ಸುದೀಪ್ ಅಭಿನಯದ 'ಫ್ಯಾಂಟಮ್' ಸಿನಿಮಾ ಚಿತ್ರೀಕರಣ ಮುಂದಕ್ಕೆ

ಸುದೀಪ್ ಅಭಿನಯಿಸುತ್ತಿರುವ ಪ್ಯಾಂಟಮ್ ಸಿನಿಮಾ ಚಿತ್ರೀಕರಣ ಪುನರ್ ಪ್ರಾರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಈಗ ಅಚಾನಕ್ಕಾಗಿ ಚಿತ್ರೀಕರಣವನ್ನು ಮುಂದೂಡಲಾಗಿದೆ.

Recommended Video

Susheel Kumar, ದುರಂತದ ಹಿಂದಿನ ಕಾರಣವೇನು | Filmibeat Kannada

ರಂಗಿತರಂಗ ಖ್ಯಾತಿಯ ಅನುಪ್ ಭಂಡಾರಿ ನಿರ್ದೇಶನದ ಪ್ಯಾಂಟಮ್ ಸಿನಿಮಾ ಚಿತ್ರೀಕರಣ ಕೊರೊನಾ ಕಾರಣದಿಂದಾಗಿ ಈ ಮೊದಲು ಮುಂದೂಡಲಾಗಿತ್ತು. ಆದರೆ ರಾಜ್ಯ ಸರ್ಕಾರ ಅನುಮತಿ ನೀಡಿದ ಬಳಿ ಚಿತ್ರೀಕರಣ ಪ್ರಾರಂಭ ಮಾಡುವುದಾಗಿ ಚಿತ್ರತಂಡ ಹೇಳಿತ್ತು ಅದಕ್ಕೆ ಸೂಕ್ತ ತಯಾರಿಯನ್ನು ಮಾಡಿಕೊಂಡಿತ್ತು.

ಜುಲೈ 1 ರಿಂದ ಪ್ಯಾಂಟಮ್ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುತ್ತದೆ ಎಂದು ಚಿತ್ರತಂಡ ಹೇಳಿತ್ತು. ಆದರೆ ಕೊರೊನಾ ಕಾರಣದಿಂದ ಮತ್ತೆ ಚಿತ್ರೀಕರಣ ಮುಂದಕ್ಕೆ ಹೋಗಿದೆ. ಇದು ನಿರ್ಮಾಪಕರಿಗೆ ಸಾಕಷ್ಟು ನಷ್ಟವನ್ನು ತಂದೊಗಿಸಲಿದೆ ಎನ್ನಲಾಗುತ್ತಿದೆ.

ಸ್ಟುಡಿಯೋದಲ್ಲಿ ಸೆಟ್ ಹಾಕಲಾಗಿತ್ತು

ಸ್ಟುಡಿಯೋದಲ್ಲಿ ಸೆಟ್ ಹಾಕಲಾಗಿತ್ತು

ಪ್ಯಾಂಟಮ್ ಸಿನಿಮಾದ ಚಿತ್ರೀಕರಣಕ್ಕಾಗಿ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಸಾಕಷ್ಟು ಹಣ ಖರ್ಚು ಮಾಡಿ ಕಾಡಿನ ಸೆಟ್ ಅನ್ನು ಹಾಕಲಾಗಿತ್ತು. ಎಲ್ಲ ತಯಾರಿಯೂ ಆಗಿತ್ತು ಆದರೆ ಈಗ ಚಿತ್ರೀಕರಣವನ್ನು ಮುಂದಕ್ಕೆ ಹಾಕಲಾಗಿದೆ.

ಐವತ್ತು ಲಕ್ಷ ಖರ್ಚು ಮಾಡಲಾಗಿತ್ತು

ಐವತ್ತು ಲಕ್ಷ ಖರ್ಚು ಮಾಡಲಾಗಿತ್ತು

6 ಕೋಟಿ ರೂಪಾಯಿ ಖರ್ಚು ಮಾಡಿ ಅರಣ್ಯದ ಸೆಟ್ ಅನ್ನು ಚಿತ್ರತಂಡ ಹಾಕಿತ್ತು. ಇದಕ್ಕಾಗಿ ರಾಜಮಂಡ್ರಿ ಮತ್ತು ಮುಂತಾದ ಕಡೆಗಳಿಂದ ವಿವಿಧ ಬಗೆಯ ಗಿಡಗಳು, ಮರಗಳನ್ನು ತರಲಾಗಿತ್ತು, ಕೆಲವನ್ನು ಕಲಾ ತಂಡ ಸೃಷ್ಟಿ ಮಾಡಿತ್ತು. ಆದರೆ ಈಗ ಚಿತ್ರೀಕರಣ ಮುಂದೂಡಲಾಗಿದೆ.

ಭರ್ಜರಿ ಆಕ್ಷನ್ ಸಿನಿಮಾ

ಭರ್ಜರಿ ಆಕ್ಷನ್ ಸಿನಿಮಾ

ಪ್ಯಾಂಟಮ್ ಸಿನಿಮಾದಲ್ಲಿ ಸುದೀಪ್ ವಿಕ್ರಂ ರೋಣ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದ್ದು, ಮೀಸೆ ಬಿಟ್ಟ ಸುದೀಪ್ ಅವರ ಅರ್ಧ ಮುಖ ಇದೊಂದು ಆಕ್ಷನ್ ಸಿನಿಮಾ ಎಂಬುದನ್ನು ಸಾರಿ ಹೇಳುತ್ತಿದೆ.

ಶ್ರದ್ಧಾ ಶ್ರೀನಾಥ್ ನಾಯಕಿ

ಶ್ರದ್ಧಾ ಶ್ರೀನಾಥ್ ನಾಯಕಿ

ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್, ನಿರುಪ್ ಭಂಡಾರಿ ಇನ್ನೂ ಹಲವು ನಟ-ನಟಿಯರು ಇರಲಿದ್ದಾರೆ. ಸಂಗೀತವನ್ನು ಅಜನೀಶ್ ಲೋಕನಾಥ್ ನೀಡುತ್ತಿದ್ದಾರೆ. ಚಿತ್ರೀಕರಣ ಮುಂದಿನ ವಾರದಿಂದ ಪ್ರಾರಂಭವಾಗಲಿದೆ ಎಂದು ಚಿತ್ರತಂಡ ಹೇಳಿದೆ.

More from Filmibeat

English summary
Actor Sudeep's Pantom movie filming which scheduled on July 01 has been postponed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X