ಅಂದು 'ಪೈಲ್ವಾನ್' ಕಾಲೆಳೆದವರಿಗೆ ಇಂದು ಮಾಂಜ ಕೊಟ್ಟ 'ಹೆಬ್ಬುಲಿ'
Recommended Video

'ಪೈಲ್ವಾನ್' ಚಿತ್ರಕ್ಕಾಗಿ ಸುದೀಪ್ ಸಿಕ್ಕಾಪಟ್ಟೆ ಹಾರ್ಡ್ ವರ್ಕ್ ಮಾಡ್ತಿದ್ದಾರೆ. ಕುಸ್ತಿಪಟು ಪಾತ್ರವಾಗಿರುವುದರಿಂದ ಅದಕ್ಕಾಗಿ ಜಿಮ್ ಗೆ ಹೋಗಿ ದೇಹ ದಂಡಿಸುತ್ತಿದ್ದಾರೆ. ಬಾಕ್ಸರ್ ರೀತಿ ಬಾಡಿ ಫಿಟ್ ಮಾಡಿದ್ದಾರೆ.
ಕಳೆದ ದಿನಗಳ ಹಿಂದೆ 'ಪೈಲ್ವಾನ್' ಚಿತ್ರದ ಕುಸ್ತಿ ಪೋಸ್ಟರ್ ರಿಲೀಸ್ ಆಗಿತ್ತು. ಈ ಪೋಸ್ಟರ್ ನಲ್ಲಿ ಸುದೀಪ್ ಅವರ ಜಿಮ್ ಬಾಡಿ ಅನಾವರಣಗೊಂಡಿತ್ತು. ಸುದೀಪ್ ಅವರ ಬಾಡಿ ಫಿಟ್ನೆಸ್ ನೋಡಿ ಖುಷಿಪಟ್ಟವರ ಜೊತೆ ಇದು ನಕಲಿ ಎಂದು ಕಾಲೆಳೆದವರು ಹೆಚ್ಚಾದರು.

ಅಂತವರಿಗೆಲ್ಲಾ ಈಗ ನಿರ್ದೇಶಕ ಕೃಷ್ಣ ಟಾಂಗ್ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಬಾಡಿ ಬಿಲ್ಡ್ ಮಾಡಿದ ನಂತರ ಹೇಗಿದ್ದಾರೆ ಎಂಬುದಕ್ಕೆ ಹೊಸ ಫೋಟೋವೊಂದನ್ನ ರಿಲೀಸ್ ಮಾಡಿದ್ದಾರೆ.
ಈ ಫೋಟೋದಲ್ಲಿ ಸುದೀಪ್ ''ಸ್ವಿಮ್ಮಿಂಗ್ ಫೂಲ್ ನಲ್ಲಿ ನಿಂತು ಬೆನ್ನು ತೋರಿಸಿದ್ದಾರೆ. ಜಿಮ್ ನಲ್ಲಿ ಕಸರತ್ತು ಮಾಡಿರುವ ಸುದೀಪ್ ಅವರ ದೇಹ ಎಷ್ಟು ಫಿಟ್ ಆಗಿದೆ ಎಂದು ಫೋಸ್ಟ ಕೊಟ್ಟಿದ್ದಾರೆ.
ಈ ಫೋಟೋ ಶೇರ್ ಮಾಡಿರುವ ನಿರ್ದೇಶಕ ಕೃಷ್ಣ, ''ಪೈಲ್ವಾನ್ ಚಿತ್ರಕ್ಕಾಗಿ ಸುದೀಪ್ ಡೆಡಿಕೇಷನ್ ಗೆ ನಾನು ಕೃತಜ್ಞತೆ ತಿಳಿಸುತ್ತೇನೆ. ಸುದೀಪ್ ಅವರ ಈ ಬದಲಾವಣೆಗೆ ನಾನು ಫಿದಾ ಆಗಿದ್ದೇನೆ. ಇದು ನನ್ನ ಕೆಲವು ಅಭಿಮಾನಿಗಳು ಮತ್ತು ಸ್ನೇಹಿತರಿಗಾಗಿ'' ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೊಂದು ಟ್ವೀಟ್ ನಲ್ಲಿ ''ಕೆಲವರು ಹೇಳುವಾಗೆ ಇದು ಸಿಜಿ, ವಿಎಫ್ಎಕ್ಸ್ ಬಳಕೆಯಾಗಿಲ್ಲ. ಇದು ಪಕ್ಕಾ ಒರಿಜಿನಲ್'' ಎಂದು ಟಾಂಗ್ ನೀಡಿದ್ದಾರೆ. ಇನ್ನುಳಿದಂತೆ ಬಹುತೇಕ ಚಿತ್ರೀಕರಣ ಮುಗಿಸಿರುವ ಪೈಲ್ವಾನ್ ಮುಂದಿನ ವರ್ಷದಲ್ಲಿ ತೆರೆಗೆ ಬರಲಿದೆ.


Click it and Unblock the Notifications











