»   » ಆಗರ್ಭ 'ಶ್ರೀಮಂತ'ನಾಗಿ ಮಿಂಚುತ್ತಿದ್ದಾರೆ ಸುದೀಪ್

ಆಗರ್ಭ 'ಶ್ರೀಮಂತ'ನಾಗಿ ಮಿಂಚುತ್ತಿದ್ದಾರೆ ಸುದೀಪ್

Posted By:
Subscribe to Filmibeat Kannada

ಮೊನ್ನೆ ತಾನೆ ಗಾಲ್ಫ್ ಸ್ಟಿಕ್ ಹಿಡಿದು ಸ್ಟೈಲಿಶ್ ಲುಕ್ ನಲ್ಲಿ ಮಿಂಚಿದ್ದ ಕಿಚ್ಚ ಸುದೀಪ್, ಈಗ ದುಬಾರಿ ಕಾರಿನಲ್ಲಿ ಬಂದು ಇಳಿಯುತ್ತಿದ್ದಾರೆ. ಸುದೀಪ್ ಈ ಫೋಟೋಗಳಲ್ಲಿ ಸಖತ್ ಸ್ಟೈಲಿಶ್ ಆಗಿ ಮಿಂಚುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ಟ್ರೆಂಡ್ ಹುಟ್ಟುಹಾಕಿವೆ.

'ಗಾಲ್ಫ್ ಸ್ಟಿಕ್' ಹಿಡಿದು ಆಟಕ್ಕಿಳಿದ ಸ್ಟೈಲಿಶ್ ಸ್ಟಾರ್ ಸುದೀಪ್

ಕಿಚ್ಚ ಸುದೀಪ್ ಅವರಿಗೆ ಈ ಫೋಟೋಗಳು 'ಶ್ರೀಮಂತ ಸುದೀಪ್' ಎಂಬ ಹೊಸ ಹೆಸರನ್ನ ತಂದುಕೊಟ್ಟಿದೆ. ಸೂಟು, ಬೂಟು ತೊಟ್ಟು ಆಗರ್ಭ ಶ್ರೀಮಂತನಂತೆ ಕಂಗೊಳಿಸುತ್ತಿರುವ ಕಿಚ್ಚನನ್ನ ನೋಡಿ ಅಭಿಮಾನಿಗಳು ಫುಲ್ ಖುಚ್ ಆಗಿದ್ದಾರೆ.

Sudeep New look out from Kannada Medium Raju Movie

ಸುದೀಪ್ ಯಾವ ಚಿತ್ರದಲ್ಲಿ ಇಷ್ಟೊಂದು ಸ್ಟೈಲಿಶ್ ಆಗಿದ್ದಾರೆ ಎಂಬ ಕುತೂಹಲ ಕಾಡುವುದು ಸಹಜ. ಅಂದ್ಹಾಗೆ, ಇದು 'ಕನ್ನಡ ಮೀಡಿಯಂ' ರಾಜು ಚಿತ್ರದಲ್ಲಿ ಸುದೀಪ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಸುದೀಪ್ ಪಾತ್ರದ ಬಗ್ಗೆ ಬಹಿರಂಗಪಡಿಸಿದ ಚಿತ್ರತಂಡ ಫೋಟೋಗಳಿಂದನೇ ಹೆಚ್ಚು ಆಕರ್ಷಣೆ ಮಾಡುತ್ತಿದೆ.

'ಕನ್ನಡ ಮೀಡಿಯಂ' ರಾಜುಗೆ ಕಿಚ್ಚ ಸುದೀಪ್ ಸಾಥ್

Sudeep New look out from Kannada Medium Raju Movie

'ಫಸ್ಟ್ Rank ರಾಜು' ಖ್ಯಾತಿಯ ಗುರುನಂದನ್ ಈ ಚಿತ್ರದ ನಾಯಕನಾಗಿದ್ದು, 'ಫಸ್ಟ್ Rank ರಾಜು' ಚಿತ್ರವನ್ನ ನಿರ್ದೇಶನ ಮಾಡಿದ್ದ ನರೇಶ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಂಗಿತರಂಗ ಖ್ಯಾತಿಯ ಅವಂತಿಕಾ ಶೆಟ್ಟಿ ನಾಯಕಿ ಆಗಿದ್ದು, ಕೆ.ಎ ಸುರೇಶ್ ನಿರ್ಮಾಣ ಮಾಡುತ್ತಿದ್ದಾರೆ.

English summary
Sudeep has always been a trendsetter in Sandalwood. Now, his latest look in the film Raju Kannada Medium, in which he is playing a cameo, is grabbing all the eyeballs and is also trending online

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada