»   » 'ವಿಲನ್' ನಂತರ 'ಪೈಲ್ವಾನ್' ಆದ ಕಿಚ್ಚ ಸುದೀಪ್

'ವಿಲನ್' ನಂತರ 'ಪೈಲ್ವಾನ್' ಆದ ಕಿಚ್ಚ ಸುದೀಪ್

Posted By:
Subscribe to Filmibeat Kannada
Sudeep's new movie title is fixed | Kichcha is ready to become Pailwan | Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿಮಾಗಳ ಹೆಸರು ಒಂದಕ್ಕಿಂತ ಒಂದು ಮಾಸ್ ಮತ್ತು ಆಕರ್ಷಣೆಯಾಗಿರುತ್ತೆ. ಪ್ರೇಮ್ ನಿರ್ದೇಶನ 'ದಿ ವಿಲನ್' ಚಿತ್ರದ ನಂತರ ಹೆಬ್ಬುಲಿ ಕೃಷ್ಣ ನಿರ್ದೇಶನ ಮಾಡಲಿರುವ ಚಿತ್ರದಲ್ಲಿ ಸುದೀಪ್ ನಟಿಸಲಿದ್ದಾರೆ. ಈ ಚಿತ್ರಕ್ಕೀಗ ಟೈಟಲ್ ಫಿಕ್ಸ್ ಆಗಿದೆ.

ಹೌದು, ಹೆಬ್ಬುಲಿ ಕೃಷ್ಣ ಆಕ್ಷನ್ ಕಟ್ ಹೇಳಲಿರುವ ಚಿತ್ರದಲ್ಲಿ ಸುದೀಪ್ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರಕ್ಕೆ 'ಪೈಲ್ವಾನ್' ಎಂದು ಶೀರ್ಷಿಕೆ ಇಡಲಾಗಿದೆಯಂತೆ.

ಸೆಪ್ಟಂಬರ್ 2ಕ್ಕೆ ಸರ್ಪ್ರೈಸ್, ಸುದೀಪ್ ವೃತ್ತಿ ಜೀವನದಲ್ಲಿ ಇದು ಮೊದಲು.!

sudeep new movie titled pailwan

ಈ ಚಿತ್ರದ ಟೈಟಲ್ ಕೇಳಿದ ಸುದೀಪ್ ಅಭಿಮಾನಿಗಳು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದು, ಎಲ್ಲರೂ ಅವರದ್ದೇ ಆದ ಪೋಸ್ಟರ್ ಗಳನ್ನ ಸಿದ್ದ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಸುದೀಪ್ ಹುಟ್ಟುಹಬ್ಬಕ್ಕೆ 'ದಿ ವಿಲನ್' ತಂಡ ಕೊಡ್ತಿರುವ ಗಿಫ್ಟ್ ಏನು?

ಸದ್ಯ, 'ವಿಲನ್' ಚಿತ್ರದ ಅಂತಿಮ ಹಂತದ ಚಿತ್ರೀಕರಣ ನಡೆಯುತ್ತಿದೆ. ಇದಾದ ನಂತರ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ 5' ಆರಂಭವಾಗುತ್ತೆ. ಈ ಮಧ್ಯೆ ಹುಬ್ಬುಲಿ ಕೃಷ್ಣ ಅವರ 'ಪೈಲ್ವಾನ್' ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ.

English summary
Director hebbuli krishna and Kannada Actor kiccha sudeep's second movie titled as a pailwan.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada