ಕಿಚ್ಚನ ಅಭಿಮಾನಿಗಳಿಗೆ ತೆಲುಗಿನ 'ಸೈರಾ' ತಂಡದಿಂದ ಬಿಗ್ ಸರ್ಪ್ರೈಸ್
ಸುದೀಪ್ ಬರ್ತಡೇಗೆ ಕೇವಲ ಒಂದು ದಿನ ಮಾತ್ರ ಬಾಕಿ. ಇಂದು ಮಧ್ಯರಾತ್ರಿಯಿಂದಲೇ 'ಕಿಚ್ಚೋತ್ಸವ' ಆರಂಭವಾಗುತ್ತೆ. ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸ್ಯಾಂಡಲ್ ವುಡ್ ವಿಶೇಷ ಉಡುಗೊರೆಗಳನ್ನ ನೀಡಲು ಸಜ್ಜಾಗಿದೆ.
ಸುದೀಪ್ ಅಭಿನಯದ ಕನ್ನಡ ಸಿನಿಮಾಗಳ ಟೀಸರ್, ಪೋಸ್ಟರ್ ಬಿಡುಗಡೆಯಾಗುತ್ತಿದೆ. 'ಪೈಲ್ವಾನ್', 'ಕೋಟಿಗೊಬ್ಬ' ಹಾಗೂ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರಗಳಿಂದ ಕಿಚ್ಚನಿಗೆ ಬರ್ತಡೇ ಗಿಫ್ಟ್ ಇದೆ.

ಇದೀಗ, ಟಾಲಿವುಡ್ ಮಂದಿ ಕೂಡ ಸುದೀಪ್ ಹುಟ್ಟುಹಬ್ಬಕ್ಕೆ ಭರ್ಜರಿ ಸರ್ಪ್ರೈಸ್ ಕೊಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹೌದು, ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಸುದೀಪ್ ಅಭಿನಯಿಸುತ್ತಿದ್ದಾರೆ. ಸುದೀಪ್ ಬರ್ತಡೇ ವಿಶೇಷವಾಗಿ 'ಸೈರಾ' ಚಿತ್ರದಲ್ಲಿ ಸುದೀಪ್ ಪೋಸ್ಟರ್ ಮಾಡಲು ನಿರ್ಧರಿಸಿದ್ದಾರೆ.

ಇಂದು ಸಂಜೆ 6 ಗಂಟೆಗೆ ಕಿಚ್ಚ ಸುದೀಪ್ ಅವರ ಫಸ್ಟ್ ಲುಕ್ ಬಹಿರಂಗವಾಗುತ್ತಿದೆ. 'ಸೈರಾ' ಚಿತ್ರದಲ್ಲಿ ಸುದೀಪ್ ರಾಜನ ಪಾತ್ರವನ್ನ ನಿಭಾಯಿಸುತ್ತಿದ್ದು, ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ಇಂದು ಬ್ರೇಕ್ ಬೀಳಲಿದೆ.
ಸ್ವಾತಂತ್ಯ ಹೋರಾಟಗಾರ 'ಸೈರಾ ನರಸಿಂಹ ರೆಡ್ಡಿ' ಅವರ ಜೀವನ ಆಧರಿತ ಚಿತ್ರಕಥೆಯಾಗಿದ್ದು, ಇದರಲ್ಲಿ ನರಸಿಂಹ ರೆಡ್ಡಿಗೆ ಸಹಾಯ ಮಾಡುವ ರಾಜನಾಗಿ ಸುದೀಪ್ ಬಣ್ಣ ಹಚ್ಚಿದ್ದಾರಂತೆ. ಚಿರಂಜೀವಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ಇನ್ನುಳಿದಂತೆ ಚಿರಂಜೀವಿ, ಸುದೀಪ್ ಜೊತೆಯಲ್ಲಿ ನಯನತಾರ, ವಿಜಯ ಸೇತುಪತಿ, ಅಮಿತಾಬ್ ಬಚ್ಚನ್, ಹುಮಾ ಖುರೇಶಿ, ಜಗಪತಿ ಬಾಬು, ತಮನ್ನಾ ಕೂಡ ಈ ಚಿತ್ರದಲ್ಲಿ ಇದ್ದಾರೆ. ಸುರೇಂದರ್ ರೆಡ್ಡಿ ನಿರ್ದೇಶನ ಮಾಡುತ್ತಿದ್ದು, ರಾಮ್ ಚರಣ್ ತೇಜ ಬಂಡವಾಳ ಹಾಕುತ್ತಿದ್ದಾರೆ.


Click it and Unblock the Notifications











