For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಪ್ರಕಾರ ಸ್ಯಾಂಡಲ್ ವುಡ್ ಗೆ ಈ ನಟ 'ಬಾಸ್' ಆಗ್ಬೇಕಂತೆ.!

  |
  ಸುದೀಪ್ ಪ್ರಕಾರ ಸ್ಯಾಂಡಲ್ ವುಡ್ ಗೆ ಈ ನಟ 'ಬಾಸ್' ಆಗ್ಬೇಕಂತೆ.! | FILMIBEAT KANNADA

  ಅಂಬರೀಶ್ ಮನೆ ಕನ್ನಡ ಚಿತ್ರರಂಗಕ್ಕೆ ಹೆಡ್ ಆಫೀಸ್ ಆಗಿತ್ತು. ಚಿತ್ರರಂಗಕ್ಕೆ, ಕಲಾವಿದರಿಗೆ, ನಿರ್ಮಾಪಕ, ನಿರ್ದೇಶಕ ಹೀಗೆ ಇಂಡಸ್ಟ್ರಿಯಲ್ಲಿ ಯಾರಿಗೆ ಸಮಸ್ಯೆಯಾದರು, ಅಂತಿಮವಾಗಿ ಅಂಬಿ ಮನೆಯಲ್ಲಿ ಬಗೆಹರಿಯುತ್ತಿತ್ತು. ಡಾ ರಾಜ್-ವಿಷ್ಣು ನಂತರ ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ 'ಯಜಮಾನ'ರಾಗಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಈಗಿಲ್ಲ.

  ಇದೀಗ, ಅಂಬಿ ನಂತರ ಆ ಸ್ಥಾನದಲ್ಲಿ ಯಾರು ಕೂರಲಿದ್ದಾರೆ. ಸಮಸ್ಯೆ, ಅಭಿವೃದ್ದಿ ಬಗ್ಗೆ ಯಾರು ಮುಂದೆ ಕರೆದುಕೊಂಡು ಹೋಗಲಿದ್ದಾರೆ ಎಂಬ ಕುತೂಹಲ, ಚರ್ಚೆ ಅಭಿಮಾನಿ ವಲಯದಲ್ಲಿ ಹಾಗೂ ಇಂಡಸ್ಟ್ರಿಯಲ್ಲೂ ಕೇಳಿ ಬರ್ತಿದೆ.

  ಸ್ಯಾಂಡಲ್ ವುಡ್ ಗೆ ಮುಂದಿನ 'ಬಾಸ್' ಯಾರು.?ಸ್ಯಾಂಡಲ್ ವುಡ್ ಗೆ ಮುಂದಿನ 'ಬಾಸ್' ಯಾರು.?

  ಶಿವರಾಜ್ ಕುಮಾರ್, ರವಿಚಂದ್ರನ್, ಜಗ್ಗೇಶ್, ಸುದೀಪ್, ದರ್ಶನ್ ಸೇರಿದಂತೆ ಹಲವರ ಹೆಸರು ಈ ಸ್ಥಾನಕ್ಕೆ ಚರ್ಚೆಯಾದರು, ಅಂಬಿಯ ಜಾಗವನ್ನ ಯಾರೂ ತುಂಬಲು ಸಾಧ್ಯವಿಲ್ಲ ಎನ್ನುವುದು ಸ್ವತಃ ಈ ನಟರ ಅಭಿಪ್ರಾಯ. ಈ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದು, ಅವರ ಪ್ರಕಾರ, ಈ ನಾಯಕರು ಈ ಜವಾಬ್ದಾರಿಯನ್ನ ತೆಗೆದುಕೊಳ್ಳಬೇಕು ಎಂದಿದ್ದಾರೆ. ಯಾರದು? ಮುಂದೆ ಓದಿ.....

  ನಾವು ಯಾರು ಅರ್ಹರಲ್ಲ

  ನಾವು ಯಾರು ಅರ್ಹರಲ್ಲ

  ಆ ಸ್ಥಾನಕ್ಕಾಗಿ ಸುದೀಪ್ ಅವರ ಕಡೆ ಬಹಳಷ್ಟು ಜನ ಬೆರಳು ತೋರಿಸ್ತಾರೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುದೀಪ್ ''ಸತ್ಯವಾಗಲು ನಾವು ಯಾರೂ ಆ ಸ್ಥಾನಕ್ಕೆ ಅರ್ಹರಲ್ಲ. ಅದರ ಅಕ್ಕಪಕ್ಕನೂ ಇಲ್ಲ. ಅವರು ಹಿರಿಯರು ಅಥವಾ ನಟರು ಮಾತ್ರವಲ್ಲ ತುಂಬಾ ಗೌರವ ಹೊಂದಿದ್ದ ಹಾಗೂ ಸಂಪಾದಿಸಿದ್ದ ವ್ಯಕ್ತಿ. ಅವರ ಜಾಗ ತುಂಬಲು ಸಾಧ್ಯವಿಲ್ಲ. ಆದ್ರೂ ಪ್ರಪಂಚ ನಡೆಯಬೇಕು'' ಎಂದು ಅಂಬಿಯ ಬಗ್ಗೆ ನೆನೆದರು.

