For Quick Alerts
  ALLOW NOTIFICATIONS  
  For Daily Alerts

  ಅಂದು ಚುನಾವಣಾ ಪ್ರಚಾರಕ್ಕೆ ಹೋಗಲ್ಲ ಎಂದು ಬರೆದಿದ್ದ ಸುದೀಪ್ ಪತ್ರದಲ್ಲಿ ಏನಿತ್ತು?

  |
  ಚುನಾವಣಾ ಪ್ರಚಾರಕ್ಕೆ ಹೋಗಲ್ಲ ಎಂದು ಬರೆದಿದ್ದ ಸುದೀಪ್ ಪತ್ರದಲ್ಲಿ ಏನಿತ್ತು? | FILMIBEAT KANNADA

  ಕಿಚ್ಚ ಸುದೀಪ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಲವು ಆಪ್ತರ ಪರ ಪ್ರಚಾರ ಮಾಡಿದ್ದರು. ರಾಜುಗೌಡ, ಶ್ರೀರಾಮುಲು ಹಾಗೂ ಸೋಮ್ ಶೇಖರ್ ರೆಡ್ಡಿ ಪರವಾಗಿ ಮತಯಾಚನೆ ಮಾಡಿದ್ದರು. ನಂತರ ಕೆಲವು ಅಭಿಮಾನಿಗಳಿಂದ ಟೀಕೆ ಎದುರಿಸಿದಾಗ, 'ಇನ್ಮುಂದೆ ಚುನಾವಣೆ ಪ್ರಚಾರ ಮಾಡಲ್ಲ' ಎಂದು ಬಹಿರಂಗವಾಗಿ ಪತ್ರ ಬರೆದಿದ್ದರು.

  ಆ ಪತ್ರದಲ್ಲಿ ಸುದೀಪ್ ಯಾಕೆ ಪ್ರಚಾರ ಮಾಡಿದ್ರು ಎಂಬುದಕ್ಕೆ ಸ್ಪಷ್ಟನೆ ಕೂಡ ನೀಡಿದ್ದರು. ಅಂದು ಸುದೀಪ್ ಹೇಳಿದಂತೆ ಈಗ ನಡೆದುಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ. ಯಾಕಂದ್ರೆ, ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅವರ ಪರವಾಗಿ ಕಿಚ್ಚ ಪ್ರಚಾರ ಮಾಡ್ತಾರೆ ಎಂಬ ನಿರೀಕ್ಷೆ ಇತ್ತು.

  ಅಂದು ಸುದೀಪ್ ತೆಗೆದುಕೊಂಡ ನಿರ್ಧಾರ ಸುಮಲತಾ ಪರ ಪ್ರಚಾರಕ್ಕೆ ಹೋಗದಂತೆ ಕೈ ಕಟ್ಟಿಹಾಕಿದ್ಯಾ?

  ಆದ್ರೆ, ಅಂಬಿ ಪತ್ನಿಗೆ ಬೆಂಬಲ ನೀಡಿದ ಸುದೀಪ್ ಪ್ರಚಾರ ಸಾಧ್ಯವಿಲ್ಲ ಎಂದು ಹೇಳಿದ್ದರು. ಈ ಎಲ್ಲ ಬೆಳವಣಿಗೆ ಗಮನಿಸಿದಾಗ, ಅಂದು ಸುದೀಪ್ ಬಹಿರಂಗವಾಗಿ ಬರೆದಿದ್ದ ಪತ್ರದಲ್ಲಿ ಏನಿತ್ತು ಎಂದು ಕುತೂಹಲ ಮೂಡಿಸಿದೆ. ಪೂರ್ತಿ ವಿವರ ಮುಂದೆ ಓದಿ.....

  ಸುದೀಪ್ ಯಾಕೆ ಪ್ರಚಾರ ಮಾಡಿದ್ರು

  ಸುದೀಪ್ ಯಾಕೆ ಪ್ರಚಾರ ಮಾಡಿದ್ರು

  ''ನಾನು ಪ್ರಚಾರಕ್ಕೆ ಸೇರಿದ್ದು ಸುಮಾರು ವರ್ಷಗಳ ಪರಿಚಯದ ನನ್ನ ಕೆಲವು ಗೆಳೆಯರಿಗಾಗಿ, ಇವರು ಒಂದಲ್ಲ ಒಂದು ರೀತಿ ನನ್ನೊಟ್ಟಿಗೆ ನನ್ನ ಕಠಿಣ ಸಮಯದಲ್ಲಿ ನಿಂತವರು,, ಸಣ್ಣದು ಅಥವಾ ದೊಡ್ಡದು ಎಂಬುದು ವಿಷಯವಲ್ಲ,, ಅವರು ಅಂದು ನಿಂತದ್ದು ವಿಷಯ.. ಈಗ ಅವರಿಗಾಗಿ ನಾನು ಅಲ್ಲಿರುವುದು''

