಿ ಸುದೀಪ್

ಸುದೀಪ್ ಸಿಕಂದರ್ ಭಾರದ್ವಜ್ ಆಗಿ ಚುಲ್ ಬುಲ್ ಪಾಂಡೆ ಸಲ್ಮಾನ್ ವಿರುದ್ಧ ಅಖಾಡಕ್ಕೆ ಇಳಿಯುತ್ತಿದ್ದಾರೆ ಮೊದಲ ಬಾರಿಗೆ ಸಲ್ಮಾನ್ ಖಾನ್ ಮತ್ತು ಸುದೀಪ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರು ಸ್ಟಾರ್ ನಟರನ್ನು ಒಟ್ಟಿಗೆ ನೋಡುವ ಅವಕಾಶ ಚಿತ್ರಾಭಿಮಾನಿಗಳಿಗೆ ದೊರಕಿದೆ. 'ದಬಂಗ್' ಚಿತ್ರದ ಮೂರನೆ ಸರಣಿಗೆ ಪ್ರಭುದೇವ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದಶಕದ ನಂತರ ಮತ್ತೆ ಬಾಲಿವುಡ್ ನಲ್ಲಿ ಸುದೀಪ್

ದಶಕದ ನಂತರ ಮತ್ತೆ ಬಾಲಿವುಡ್ ನಲ್ಲಿ ಸುದೀಪ್

10 ವರ್ಷದ ನಂತರ ಕಿಚ್ಚ ಬಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಈ ಹಿಂದೆ ಫೂಂಚ್, ರಣ್ ಮತ್ತು ರಕ್ತ ಚರಿತ್ರಂ ಚಿತ್ರಗಳಲ್ಲಿ ಸುದೀಪ್ ಮಿಂಚಿದ್ದಾರೆ. ಸದ್ಯ ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಎದುರು ಕನ್ನಡದ ಪೈಲ್ವಾನ್ ತೊಡೆತಟ್ಟಲಿದ್ದಾರೆ. ಈ ದೃಶ್ಯ ನೋಡಲು ಚಿತ್ರಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ. ಒಂದೆಡೆ ಕಿಚ್ಚನಿಗೆ ರಕ್ಷಿತಾ ಶುಭಾಶಯ ಹೇಳಿದ್ರೆ ಮತ್ತೊಂಡೆದೆ ಪತಿ ಪ್ರೇಮ್ ಕೂಡ ಬಾಲಿವುಡ್ ಗೆ ಹೊರಡುತ್ತಿರುವ ಕಿಚ್ಚನಿಗೆ ವಿಶ್ ಮಾಡಿದ್ದಾರೆ. ಅವರದೆ ಶೈಲಿಯಲ್ಲಿ 'ಒಳ್ಳೆಯದಾಗಲಿ ಡಾರ್ಲಿಂಗ್' ಎಂದು ಗೆಳೆಯ ಸುದೀಪ್ ಗೆ ಹರಿಸಿದ್ದಾರೆ.

More from Filmibeat

English summary
Kannada actor Abhinaya Chakravarthi Kiccha Sudeep joins to 'Dabangg-3', to begins shooting today. Bollywood actor Salman Khan satrrer 'Dabangg-3'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X