  ಅಭಿನಯ ಚಕ್ರವರ್ತಿ ಅನ್ನಿಸಿಕೊಂಡ ಸುದೀಪ್ಅಭಿನಯ ಚಕ್ರವರ್ತಿ ಅನ್ನಿಸಿಕೊಂಡ ಸುದೀಪ್

  ನಮ್ಮಲ್ಲಿ ಹಿರಿಯರು ಇದ್ದಾರೆ

  ನಮ್ಮಲ್ಲಿ ಹಿರಿಯರು ಇದ್ದಾರೆ

  ''ಹಾಗ್ನೋಡಿದ್ರೆ ನಮ್ಮಲ್ಲಿ ಇನ್ನು ಕೆಲವು ಹಿರಿಯ ನಟರಿದ್ದಾರೆ. ರವಿಚಂದ್ರನ್, ಶಿವರಾಜ್ ಕುಮಾರ್ ಅಂತವರಿದ್ದಾರೆ. ಇವರ ಮಾತಿಗೆ ತೂಕಯಿದೆ. ಇಂಡಸ್ಟ್ರಿ ಇವರ ಮಾತಿಗೆ ಬೆಲೆ ನೀಡುತ್ತೆ. ಅವರಿಬ್ಬರಿಗೆ ಸೀನಿಯರಿಟಿ ಇದೆ'' ಎಂದು ಸುದೀಪ್ ಅಭಿಪ್ರಾಯ ಪಟ್ಟಿದ್ದಾರೆ.

  ಬಲವಂತವಾಗಿ ಹೋಗೋಕೆ ಆಗಲ್ಲ

  ಬಲವಂತವಾಗಿ ಹೋಗೋಕೆ ಆಗಲ್ಲ

  ''ಆ ಜಾಗಕ್ಕೆ ಬಲವಂತವಾಗಿ ಹೋಗೋಕೆ ಆಗಲ್ಲ. ಯಾಕಂದ್ರೆ, ಆ ಜಾಗಕ್ಕೆ ತುಂಬಾ ಜವಾಬ್ದಾರಿ ಇದೆ. ರವಿ ಸರ್, ಶಿವಣ್ಣ ಇಬ್ಬರು ಮನಸ್ಸು ಮಾಡಬೇಕು. ಬಹುಶಃ ಅವರ ಮೇಲೆ ಅವಲಂಬನೆ ಆಗುತ್ತೆ ಅನಿಸುತ್ತೆ. ನಿರ್ಮಾಪಕ, ನಿರ್ದೇಶಕರಲ್ಲಿ ಕೆಲವರಿದ್ದಾರೆ. ಅದನ್ನ ಅವರು ನೋಡಿಕೊಳ್ತಾರೆ'' ಎಂದು ಸುದೀಪ್ ತಿಳಿಸಿದರು.

  ಮೊದಲ ನಮ್ಮ ಮನೆ ಆವರಣ ಸರಿಪಡಿಸಿಕೊಳ್ಳೋಣ

  ಮೊದಲ ನಮ್ಮ ಮನೆ ಆವರಣ ಸರಿಪಡಿಸಿಕೊಳ್ಳೋಣ

  ''ಯಾರು ಲೀಡರ್ ಆಗ್ತಾರೆ, ಯಾರು ಲೀಡರ್ ಆಗಲ್ಲ ಅನ್ನೋದಲ್ಲ. ಮೊದಲು ನಮ್ಮ ಲೈಫ್ ನ ನಾವು ಡಿಸಿಪ್ಲೀನ್ ಆಗಿ ಇಟ್ಕೊಂಡ್ರೆ ಎಲ್ಲವೂ ಸರಿಯಾಗಿಯೇ ಇರುತ್ತೆ. ವಾತಾವರಣ ಹಾಳು ಮಾಡೋಕೆ ಏನು ನಡೆಯಬೇಕು ಅದೆಲ್ಲ ಇಂದು ನಡೆಯುತ್ತಿದೆ. ಮೊದಲು ನಮ್ಮ ಮನೆ ಆವರಣ ಸರಿಪಡಿಸಿಕೊಳ್ಳೋಣ, ಆಮೇಲೆ ಊರಿನ ಬಗ್ಗೆ ಮಾತಾಡೋಣ'' ಎಂದು ಸುದೀಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  English summary
  Ambarish was not only a hero in movies, but also a leader for kannada film industry. Apart him who will leads the industry now.? now, sudeep mentioned two names for this place.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X