ಅಭಿನಯ ಚಕ್ರವರ್ತಿಯ ಹುಟ್ಟುಹಬ್ಬಕ್ಕೆ ಬಂದ ಭಾರಿ ಉಡುಗೊರೆ!

ನಟ ಸುದೀಪ್ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಕಿಚ್ಚನ ಈ ವರ್ಷದ ಬರ್ತ್ ಡೇ ವಿಶೇಷವಾಗಿ ದೊಡ್ಡ ಉಡುಗೊರೆ ಈಗ ಬಂದಿದೆ. ಅದೇನೆಂದರೆ, ಸುದೀಪ್ ನಟನೆಯ ಹೊಸ ತೆಲುಗು ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

Sudeep look from SyeRaa Narasimha Reddy is out

ಮೆಗಾ ಸ್ಟಾರ್ ಚಿರಂಜೀವಿ ಅವರ 151 ಸಿನಿಮಾ 'ಸೈರಾ ನರಸಿಂಹ ರೆಡ್ಡಿ' ಈ ಸಿನಿಮಾದ ಒಂದು ಬಹು ಮುಖ್ಯ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆ. ಸುದೀಪ್ ಹುಟ್ಟುಹಬ್ಬದ ವಿಶೇಷವಾಗಿ ಈ ಪೋಸ್ಟರ್ ಅನ್ನು ರಿಲೀಸ್ ಮಾಡಲಾಗಿದೆ. 'ಬಾಹುಬಲಿ' ಬಳಿಕ ಮತ್ತೆ ಸುದೀಪ್ ಕೂಗು ಟಾಲಿವುಡ್ ನಲ್ಲಿ ಹೆಚ್ಚಾಗಿದೆ.

ಪೋಸ್ಟರ್ ನಲ್ಲಿ ಕಪ್ಪು ಬಟ್ಟೆ ಧರಿಸಿ, ಉದ್ದನೆಯ ದಡ್ಡ ಬಿಟ್ಟು ರಾಜನಂತೆ ಸುದೀಪ್ ಅದ್ಬುತವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಅವರ ಪಾತ್ರದ ಹೆಸರನ್ನು ಪೋಸ್ಟರ್ ನಲ್ಲಿ ಬಿಟ್ಟುಕೊಟ್ಟಿಲ್ಲ. ಆದರೆ, ಸ್ವಾತಂತ್ಯ ಹೋರಾಟಗಾರ 'ಸೈರಾ ನರಸಿಂಹ ರೆಡ್ಡಿ' ಅವರ ಜೀವನ ಆಧರಿತ ಚಿತ್ರಕಥೆಯಾಗಿದ್ದು, ಇದರಲ್ಲಿ ನರಸಿಂಹ ರೆಡ್ಡಿಗೆ ಸಹಾಯ ಮಾಡುವ ರಾಜನಾಗಿ ಸುದೀಪ್ ಬಣ್ಣ ಹಚ್ಚಿದ್ದಾರಂತೆ.

Sudeep look from SyeRaa Narasimha Reddy is out

ಇನ್ನುಳಿದಂತೆ, ಚಿರಂಜೀವಿ, ಸುದೀಪ್ ಜೊತೆಯಲ್ಲಿ ನಯನತಾರ, ವಿಜಯ ಸೇತುಪತಿ, ಅಮಿತಾಬ್ ಬಚ್ಚನ್, ಹುಮಾ ಖುರೇಶಿ, ಜಗಪತಿ ಬಾಬು, ತಮನ್ನಾ ಕೂಡ ಈ ಚಿತ್ರದಲ್ಲಿ ಇದ್ದಾರೆ. ಸುರೇಂದರ್ ರೆಡ್ಡಿ ನಿರ್ದೇಶನ ಮಾಡುತ್ತಿದ್ದು, ರಾಮ್ ಚರಣ್ ತೇಜ ಬಂಡವಾಳ ಹಾಕುತ್ತಿದ್ದಾರೆ.

More from Filmibeat

English summary
Abhinaya Chakravarthy kiccha sudeep look from SyeRaa Narasimha Reddy movie is out at 6 PM today (september 1st)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X