  ''ಸುದೀಪ್ ಗೆ ತೊಂದರೆ ನೀಡಲು ಇಷ್ಟ ಪಡುವುದಿಲ್ಲ'' ಕಿಚ್ಚನ ಬಗ್ಗೆ ಸುಮಲತಾ ಹೇಳಿಕೆ

  ಮುಂದಿನ ಯಾವುದೇ ಪ್ರಚಾರದಲ್ಲೂ ನಾನಿರಲ್ಲ

  ಮುಂದಿನ ಯಾವುದೇ ಪ್ರಚಾರದಲ್ಲೂ ನಾನಿರಲ್ಲ

  ''ಬಹುಶಃ ಅವರು ನನ್ನಿಂದ ಪಡೆಯುವ ಒಂದು ಸಣ್ಣ ಬೆಂಬಲ,,ಇದು ಕನಿಷ್ಠ ನಾನು ಅವರಿಗಾಗಿ ಮಾಡಬಹುದಾದದ್ದು...ಅದರಲ್ಲಿ ಯಾವುದೇ ವಿಷಾದವಿಲ್ಲ ನನ್ನ ಗೆಳೆಯರ ಹಾಗು ಅಭಿಮಾನಿಗಳ ಸಲುವಾಗಿ,,ನಾನು ಮುಂದಿನ ಯಾವುದೇ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ''

  ನಾವಿಬ್ಬರು ಜೋಡಿ ಎತ್ತು: ಸುದೀಪ್ ಹೇಳಿಕೆಗೆ ದರ್ಶನ್ ಪ್ರತಿಕ್ರಿಯೆ ಹೀಗಿತ್ತು

  ಎಲ್ಲರಿಗೂ ನನ್ನ ಅವಶ್ಯಕತೆ ಇದೆ

  ಎಲ್ಲರಿಗೂ ನನ್ನ ಅವಶ್ಯಕತೆ ಇದೆ

  ''ಎಲ್ಲರಿಗೂ ನನ್ನ ಅವಶ್ಯಕತೆ ಇದೆ ಹಾಗೂ ನನ್ನ ಉಪಸ್ಥಿತಿಯಿಂದ ಫಲಿತಾಂಶಗಳು ಬದಲಾಗುತ್ತದೆ ಎಂದು ನಾನು ನನ್ನನ್ನು ಅಂತಹ ದೊಡ್ಡ ಮಟ್ಟಕ್ಕೆ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ..ನಾನು ಒಬ್ಬ ಕಲಾವಿದ ನನ್ನ ಪಯಣದಲ್ಲಿ ನನ್ನೊಟ್ಟಿಗೆ ಇದ್ದಂತಹ ಗೆಳೆಯರು ಹಾಗೂ ಅಭಿಮಾನಿಗಳ ಅಭಿಪ್ರಾಯ ಮುಖ್ಯವಾಗುತ್ತದೆ.. ಇದು ನಾನು ತೆಗೆದುಕೊಳ್ಳುತ್ತಿರುವ ಕಠಿಣ ನಿರ್ಧಾರ,,,,''

  ಸುಮಲತಾ ಜೊತೆ ದರ್ಶನ್ ಒಬ್ಬರಿದ್ದಾರೆ ಸಾಕು, ಬೇರೆ ಯಾರೂ ಅಗತ್ಯವಿಲ್ಲ: ಸುದೀಪ್

  ಇದು ನನ್ನವರಿಗಾಗಿ

  ಇದು ನನ್ನವರಿಗಾಗಿ

  ''ಆದರೂ, ಈ ನಿರ್ಧಾರ ನನ್ನೊಟ್ಟಿಗೆ ನಿಂತ ನನ್ನ ಅಭಿಮಾನಿಗಳು ಹಾಗೂ ಗೆಳೆಯರ ಸಲುವಾಗಿ ಕೈಗೊಳ್ಳುತ್ತಿದ್ದೇನೆ...ನಾನು ಯಾವುದೇ ರೀತಿ ನನ್ನ ಕ್ರಮಗಳಲ್ಲಿ ಅವರಿಗೆ ನೋವುಂಟು ಮಾಡಲು ಇಚ್ಛಿಸುವುದಿಲ್ಲ...ತುಂಬು ಪ್ರೀತಿಯಿಂದ. ಕಿಚ್ಚ'' ಎಂದು ಬರೆದುಕೊಂಡಿದ್ದರು.

  ಸುದ್ದಿಗೋಷ್ಠಿ ಬಳಿಕ ಸುಮಲತಾಗೆ ಟ್ವೀಟ್ ಮಾಡಿದ ಸುದೀಪ್

  English summary
  Here is the Sudeep's old letter, when he wrote to his fans regarding election campaign.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X