»   » ಬಾಕ್ಸ್ ಆಫೀಸಲ್ಲಿ ಭರ್ಜರಿ ಬೆಳೆ ತೆಗೆದ ಕಿಚ್ಚ 'ಮಾಣಿಕ್ಯ'

ಬಾಕ್ಸ್ ಆಫೀಸಲ್ಲಿ ಭರ್ಜರಿ ಬೆಳೆ ತೆಗೆದ ಕಿಚ್ಚ 'ಮಾಣಿಕ್ಯ'

By: ಉದಯರವಿ
Subscribe to Filmibeat Kannada

ಸುದೀಪ್ ನಟಿಸಿ, ನಿರ್ದೇಶಿಸಿರುವ ಮಾಣಿಕ್ಯ ಚಿತ್ರ ಬಾಕ್ಸ್ ಆಫೀಸಲ್ಲಿ ಮೊದಲ ದಿನವೇ ಪೈಸಾ ವಸೂಲಿ ಮಾಡಿದೆ. ನಿರ್ಮಾಪಕರ ಭಾಗದ ಪಾಲನ್ನು ಮೊದಲ ದಿನವೆ ಗಳಿಸಿದೆ. ಅಂದರೆ ಫಸ್ಟ್ ಡೇ ಕಲೆಕ್ಷನ್ ರು.3 ಕೋಟಿ ಚಿಲ್ಲರೆ.

ತೆಲುಗಿನ ಯಶಸ್ವಿ ಚಿತ್ರ 'ಮಿರ್ಚಿ' ರೀಮೇಕ್ ಆದ ಮಾಣಿಕ್ಯವನ್ನು ಸುದೀಪ್ ಅಭಿಮಾನಿಗಳು ಕಣ್ಣಿಗೆ ಒತ್ತಿಕೊಂಡಿದ್ದಾರೆ. ಕಾರ್ಮಿಕರ ದಿನಾಚರಣೆ ಮೇ 1 ರಂದು ಚಿತ್ರ ತೆರೆಕಂಡಿದ್ದು ಚಿತ್ರದ ಭರ್ಜರಿ ಗಳಿಕೆಗೆ ನಾಂದಿ ಹಾಡಿದೆ. [ಮಾಣಿಕ್ಯ ಚಿತ್ರವಿಮರ್ಶೆ]

ವಾರಾಂತ್ಯ ಜೊತೆಗೆ ರಜಾ ದಿನಗಳ ಕಾರಣ ಗಲ್ಲಾಪೆಟ್ಟಿಗೆಯಲ್ಲಿ ಇನ್ನಷ್ಟು ಚಿತ್ರ ಸದ್ದು ಮಾಡುವ ಎಲ್ಲಾ ಸೂಚನೆಗಳನ್ನೂ ನೀಡಿದೆ. ಮೊದಲ ದಿನ ಅಂದುಕೊಂಡಿದ್ದಕ್ಕಿಂತಲೂ ಕಲೆಕ್ಷನ್ ಶೇ.30-35ರಷ್ಟು ಹೆಚ್ಚಾಗಿಯೇ ಆಗಿದೆ ಎನ್ನುತ್ತವೆ ಮೂಲಗಳು.

ಸರಿಸುಮಾರು ರು.18 ಕೋಟಿ ಬಜೆಟ್ ಚಿತ್ರ

ಸರಿಸುಮಾರು ರು.18 ಕೋಟಿ ಬಜೆಟ್ ನಲ್ಲಿ ನಿರ್ಮಿಸುದ ಚಿತ್ರವನ್ನು 259 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಒಟ್ಟಾರೆಯಾಗಿ ಗಳಿಕೆ ಇದೇ ರೀತಿ ಮುಂದ್ದುವರಿದರೆ ಮಾಣಿಕ್ಯ ಚಿತ್ರ ಹೊಸ ದಾಖಲೆ ಬರೆಯುವುದರಲ್ಲಿ ಯಾವುದೇ ಅನುಮಾನ ಉಳಿದಿಲ್ಲ.

ಬಜೆಟ್ ನ ನಾಲ್ಕನೇ ಒಂದರಷ್ಟು ವಸೂಲಿ

ಈ ಚಿತ್ರವನ್ನು ಎಂ.ಎನ್.ಕುಮಾರ್, ಕಿಚ್ಚ ಕ್ರಿಯೇಷನ್ಸ್ ಹಾಗೂ ಕೊಲ್ಲಾ ಪ್ರವೀಣ್ ಎಂಟರ್ ಟೈನ್ ಮೆಂಟ್ ಜಂಟಿಯಾಗಿ ನಿರ್ಮಿಸಲಾಗಿದೆ. ಈಗಾಗಲೆ ಸ್ಯಾಟಲೈಟ್ ರೈಟ್ಸ್ ನಲ್ಲಿ ಚಿತ್ರದ ಬಜೆಟ್ ನ ನಾಲ್ಕನೇ ಒಂದರಷ್ಟು ವಸೂಲಿಯಾಗಿದೆ.

