twitter
    For Quick Alerts
    ALLOW NOTIFICATIONS  
    For Daily Alerts

    ಸುದೀಪ್ ಅಭಿನಯದ 'