ದರ್ಶನ್-ರಾಕ್ಲೈನ್ ಚಿತ್ರಕ್ಕಾಗಿ ಸುದೀಪ್ ಇಷ್ಟೊಂದು ತ್ಯಾಗಕ್ಕೆ ಸಿದ್ಧವಾದ್ರಾ.?

Recommended Video

ಮತ್ತೊಂದು ತ್ಯಾಗಕ್ಕೆ ಸಿದ್ಧವಾದ ನಟ ಸುದೀಪ್ | FILMIBEAT KANNADA

ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ಬರು 'ಮದಕರಿ ನಾಯಕ'ನ ಕುರಿತು ಸಿನಿಮಾ ಮಾಡ್ತಿದ್ದಾರೆ. ಇದು ಅಭಿಮಾನಿಗಳಲ್ಲಿ ಗೊಂದಲ ಉಂಟು ಮಾಡಿತ್ತು. ಜೊತೆ ಇಬ್ಬರು ಅಭಿಮಾನಿಗಳು 'ನೀನಾ-ನಾನಾ' ಎಂದು ಕಿತ್ತಾಡಿಕೊಂಡಿದ್ದರು.

ದರ್ಶನ್ ಮತ್ತು ಸುದೀಪ್ ಇಬ್ಬರು ಕೂಡ 'ಎರಡು ಸಿನಿಮಾ ಆಗಲಿ, ಇಬ್ಬರು ಮಾಡ್ತೀವಿ' ಎಂದು ಹೇಳಿದ್ದರು. ಈ ಮಧ್ಯೆ ವಾಲ್ಮೀಕಿ ಸಮುದಾಯದ ಸ್ವಾಮೀಜಿ ಅವರ ಹೇಳಿಕೆಯೊಂದು ಮತ್ತಷ್ಟು ವಿವಾದಕ್ಕೆ ಗುರಿಯಾಗಿತ್ತು.

ಇಷ್ಟೆಲ್ಲಾ ಬೆಳವಣಿಗೆ ಕಂಡು ಸುದೀಪ್ ಅವರು ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದರು. 'ನಾನೊಬ್ಬ ಮದಕರಿ, ನಾನು ಸಿನಿಮಾ ಮಾಡ್ತೀನಿ, ಅವ್ರು ಸಿನಿಮಾ ಮಾಡಲಿ, ಎರಡಕ್ಕೂ ಒಳ್ಳೆಯದಾಗಲಿ' ಎಂದಿದ್ದರು. ಆದ್ರೀಗ, ಈ ಪ್ರಾಜೆಕ್ಟ್ ಬಗ್ಗೆ ಮಾತನಾಡಿರುವ ಸುದೀಪ್ ಎಷ್ಟೊಂದು ತ್ಯಾಗ ಮಾಡಲು ನಿರ್ಧರಿಸಿದ್ದಾರೆ.

ಅವರ ಸಿನಿಮಾ ಖಂಡಿತಾ ಚೆನ್ನಾಗಿ ಆಗುತ್ತೆ

ಅವರ ಸಿನಿಮಾ ಖಂಡಿತಾ ಚೆನ್ನಾಗಿ ಆಗುತ್ತೆ

'ನಾವು ಮಾಡೋಕೆ ಹೊರಟಿರುವುದು ಓರ್ವ ಐತಿಹಾಸಿಕ ವ್ಯಕ್ತಿಯ ಬಗ್ಗೆ. ಅವರ ಸಿನಿಮಾನೂ ಚೆನ್ನಾಗಿ ಆಗುತ್ತೆ. ಅವರದ್ದು ಅನುಭವ ಹೊಂದಿರುವ ತಂಡ. ನನಗೆ ವಾದ ಮಾಡ್ಕೋಬೇಕು, ಆ ಟೈಟಲ್ ಬೇಕು ಅಂತ ಇಲ್ಲ. ಅವರು ಯಾವುದು ಬಳಸಿಕೊಳ್ತಾರೋ ಅದಾದ್ಮೇಲೆ ಅವರು ಬಿಟ್ಟಿದ್ದು ನಾನು ಇಟ್ಕೊಳ್ತೀನಿ'' ಎನ್ನುವಷ್ಟು ತ್ಯಾಗಕ್ಕೆ ಸುದೀಪ್ ಸಿದ್ಧವಾಗಿದ್ದಾರೆ.

ಅವರ ಗಮನಕ್ಕೆ ಇರಲಿ ಅಂತ ಹೇಳಿದೆ

ಅವರ ಗಮನಕ್ಕೆ ಇರಲಿ ಅಂತ ಹೇಳಿದೆ

''ನಾನು ಸಿನಿಮಾ ಮಾಡೋಕೆ ಹೊರಟಿದ್ದೇನೆ ಹೊರತು ಯುದ್ಧ ಮಾಡ್ತಿಲ್ಲ. ಅವರು ಯಾರನ್ನ ಹಾಕ್ಕೊಂಡು ಸಿನಿಮಾ ಮಾಡ್ತಾರೆ, ಏನು ಅನ್ನೋದು ನನಗೆ ಬೇಕಾಗಿಲ್ಲ. ನಾನು ಐದಾರು ವರ್ಷದಿಂದ ಈ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡ್ತಿದ್ದೀನಿ. ಈ ಎರಡು ವರ್ಷದಿಂದ ಸ್ಕ್ರಿಪ್ಟ್ ಮಾಡ್ತಿದ್ದೀನಿ. ಅದು ಅವರಿಗೆ ಗೊತ್ತಿರಬೇಕು. ಅವರ ಗಮನಕ್ಕೆ ಇರಲಿ. ಯಾಕಂದ್ರೆ, ಬೇರೆ ಯಾರೂ ತಪ್ಪು ತಿಳಿದುಕೊಳ್ಳಬಾರದು'' ಎಂದು ಸುದೀಪ್ ಹೇಳಿದ್ದಾರೆ.

