ಮತ್ತೆ ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ ಕಿಚ್ಚ ಸುದೀಪ್ ರಾಗಿಣಿ!
Recommended Video

ನಟ ಸುದೀಪ್ ಮತ್ತು ರಾಗಿಣಿ ಜೋಡಿ ಕನ್ನಡ ಚಿತ್ರರಂಗದ ಬೆಸ್ಟ್ ಜೋಡಿಗಳಲ್ಲಿ ಒಂದು. ಸುದೀಪ್ ಎತ್ತರಕ್ಕೆ ಸರಿ ಹೊಂದುವ ಸ್ಯಾಂಡಲ್ ವುಡ್ ನಟಿ ಅಂದರೆ ಅದು ರಾಗಿಣಿ. ಮೊದಲು 'ವೀರ ಮದಕರಿ' ಸಿನಿಮಾ ಮಾಡಿ ಗೆದ್ದ ಈ ಜೋಡಿ 'ಕೆಂಪೇಗೌಡ' ಸಿನಿಮಾದಲ್ಲಿಯೂ ಒಟ್ಟಿಗೆ ನಟಿಸಿತ್ತು.
ಆದರೆ ಈಗ 'ಕೆಂಪೇಗೌಡ' ಸಿನಿಮಾದ ನಂತರ ಒಂದೇ ಚಿತ್ರದಲ್ಲಿ ಸುದೀಪ್ ಮತ್ತು ರಾಗಿಣಿ ಇಬ್ಬರು ನಟಿಸುತ್ತಿದ್ದಾರೆ. ಆದರೆ ಈ ಇಬ್ಬರು ಜೋಡಿಯಾಗಿ ಚಿತ್ರದಲ್ಲಿ ನಟಿಸುತ್ತಿಲ್ಲ. ರಾಗಿಣಿ ಅವರ ಹೊಸ ಸಿನಿಮಾ 'ಕಿಚ್ಚು' ಚಿತ್ರದಲ್ಲಿ ಸುದೀಪ್ ಅತಿಥಿ ಪಾತ್ರ ಮಾಡಿದ್ದಾರೆ. ಸಿನಿಮಾದಲ್ಲಿ ಡಾಕ್ಟರ್ ಪಾತ್ರವನ್ನು ಸುದೀಪ್ ನಿರ್ವಹಿಸಿದ್ದಾರೆ.

ರಾಗಿಣಿ ನಟನೆಯ 'ಕಿಚ್ಚು' ಸಿನಿಮಾ ಶುರುವಾಗಿ ವರ್ಷಗಳೆ ಕಳೆದಿತ್ತು. ಆದರೆ ಆ ಸಿನಿಮಾದ ಸುದ್ದಿ ಇಷ್ಟು ದಿನ ಇರಲಿಲ್ಲ. ಈಗ ಈ ಚಿತ್ರ ಮತ್ತೆ ಸುದ್ದಿ ಮಾಡಿದೆ. ಈ ಸಿನಿಮಾದ ವಿಶೇಷ ಪಾತ್ರದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದಾರೆ. 'ಕಿಚ್ಚು' ಒಂದು ವಿಭಿನ್ನ ಸಿನಿಮಾವಾಗಿದ್ದು, ಗ್ಲಾಮರ್ ಕ್ವೀನ್ 'ರಾಗಿಣಿ' ಇಲ್ಲಿ ಡಿ ಗ್ಲಾಮರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ ನಿಧನರಾದ ನಟ ಧ್ರುವ ಸಿನಿಮಾದ ಹೀರೋ ಆಗಿದ್ದಾರೆ.
ಉಳಿದಂತೆ 'ಕಿಚ್ಚು' ಸಿನಿಮಾದಲ್ಲಿ ನಟ ಸಾಯಿ ಕುಮಾರ್ ಪೊಲೀಸ್ ಅಧಿಕಾರಿಯಾಗಿದ್ದಾರೆ. ಪ್ರದೀಪ್ ರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ನೀಡಿದ್ದು, ಸದ್ಯದಲ್ಲಿಯೇ ಹಾಡುಗಳು ರಿಲೀಸ್ ಆಗಲಿದೆ.


Click it and Unblock the Notifications











