»   » ಓಮನ್ ರಾಜಧಾನಿ ಮಸ್ಕತ್ ನಲ್ಲಿ ಸುದೀಪ್ 'ಮಾಣಿಕ್ಯ'

ಓಮನ್ ರಾಜಧಾನಿ ಮಸ್ಕತ್ ನಲ್ಲಿ ಸುದೀಪ್ 'ಮಾಣಿಕ್ಯ'

Posted By:
Subscribe to Filmibeat Kannada

ಇದೇ ಮೊದಲ ಬಾರಿಗೆ ಅರಬ್ ರಾಷ್ಟ್ರ ಓಮನ್ ನಲ್ಲಿ ಕನ್ನಡ ಚಿತ್ರವೊಂದು ತೆರೆಕಾಣುತ್ತಿದೆ. ಕಿಚ್ಚ ಸುದೀಪ್ ಅಭಿನಯದ 'ಮಾಣಿಕ್ಯ' ಚಿತ್ರ ಓಮನ್ ರಾಜಧಾನಿ ಮಸ್ಕತ್ ನಲ್ಲಿ ತೆರೆಕಾಣುತ್ತಿರುವ ಮೊದಲ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗುತ್ತಿದೆ.

ಮಲ್ಲ ರವಿಚಂದ್ರನ್ ಹಾಗೂ ನಲ್ಲ ಸುದೀಪ್ ಕಾಂಬಿನೇಷನಲ್ಲಿ ಬಂದಂತಹ ಈ ಚಿತ್ರ 25 ಯಶಸ್ವಿ ದಿನಗಳನ್ನು ಪೂರೈಸಿದ್ದು ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡಿದಂತಹ ಚಿತ್ರ. ಈಗ ಮಸ್ಕತ್ ನಲ್ಲಿರುವ ಕನ್ನಡಿಗರನ್ನು ರಂಜಿಸಲು ಮೇ.30ರಂದು ಅಲ್ಲಿ ತೆರೆಕಾಣುತ್ತಿದೆ. [ಮಾಣಿಕ್ಯ ಚಿತ್ರವಿಮರ್ಶೆ]


ಮೇ.24ರಿಂದಲೇ ಟಿಕೆಟ್ ಗಳನ್ನು ಮಾರಾಟ ಮಾಡಲಾಗುತ್ತಿದೆ. ಸರಿಸುಮಾರು ರು.18 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ ಮಾಣಿಕ್ಯ ಚಿತ್ರ ಪೈಸಾ ವಸೂಲಿ ಮಾಡಿದೆ. ಈ ಚಿತ್ರವನ್ನು ಎಂ.ಎನ್.ಕುಮಾರ್, ಕಿಚ್ಚ ಕ್ರಿಯೇಷನ್ಸ್ ಹಾಗೂ ಕೊಲ್ಲಾ ಪ್ರವೀಣ್ ಎಂಟರ್ ಟೈನ್ ಮೆಂಟ್ ಜಂಟಿಯಾಗಿ ನಿರ್ಮಿಸಲಾಗಿದೆ. ಈಗಾಗಲೆ ಸ್ಯಾಟಲೈಟ್ ರೈಟ್ಸ್ ನಲ್ಲಿ ಚಿತ್ರದ ಬಜೆಟ್ ನ ನಾಲ್ಕನೇ ಒಂದರಷ್ಟು ವಸೂಲಿಯಾಗಿದೆ.

ಮೊದಲ 4 ದಿನಗಳಲ್ಲೇ 9.5 ಕೋಟಿ ಗಳಿಸಿದ್ದ ಚಿತ್ರ, 3 ವಾರದ ಬಳಿಕ 21.3 ಕೋಟಿ ಗಳಿಸಿತ್ತು. ಇದು ಕನ್ನಡ ಚಿತ್ರವೊಂದು ಗಳಿಸಿದ ಗರಿಷ್ಠ ಗಳಿಕೆ ಎನ್ನಲಾಗಿದೆ. ಅಲ್ಲದೇ, ಚಿತ್ರದ ಸ್ಯಾಟಲೈಟ್, ಡಬ್ಬಿಂಗ್ ಮತ್ತು ಇತರೆ ಹಕ್ಕುಗಳು 8.5 ಕೋಟಿಗೆ ಮಾರಾಟವಾಗಿವೆ. ತೆಲುಗಿನ ಮೂಲ ಚಿತ್ರ 'ಮಿರ್ಚಿ'ಗೆ ಹೋಲಿಸಿದರೆ ಮಾಣಿಕ್ಯ ಕಲೆಕ್ಷನ್ ಜಾಸ್ತಿ ಎನ್ನುತ್ತವೆ ಮೂಲಗಳು. (ಏಜೆನ್ಸೀಸ್)

English summary
Kannada movie 'Maanikya' starring Sudeep and Ravichandran will be releasing in Oman, Muscut on 30th May, 2014. The film is a remake of the Telugu film Mirchi (2013) which was directed and written by Koratala Siva.
Please Wait while comments are loading...