ಈ ಚಿತ್ರಕ್ಕಾಗಿ 10 ಕೆಜಿ ತೂಕ ಇಳಿಸಿದರು ಕಿಚ್ಚ ಸುದೀಪ್

By Naveen

Recommended Video

ಈ ಸಿನೆಮಾಗ ಸುದೀಪ್ ಇಷ್ಟು ತೂಕ ಇಳಿಸಿದ್ದು ? | Filmibeat Kannada

ನಟ ಕಿಚ್ಚ ಸುದೀಪ್ ಅವರನ್ನು ಇತ್ತೀಚಿಗಿನ ಕಾರ್ಯಕ್ರಮಗಳಲ್ಲಿ ನೋಡಿದವರಿಗೆ ಯಾಕೋ ಸುದೀಪ್ ಸ್ವಲ್ಪ ತೆಳಗೆ ಕಾಣುತ್ತಾರೆ ಅನ್ನುವ ಹಾಗೆ ಅನಿಸುತ್ತಿತ್ತು. ಆದರೆ ಸುದೀಪ್ ಯಾವ ಸಿನಿಮಾಗಾಗಿ ತಮ್ಮ ತೂಕ ಕಡಿಮೆ ಮಾಡುತ್ತಿದ್ದಾರೆ ಎನ್ನುವುದು ಈಗ ತಿಳಿದಿದೆ. ಸುದೀಪ್ ಈಗ 10 ಕೆಜಿ ಕಡಿಮೆ ಆಗಿದ್ದಾರೆ.

ಸುದೀಪ್ ತಮ್ಮ ದೇಹದ ತೂಕ ಕಡಿಮೆ ಮಾಡಿಕೊಂಡಿರುವುದು 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾಗಾಗಿ. ಈ ಸಿನಿಮಾದಲ್ಲಿ ನಟ ಅಂಬರೀಶ್ ನಾಯಕನಾಗಿದ್ದು, ಅಂಬಿ ಅವರ ಸಣ್ಣ ವಯಸ್ಸಿನ ಪಾತ್ರವನ್ನು ಸುದೀಪ್ ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ಅವರ ಲುಕ್ ಒಬ್ಬ ಸಾಮಾನ್ಯ ಹುಡುಗನ ರೀತಿ ಇರಲಿದೆ. ಈ ಪಾತ್ರಕ್ಕಾಗಿಯೇ ಸುದೀಪ್ ಡಯಟ್ ಮಾಡಿ ತೂಕವನ್ನು ತಗ್ಗಿಸಿದ್ದಾರೆ.

'ನಂ 73 ಶಾಂತಿನಿವಾಸ' ಚಿತ್ರದ ಬಳಿಕ ಬಂದ ಎಲ್ಲ ಸಿನಿಮಾದಲ್ಲಿ ಸುದೀಪ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು. 'ಮಾಣಿಕ್ಯ', 'ರನ್ನ', 'ಹೆಬ್ಬುಲಿ' ಸಿನಿಮಾಗಳಲ್ಲಿ ಅಂತು ಕಿಚ್ಚ ಕಣ್ಣುಕುಕ್ಕುವ ಹಾಗೆ ಬಟ್ಟೆ ತೊಟ್ಟಿದ್ದರು. ಆದರೆ 11 ವರ್ಷದ ನಂತರ ಮತ್ತೆ ಸುದೀಪ್ ಈಗ ಸಿಂಪಲ್ ಆಗಿದ್ದಾರೆ. ಉಳಿದಂತೆ, ಚಿತ್ರದಲ್ಲಿ ಅಂಬರೀಶ್, ಸುದೀಪ್, ಶೃತಿ ಹರಿಹರನ್, ಸುಹಾಸಿನಿ ಹಾಗೂ ಗೀತಾ ಭಾರತಿ ಭಟ್ ನಟಿಸಿದ್ದಾರೆ.

sudeep lost 10 kg weight for Ambi Ninge Vaiyasayitho movie

ಅಂದಹಾಗೆ, 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ ಶೂಟಿಂಗ್ ಸದ್ಯ ನಡೆಯುತ್ತಿದೆ. ಸಿನಿಮಾದಲ್ಲಿ ಅಂಬರೀಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ 'ಅಂಬಿ ನಿಂಗ್ ವಯಸ್ಸಾಯ್ತೋ' ತಯಾರಾಗುತ್ತಿದ್ದು, ಜ್ಯಾಕ್ ಮಂಜು ನಿರ್ಮಾಣ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕೆ ಇರಲಿದೆ. ತಮಿಳಿನ 'ಪವರ್ ಪಾಂಡಿ' ಚಿತ್ರದ ರಿಮೇಕ್ ಇದಾಗಿದ್ದು, ಗುರುದತ್ ನಿರ್ದೇಶನ ಮಾಡುತ್ತಿದ್ದಾರೆ.

More from Filmibeat

English summary
Kannada actors sudeep lost 10 kg weight for 'Ambi Ninge Vaiyasayitho' movie. The movie is a remake of tamil movie 'Power Pandi'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X