ಅವರ ತಂಡ ಅನುಭವ ಹೊಂದಿದೆ

ಅವರ ತಂಡ ಅನುಭವ ಹೊಂದಿದೆ

'ನಮ್ಮಗಿಂತ ಹಣಬಲ, ಭುಜಬಲ, ಅವರ ನಿರ್ದೇಶಕರಿಗೆ ಇರುವ ಅನುಭವ ನಮಗಿಲ್ಲ. ನಾನು ಮನಸ್ಸಿನಿಂದ ಹೇಳುತ್ತಿದ್ದೇನೆ. ಜನವರಿಯಲ್ಲಿ ಅವರ ಸಿನಿಮಾ ಆರಂಭವಾಗುತ್ತೆ ಎಂಬ ಸುದ್ದಿ ಕೇಳಿದೆ. ಬಟ್, ನನ್ನದು ಇನ್ನು ಲೇಟ್ ಆಗುತ್ತೆ. ಬಹುಶಃ ಮೇ ಅಥವಾ ಜೂನ್ ನಲ್ಲಿ ಶುರು ಮಾಡಬಹುದು. ಅಷ್ಟೋತ್ತಿಗೆ ಅವರ ಸಿನಿಮಾನೇ ಬಿಡುಗಡೆಯಾಗಬಹುದು. ಎಲ್ಲಿಂದ ವಾರ್ ಇರುತ್ತೆ.' - ಸುದೀಪ್

ಟೈಟಲ್ ಬೇಕಿದ್ರೂ ಬಿಡ್ತೀನಿ

ಟೈಟಲ್ ಬೇಕಿದ್ರೂ ಬಿಡ್ತೀನಿ

'ನಾಳೆ ಇನ್ನೊಬ್ಬರು ಸಿನಿಮಾನ ಘೋಷಣೆ ಮಾಡಬಹುದು. ಅವರನ್ನ ತಡೆಯೋಕೆ ಆಗುತ್ತಾ. ಇದು ರೀಮೇಕ್ ಸಿನಿಮಾ ಆಗಿದ್ರೆ, ರೈಟ್ಸ್ ತಗೊಳ್ಳಬಹುದು. ಆದ್ರೆ, ಇದು ಐತಿಹಾಸಿಕ ಸಿನಿಮಾ. ಟೈಟಲ್ ನಲ್ಲಿ ಸ್ವಲ್ಪ ಚರ್ಚೆ ಆಯ್ತು. ನನಗೆ ಆ ಟೈಟಲ್ ಕೂಡ ಬೇಡ. ಅದನ್ನ ಬಿಟ್ಟು ಕೊಡ್ತೀನಿ. ನಾನು ಯಾವುದೇ ಭಯದಿಂದ ಹೇಳುತ್ತಿಲ್ಲ. ಪ್ರೀತಿಯಿಂದ ಹೇಳುತ್ತಿದ್ದೇನೆ'' ಎಂದು ಸುದೀಪ್ ಸ್ಪಷ್ಟನೆ ನೀಡಿದ್ದಾರೆ.

ನಾನು ಯಾವತ್ತು ಜಾತಿ ನೋಡಿಲ್ಲ

ನಾನು ಯಾವತ್ತು ಜಾತಿ ನೋಡಿಲ್ಲ

ಸ್ವಾಮೀಜಿ ಅವರು ಪ್ರೀತಿಯಿಂದ ಮಾತನಾಡಿದ್ದರು. ಅವರು ಎಲ್ಲೂ ಜಾತಿ ಬಗ್ಗೆ ಮಾತನಾಡಿಲ್ಲ. ಒಂದು ಸಿನಿಮಾದಿಂದ ಇದೆಲ್ಲಾ ಬೇಡ. ನಾನು ಯಾವತ್ತು ಜಾತಿ ನೋಡಿಲ್ಲ. ಎಲ್ಲರೂ ಕರ್ನಾಟಕದವರೇ. ಆ ಸಿನಿಮಾನೂ ಶತದಿನೋತ್ಸವ ಆಚರಿಸಲಿ. ನಮಗಿಂತ ದೊಡ್ಡ ಕಲೆಕ್ಷನ್ ಆಗಲಿ. ಸಾಮಾಜಿಕ ಜಾಲತಾಣದಲ್ಲಿ ಏನೇನೋ ನಡೆಯುತ್ತೆ. ಅದರ ಬಗ್ಗೆ ನಾವು ಕಲಾವಿದರ ಯಾವತ್ತೂ ಹೇಳಿಕೆ ಕೊಡಲ್ಲ. ವಿವಾದ ಆಗಲಿ ಅಂತ ಹೇಳಲ್ಲ'' ಎಂದು ಖಚಿತಪಡಿಸಿದರು.

More from Filmibeat

English summary
Kannada actor sudeep openly spoke about darshan madakari nayaka movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X