'ಆ ಕರಾಳ ರಾತ್ರಿ' ಸಿನಿಮಾ ನೋಡಿ ಮೆಚ್ಚಿಕೊಂಡ ಕಿಚ್ಚ
Recommended Video

ಸದ್ದಿಲ್ಲದೆ ಸಿನಿಮಾ ಚಿತ್ರೀಕರಣ ಮಾಡಿ ರಿಲೀಸ್ ಮಾಡಿ ಪ್ರೇಕ್ಷಕರಿಂದ ಹಾಗೂ ಸಿನಿಮಾರಂಗದಿಂದ ಮೆಚ್ಚುಗೆಯನ್ನು ಪಡೆದುಕೊಂಡ ಸಿನಿಮಾ 'ಆ ಕರಾಳ ರಾತ್ರಿ' . ಬಿಗ್ ಬಾಸ್ ಮನೆಯಲ್ಲಿಯೇ ಈ ಚಿತ್ರ ಮಾಡಬೇಕು ಎಂದು ನಿರ್ಧಾರ ಮಾಡಿಕೊಂಡು ಬಂದು ಛಲ ಬಿಡದೇ ಸಿನಿಮಾ ಮಾಡಿ ಗೆದ್ದ ನಿರ್ದೇಶಕ ದಯಾಳ್ ಪದ್ಮನಾಬ್.
ಕಿರುತೆರೆಯಲ್ಲಿ ಪ್ರಖ್ಯಾತಿಗಳಿಸಿದ್ದ ನಟಿ ಅನುಪಮ ಗೌಡ ನಾಯಕಿಯಾಗಿ ಬೆಳ್ಳೆ ತೆರೆ ಮೇಲೆ ಈ ಚಿತ್ರದ ಮೂಲಕ ಕಾಣಿಸಿಕೊಂಡಿದ್ದು ಮೊದಲ ಚಿತ್ರದಲ್ಲಿಯೇ ಅಭಿನಯ ಮೂಲಕವೇ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. 'ಆ ಕರಾಳ ರಾತ್ರಿ' ಸಿನಿಮಾ ನೋಡಿದ ಪ್ರತಿಯೊಬ್ಬರು ಚಿತ್ರದ ಬಗ್ಗೆ ಸಿನಿಮಾ ಕಥೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.
ಇತ್ತೀಚಿಗಷ್ಟೆ ಕಿಚ್ಚ ಸುದೀಪ್ 'ಆ ಕರಾಳ ರಾತ್ರಿ' ಸಿನಿಮಾವನ್ನು ಇಡೀ ಸಿನಿಮಾತಂಡದ ಜೊತೆ ಕೂತು ನೋಡಿದ್ದಾರೆ. ವಿಶೇಷ ಎಂದರೆ ಸಿನಿಮಾ ನೋಡಿದ ಕಿಚ್ಚ ಆಶ್ಚರ್ಯ ಪಟ್ಟಿದ್ದಾರೆ. ನಂತರ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಚಿತ್ರ ನೋಡಿದ ಸುದೀಪ್ ಹೇಳಿದ ಮಾತುಗಳೇನು? ಅಷ್ಟಕ್ಕೂ ಕಿಚ್ಚ ಆಶ್ಚರ್ಯ ಪಡುವಂತದ್ದು ಏನಿತ್ತು ಚಿತ್ರದಲ್ಲಿ. ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.

'ಆ ಕರಾಳ ರಾತ್ರಿ' ನೋಡಿದ ಸುದೀಪ್
ದಯಾಳ್ ಪದ್ಮನಾಭನ್ ನಿರ್ದೇಶನದ 'ಆ ಕರಾಳ ರಾತ್ರಿ' ಸಿನಿಮಾವನ್ನು ನಟ ಸುದೀಪ್ ಇಂದು ಅನುಪಮ ಗೌಡ ಹಾಗೂ ನಾಯಕ ನಟ ಜೆಕೆ ಜೊತೆಯಲ್ಲಿ ವೀಕ್ಷಣೆ ಮಾಡಿದ್ದಾರೆ. ಸಿನಿಮಾ ನೋಡಿ ಖುಷಿಯಾಗಿರುವ ಸುದೀಪ್ ಚಿತ್ರತಂಡದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಹೇಳಿದ್ದಾರೆ.

ಸುದೀಪ್ ಪ್ರಕಾರ 'ಆ ಕರಾಳ ರಾತ್ರಿ'
"ನಾನು ನೋಡಿದ ಅದ್ಬುತ ಸಿನಿಮಾ 'ಆ ಕರಾಳ ರಾತ್ರಿ'. ಸಿನಿಮಾ ಮೊದಲಿನಿಂದ ಕೊನೆಯವರೆಗೂ ಯಾವುದೇ ತಪ್ಪು ಹುಡುಕಲು ಸಾಧ್ಯವೇ ಆಗಲಿಲ್ಲ. ರಂಗಾಯಣ ರಘು ಅದ್ಬುತವಾಗಿ ಅಭಿನಯ ಮಾಡಿದ್ದಾರೆ. ಅನುಪಮ ತುಂಬಾ ಚೆನ್ನಾಗಿ ಅಭಿನಯ ಮಾಡಿದ್ದಾರೆ. ನಾನು ನಿರೀಕ್ಷೆಯನ್ನೇ ಮಾಡಿರಲಿಲ್ಲ. ಜೆಕೆ ಈ ಹಿಂದಿನ ಚಿತ್ರಗಳಿಗಿಂತಲೂ ಚೆನ್ನಾಗಿ ನಟಿಸಿದ್ದಾರೆ"

ಸಂಗೀತಕ್ಕಾಗಿ ಸಿನಿಮಾ ನೋಡಲೇಬೇಕು
"ಸಿನಿಮಾದಲ್ಲಿ ಸಂಗೀತ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಆರ್ ಆರ್ ಅದ್ಬುತವಾಗಿದೆ. ಅದಕ್ಕಾಗಿ 'ಆ ಕರಾಳ ರಾತ್ರಿ' ಚಿತ್ರವನ್ನು ನೋಡಬೇಕು. ಸಂಗೀತ ನಿರ್ದೇಶಕರು ಸಾಕಷ್ಟು ವರ್ಷದಿಂದ ಪರಿಚಯ ಆದರೆ ಈ ಚಿತ್ರದಲ್ಲಿ ಒಳ್ಳೆ ಕೆಲಸ ಮಾಡಿದ್ದಾರೆ".

ಚೆನ್ನಾಗಿರುವ ಸಿನಿಮಾ ನೋಡಿ
'ಆ ಕರಾಳ ರಾತ್ರಿ' ಸಿನಿಮಾ ಒಳ್ಳೆ ಸಿನಿಮಾ. ಈ ರೀತಿಯ ಚಿತ್ರಗಳನ್ನು ಮಿಸ್ ಮಾಡಿಕೊಳ್ಳಬೇಡಿ. ಕೆಲ ಸಿನಿಮಾಗಳು ಚೆನ್ನಾಗಿ ಇದ್ದರೂ ಥಿಯೇಟರ್ ನಲ್ಲಿ ಓಡುವುದಿಲ್ಲ. ಅದೇ ರೀತಿ 'ಆ ಕರಾಳ ರಾತ್ರಿ' ಆಗುವುದು ಬೇಡ. ಎಂದಿದ್ದಾರೆ ಕಿಚ್ಚ ಸುದೀಪ್.


Click it and Unblock the Notifications











