»   » ಸುದೀಪ್ ಬಚ್ಚನ್ ಮೇಲೆ 'ಈಗ' ಯಶಸ್ಸಿನ ಎಫೆಕ್ಟ್!

ಸುದೀಪ್ ಬಚ್ಚನ್ ಮೇಲೆ 'ಈಗ' ಯಶಸ್ಸಿನ ಎಫೆಕ್ಟ್!

Posted By:
Subscribe to Filmibeat Kannada
ಕಿಚ್ಚ ಸುದೀಪ್ 'ಈಗ' ಚಿತ್ರದ ಮೂಲಕ ಸೌತ್ ಇಂಡಿಯನ್ ಹೊಸ ಸ್ಟಾರ್ ಆಗಿ ಉದಯಿಸಿದ್ದಾರೆ. ಅವರೀಗ ಬಹುಭಾಷೆಗಳ ಬಹುಬೇಡಿಕೆ ನಟ. ಕನ್ನಡದಲ್ಲಿ ಅವರು ನಟಿಸಿರುವ ಹಳೆಯ ಚಿತ್ರಗಳೇ ಈಗ ತಮಿಳು ತೆಲುಗಿಗೆ ಡಬ್ ಆಗುತ್ತಿರುವಾಗ ಸುದೀಪ್ ನಟನೆಯ ಚಿತ್ರೀಕರಣ ಹಂತದಲ್ಲಿರುವ ಚಿತ್ರಗಳ ನಿರ್ಮಾಪಕರು ಸುಮ್ಮನಿರಲು ಸಾಧ್ಯವೇ?

ಸಹಜವಾಗಿಯೇ ಇದೀಗ ಚಿತ್ರೀಕರಣ ಹಂತದಲ್ಲಿರುವ ಕಿಚ್ಚ ಸುದೀಪ್ ನಟನೆಯ ಬಚ್ಚನ್ ಚಿತ್ರವನ್ನು ಕನ್ನಡದಲ್ಲಿ ಮಾತ್ರವಲ್ಲದೇ ತಮಿಳು ಹಾಗೂ ತೆಲುಗಿಗೆ ಡಬ್ ಮಾಡಲು ನಿರ್ಧರಿಸಿದೆ ಚಿತ್ರತಂಡ. ಈಗ ಚಿತ್ರ ಬಿಡುಗಡೆಗೂ ಮೊದಲೇ ಸೆಟ್ಟೇರಿದ್ದ ಸುದೀಪ್ ಬಚ್ಚನ್ ಚಿತ್ರ, ಈಗ ಪ್ಲಾನ್ ಚೇಂಜ್ ಮಾಡಿಕೊಂಡು ಮೂರೂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಘೋಷಿಸಿದೆ.

ಈಗ ಸುದೀಪ್ ಸೌತ್ ಇಂಡಿಯಾದಲ್ಲಿ ಮಿಂಚಿನ ಸಂಚಲನ ಸೃಷ್ಟಿ ಮಾಡಿರುವ ನಟ. ಈ ಮೊದಲು ಕೇವಲ ಕನ್ನಡ ಹಾಗೂ ಬಾಲಿವುಡ್ ಅಷ್ಟಕ್ಕೇ ಸೀಮಿತವಾಗಿದ್ದ ನಟ ಸುದೀಪ್ ಈಗ ಚಿತ್ರದ ನಂತರ ಸೌತ್ ಇಂಡಿಯಾದಲ್ಲಿ ಓಡುವ ಕುದುರೆ. ಹೀಗಿರುವಾಗ ಸುದೀಪ್ ಚಿತ್ರ ಸೌತ್ ಇಂಡಿಯಾದಲ್ಲಿ ಉತ್ತಮ ಕಲೆಕ್ಷನ್ ಮಾಡುವುದು ಗ್ಯಾರಂಟಿ ಎಂಬ ನಿರ್ಮಾಪಕ ಲೆಕ್ಕ ತಪ್ಪು ಎನ್ನವುದು ಹೇಗೆ?