'ಮಾಣಿಕ್ಯ' ಕಮರ್ಷಿಯಲಿ ಸೇಫ್

ಆ ಪ್ರಕಾರ ರು.5.5 ಕೋಟಿ ಟಿವಿ ರೈಟ್ಸ್ ಸುವರ್ಣ ವಾಹಿನಿ ಪಾಲಾಗಿದೆ ಎನ್ನುತ್ತವೆ ಮೂಲಗಳು. ಇನ್ನು ಹಿಂದಿ ಡಬ್ಬಿಂಗ್ ರೈಟ್ಸ್ ನಲ್ಲಿ ರು.1.5 ಕೋಟಿ ವಸೂಲಿಯಾಗಿದೆಯಂತೆ. ತಮಿಳು, ತೆಲುಗು ಹಾಗೂ ಮಲಯಾಳಂ ಡಬ್ಬಿಂಗ್ ರೈಟ್ಸ್ ತಲಾ ರು.75 ಲಕ್ಷಕ್ಕೆ ಸೋಲ್ಡ್ ಔಟ್. ಅಲ್ಲಿಗೆ 'ಮಾಣಿಕ್ಯ' ಕಮರ್ಷಿಯಲಿ ಸೇಫ್.

ರು.10 ಕೋಟಿ ಪ್ಲಸ್ ಕಲೆಕ್ಷನ್ ನಿರೀಕ್ಷೆ

ಇನ್ನು ಚಿತ್ರ ಬಿಡುಗಡೆಯಾದ ಮೇಲೆ ಒಂದೇ ವಾರದಲ್ಲಿ ರು.10 ಕೋಟಿ ಪ್ಲಸ್ ಕಲೆಕ್ಷನ್ ಮಾಡುತ್ತದೆ ಎಂದು ಲೆಕ್ಕಾಚಾರ ಮಾಡಲಾಗಿದೆ. ಅಂದುಕೊಂಡಂತೆ ಲೆಕ್ಕಾಚಾರ ನಡೆದರೆ ಒಂದೇ ವಾರದಲ್ಲಿ ಚಿತ್ರದ ಬಂಡವಾಳ ವಾಪಸ್. ಆ ಬಳಿಕ ಬರುವುದೇನಿದ್ದರೂ ಲಾಭದ ಲೆಕ್ಕಾಚಾರ.

ಚಿತ್ರದ ಅಳಿದುಳಿದ ರೈಟ್ಸ್ ವಿವರ

ಇನ್ನು ಚಿತ್ರದ ಆಡಿಯೋ ರೈಟ್ಸ್ ಆನಂದ್ ಆಡಿಯೋ ಪಾಲಾಗಿದೆ. ರು.25 ಲಕ್ಷಕ್ಕೆ ಮಾರಾಟವಾಗಿದೆ. ಚಿತ್ರದ ಡಿವಿಡಿ ರೈಟ್ಸ್ ಗೂ ಅಷ್ಟೇ ಮೊತ್ತ ಸಿಕ್ಕಿದೆ ಎನ್ನುತ್ತವೆ ಮೂಲಗಳು. ಅಳಿದುಳಿದ ರೈಟ್ಸ್ ನಲ್ಲಿ ರು.25 ಲಕ್ಷ ಬಂದಿದೆಯಂತೆ.

ಒಟ್ಟು 35 ಕಲಾವಿದರ ಭರ್ಜರಿ ಪ್ಯಾಕೇಜ್

ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಒಟ್ಟು 35 ಮಂದಿ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ರಮ್ಯಾ ಕೃಷ್ಣ, ವರಲಕ್ಷ್ಮಿ ಶರತ್ ಕುಮಾರ್, ಸಾಧುಕೋಕಿಲ, ಶೋಭರಾಜ್, ರವಿಶಂಕರ್ ಮುಂತಾದ ಕಲಾವಿದರು ಇದ್ದಾರೆ.

English summary
Kichcha Sudeep directed Kannada movie Maanikya box office report. The movie managed to recover a share of Rs 3 crore for the producer on the first day of release itself.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada