ಪ್ರದೀಪ್ 'Bossism' ಕೇಕ್ ವಿವಾದಕ್ಕೆ ಕೇಕ್ ಕತ್ತರಿಸಿ ದರ್ಶನ್ ಫ್ಯಾನ್ಸ್ ತಿರುಗೇಟು
ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ನಟರ ಅಭಿಮಾನಿಗಳ ನಡುವೆ ಕೆಸರೆರಚಾಟ ಹೊಸದೇನು ಅಲ್ಲ. ಇತ್ತೀಚಿನ ವರ್ಷಗಳಲ್ಲಿ ಸೋಶಿಯಲ್ ಮೀಡಿಯಾಗೆ ಫ್ಯಾನ್ಸ್ ವಾರ್ ಶಿಫ್ಟ್ ಆಗಿದೆ. 'ಮ್ಯಾಕ್ಸ್' ಸಕ್ಸಸ್ ಬೆನ್ನಲ್ಲೇ ನಟ ಪ್ರದೀಪ್ ಮಾಡಿದ್ದ ಪೋಸ್ಟ್ ಸಖತ್ ವೈರಲ್ ಆಗಿತ್ತು. ಅದರಲ್ಲಿ ಬರೆಸಿದ್ದ ಸಾಲುಗಳು ದರ್ಶನ್ ಅಭಿಮಾನಿಗಳನ್ನು ಕೆರಳಿಸಿತ್ತು.
'ಮ್ಯಾಕ್ಸ್' ಸಿನಿಮಾ ಸಕ್ಸಸ್ ಸಂಭ್ರಮದಲ್ಲಿ 'ಬಾಸಿಸಂ ಕಾಲ ಮುಗಿಯಿತು, ಮ್ಯಾಕ್ಸಿಮಮ್ ಮಾಸ್ ಕಾಲ ಶುರುವಾಯ್ತು' ಎಂದು ಬರೆಸಿದ್ದ ಕೇಕ್ ಅನ್ನು ನಟ ಸುದೀಪ್ ಕಟ್ ಮಾಡಿದ್ದರು. ನಟ ಪ್ರದೀಪ್ ಈ ರೀತಿ ಬರೆಸಿದ್ದ ಕೇಕ್ ಅನ್ನು ಸುದೀಪ್ ಮನೆಗೆ ಕೊಂಡೊಯ್ದಿದ್ದರು. ಆದರೆ ಅದಕ್ಕೇ ಏನೇನೋ ಲಿಂಕ್ ಕೊಟ್ಟು ಕೆಲವರು ಟ್ರೋಲ್ ಮಾಡಿದ್ದರು. ಬಳಿಕ ಪ್ರದೀಪ್ ಅದಕ್ಕೆ ಸ್ಪಷ್ಟನೆ ಸಹ ನೀಡಿದ್ದರು.

ಇದೀಗ 'ಬಾಸಿಸಂ' ಕೇಕ್‌ಗೆ ತಿರುಗೇಟು ಕೊಟ್ಟು ದರ್ಶನ್ ಫ್ಯಾನ್ಸ್ ಕೇಕ್ ಕತ್ತರಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ದರ್ಶನ್ ಅವರನ್ನು ಬಾಸ್ ಎಂದು ಮೆರೆಸುತ್ತಾರೆ. ಡಿಬಾಸ್ ಎಂದೇ ಕರೆಯುತ್ತಾರೆ. ಸುದೀಪ್ ಕಟ್ ಮಾಡಿದ್ದ ಕೇಕ್ ಮೇಲೆ 'ಬಾಸಿಸಂ' ಎಂದು ಬರೆದಿದ್ದು ನೋಡಿ ಇದು ದರ್ಶನ್‌ಗೆ ಟಾಂಗ್ ಕೊಟ್ಟಿರುವುದು ಎಂದು ಕೆಲವರು ಅರ್ಥೈಸಿಕೊಂಡಿದ್ದಾರೆ. ಸ್ವತಃ ಪ್ರದೀಪ್ ಸ್ಪಷ್ಟನೆ ಕೊಟ್ಟರೂ ಈ ವಿವಾದ ತಣ್ಣಗಾಗುತ್ತಿಲ್ಲ.
'ಕಾಟೇರ' ಸಿನಿಮಾ ತೆರೆಕಂಡು ಒಂದು ವರ್ಷ ಪೂರೈಸಿದೆ. ಈ ಸಂಭ್ರಮದಲ್ಲಿ ಅತ್ತಿಬೆಲೆಯಲ್ಲಿರುವ ದರ್ಶನ್ ಅಭಿಮಾನಿಗಳ ಸಂಘದವರು ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಈ ವೇಳೆ ಕೇಕ್ ಮೇಲೆ ಬರೆಸಿರುವ ಸಾಲುಗಳು ವೈರಲ್ ಆಗುತ್ತಿದೆ. ಇದಕ್ಕೆ ಸುದೀಪ್ ಫ್ಯಾನ್ಸ್ ಚಕಾರ ಎತ್ತಿದ್ದಾರೆ. ಯಾರಿಗೋ ತಿರುಗೇಟು ಕೊಡಲು ಪ್ರದೀಪ್ ಈ ರೀತಿ ಕೇಕ್ ಮೇಲೆ ಬರೆಸಲಿಲ್ಲ. ನೀವೇ ಏನೇನೋ ಊಹಿಸಿಕೊಂಡು ಸುಮ್ಮನೆ ಕಿರಿಕ್ ಮಾಡಬೇಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ವಿಜಯ್ ಕಾರ್ತಿಕೇಯನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಮ್ಯಾಕ್ಸ್' ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಮುಗಿ ಬೀಳುತ್ತಿದ್ದಾರೆ. ತೆಲುಗು, ತಮಿಳಿಗೂ ಡಬ್ ಆಗಿ ಸಿನಿಮಾ ಸದ್ದು ಮಾಡ್ತಿದೆ. ಇತ್ತೀಚೆಗೆ ಚಿತ್ರತಂಡ ಸಕ್ಸಸ್ ಮೀಟ್ ಮಾಡಿ ಸಂತಸ ಹಂಚಿಕೊಂಡಿದೆ.
ಸಾಕಷ್ಟು ಜನ 'ಮ್ಯಾಕ್ಸ್' ಸಿನಿಮಾ ಸಕ್ಸಸ್ ಸಂಭ್ರಮದಲ್ಲಿ ಇದೆಲ್ಲಾ ಬೇಕಿರಲಿಲ್ಲ ಎಂದು ನಟ ಪ್ರದೀಪ್‌ಗೆ ಕಿವಿಮಾತು ಹೇಳುತ್ತಿದ್ದಾರೆ. ಆದರೂ ಈ ವಿಚಾರ ಭಾರೀ ಸದ್ದು ಮಾಡಿದೆ. ಇನ್ನು ಆ ಕೇಕ್ ಬಗ್ಗೆ ಮಾತನಾಡಿದ್ದ ಪ್ರದೀಪ್ "ಯಾವ ನಟನಿಗೂ ಹೋಲಿಕೆ ಮಾಡಿ ಕೇಕ್ ಮೇಲೆ ಆ ರೀತಿ ಬರೆಸಲಿಲ್ಲ. 'ಮ್ಯಾಕ್ಸ್' ಚಿತ್ರದ ಹಾಡಿನ ಸಾಲನ್ನು ಅನುವಾದಿಸಿ ಆ ರೀತಿ ಬರೆಸಿದ್ದು. ಎಲ್ಲಾ ಅಭಿಮಾನಿಗಳಿಗೆ ತನ್ನ ನಟನೇ ಬಾಸ್, ಆ ಪದ ಯಾವ ನಟನಿಗೂ ಸೀಮಿತ ಅಲ್ಲ, ಯಾರನ್ನು ಉದ್ದೇಶಿಸಿ ಬರೆಸಿದ ಸಾಲು ಅದಲ್ಲ" ಎಂದಿದ್ದರು.
ಕಳೆದ ವರ್ಷ ಡಿಸೆಂಬರ್ 29ಕ್ಕೆ ಬಿಡುಗಡೆಯಾಗಿದ್ದ 'ಕಾಟೇರ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಪ್ರೇಕ್ಷಕರ ಬರ ಎದುರಿಸಿದ್ದ ಚಿತ್ರಮಂದಿರಗಳು ಮತ್ತೆ ಹೌಸ್‌ಫುಲ್ ಆಗುವಂತೆ ಮಾಡಿತ್ತು. ತರುಣ್ ಸುಧೀರ್ ನಿರ್ದೇಶನದ ಹಳ್ಳಿ ಸೊಗಡಿನ ಚಿತ್ರದಲ್ಲಿ ಕುಲುಮೆ ಕೆಲಸ ಮಾಡುವ 'ಕಾಟೇರ'ನಾಗಿ ದರ್ಶನ್ ನಟಿಸಿದ್ದರು. ರಾಕ್‌ಲೈನ್ ವೆಂಕಟೇಶ್ ಚಿತ್ರಕ್ಕೆ ಹಣ ಹೂಡಿದ್ದರು. ಜಡೇಶ್ ಕಥೆ, ಮಾಸ್ತಿ ಸಂಭಾಷಣೆ ಚಿತ್ರಕ್ಕೆ ಪ್ಲಸ್ ಆಗಿತ್ತು. 1 ಕೋಟಿಗೂ ಅಧಿಕ ಟಿಕೆಟ್ ಮಾರಾಟ ಆಗಿ ಸಿನಿಮಾ ದಾಖಲೆ ಬರೆದಿತ್ತು.
ಒಂದ್ಕಾಲದಲ್ಲಿ ದರ್ಶನ್ ಹಾಗೂ ಸುದೀಪ್ ಆತ್ಮೀಯ ಸ್ನೇಹಿತರಾಗಿದ್ದರು. ಆಗ ಅಭಿಮಾನಿಗಳು ಕೂಡ ಒಟ್ಟೊಟ್ಟಿಗೆ ಇಬ್ಬರನ್ನು ಬೆಂಬಲಿಸಿದ್ದರು. ಬಳಿಕ ಯಾವುದೋ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರಾಗಿದ್ದರು. ಬಳಿಕ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. ಆ ಬಳಿಕ ಇಬ್ಬರೂ ಅಭಿಮಾನಿಗಳ ನಡುವೆ ಕಿರಿಕಿರಿ ಶುರುವಾಯಿತು. ಸೋಶಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ನಡೆಯುತ್ತಲೇ ಇರುತ್ತದೆ.
ದರ್ಶನ್ ಸಿನಿಮಾವನ್ನು ಸುದೀಪ್ ಅಭಿಮಾನಿಗಳು ಟ್ರೋಲ್ ಮಾಡುವುದು, ಅದೇ ರೀತಿ ಸುದೀಪ್ ಸಿನಿಮಾವನ್ನು ದರ್ಶನ್ ಅಭಿಮಾನಿಗಳು ಟೀಕಿಸುವುದು ನಡೆಯುತ್ತಲೇ ಇದೆ. ಇದು ಅನಾವಶ್ಯಕವಾಗಿ ಸಿನಿಮಾಗಳ ಗಳಿಕೆ ಮೇಲೆ ಪರಿಣಾಮ ಬೀರುವಂತಾಗಿದೆ. 'ಮ್ಯಾಕ್ಸ್' ಸಿನಿಮಾ ಬಗ್ಗೆಯೂ ನೆಗೆಟಿವ್ ಹಬ್ಬಿಸುವ ಕೆಲಸವನ್ನು ಕೆಲವರು ಮಾಡಿದ್ದರು. ಆದರೆ ಅದನ್ನೆಲ್ಲಾ ಮೀರಿ ಸಿನಿಮಾ ಗೆದ್ದಿದೆ. ಬಾಕ್ಸಾಫೀಸ್ ಶೇಕ್ ಮಾಡ್ತಿದೆ.


Click it and Unblock the Notifications