ಮೊಗ್ಗಿನ ಮನಸ್ಸು, ಜರಾಸಂಧ ಖ್ಯಾತಿಯ ಶಶಾಂಕ್ ನಿರ್ದೇಶನ ಬಚ್ಚನ್ ಚಿತ್ರಕ್ಕೆ ಮೂವರು ನಾಯಕಿಯರು. ಜಾಕಿ ಭಾವನಾ, ಗೋವಿಂದಾಯ ನಮಃ ಪಾರುಲ್ ಯಾದವ್ ಹಾಗೂ ತುಲಿಪ್ ಜೋಷಿ. ಈ ಮೊದಲು ಈ ಯೋಜನೆ ಇಲ್ಲವಾಗಿತ್ತಾದ್ದರಿಂದ ದೀಪಾ ಸನ್ನಿಧಿ ಆಯ್ಕೆಯಾಗಿದ್ದರು. ನಂತರ ಈ ಯೋಚನೆ ಬಂದಮೇಲೆ ದೀಪಾ ಚಿತ್ರದಿಂದ ಹೊರಬಿದ್ದರು.

ಈಗ ಚಿತ್ರದ ಯಶಸ್ಸಿನ ನಂತರ 'ಬಚ್ಚನ್' ಚಿತ್ರವನ್ನು ತಮಿಳು, ತೆಲುಗುಗಳಿಗೆ ಡಬ್ ಮಾಡುವ ತೀರ್ಮಾನಕ್ಕೆ ಬರಲಾಗಿದೆ. ಹೀಗಾಗಿಯೇ ಚಿತ್ರದ ಕಲಾವಿದರಾಗಿ ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಪ್ರೇಕ್ಷಕರಿಗೆ ಗೊತ್ತಿರುವ ನಟ,ನಟಿಯರನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಈಗ ಡಬ್ ಮಾಡಲಾಗದಿದ್ದರೂ ಮುಂದಕ್ಕೆ ಮಾಡಬಹುದು.

ಈಗಲೇ ತಾರಾಗಣದ ಆಯ್ಕೆಯಲ್ಲಿ ಜಾಣತನ ತೋರಿಸಿದರೆ ರೀಮೇಕ್ ಮಾಡುವ ಅಗತ್ಯವಿಲ್ಲ. ಪ್ರತ್ಯೇಕವಾಗಿ ಚಿತ್ರೀಕರಿಸುವ ಗೋಜಿಲ್ಲ. ಇವೆಲ್ಲಾ ಐಡಿಯಾಗಳು ಈಗ ನಿರ್ಮಾಪಕ ಹಾಗೂ ನಿರ್ದೇಶಕರ ತಲೆಯಲ್ಲಿ ಬಂದಿವೆ. ಎಲ್ಲಾ ಭಾಷೆಗಳಿಗೆ ಹೊಂದುವ ಕಥೆಯಿದೆ. ಪರಿಚಿತ ನಟ-ನಟಿಯರನ್ನು ಹಾಕಿಕೊಂಡಿರುವ ಕಾರಣ, ತಮಿಳು ತೆಲುಗಿಗೆ ಡಬ್ ಮಾಡುತ್ತೇವೆ.

"ಸೌತ್ ಇಂಡಿಯಾದ ಕನ್ನಡ, ತೆಲುಗು, ಹಾಗೂ ತಮಿಳು ಹೀಗೆ ಮೂರೂ ಭಾಷೆಗಳಲ್ಲಿ ಚಿತ್ರವನ್ನು ಸಿದ್ಧಮಾಡಿ ಈ ವರ್ಷದ ಕೊನೆಯೊಳಗೆ ಮೂರೂ ರಾಜ್ಯಗಳಲ್ಲಿ ಬಚ್ಚನ್ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ" ಎಂದಿದ್ದಾರೆ ನಿರ್ದೇಶಕ ಶಶಾಂಕ್. ಸುದೀಪ್ ಹಳೆಯ ಚಿತ್ರಗಳಾದ ಗೂಳಿ, ಕಿಚ್ಚ ಹುಚ್ಚ ಮತ್ತು ಜಸ್ಟ್ ಮಾತ್ ಮಾತಲ್ಲಿ ಚಿತ್ರಗಳು ಡಬ್ ಆಗಿ ಇನ್ನು ಕೆಲವೇ ದಿನಗಳಲ್ಲಿ ಆಯಾ ರಾಜ್ಯಗಳಲ್ಲಿ ತೆರೆಕಾಣಲಿವೆ. (ಒನ್ ಇಂಡಿಯಾ ಕನ್ನಡ)

English summary
Kichcha Sudeep's upcoming movie Bachchan Dubbs to Tamil Telugu. At the time of bachchan movie launch, the team have no idea to dubb other languages. But now, the grand success of Sudeep movie Eega made them to change their decision. Bachchan director Shashank.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada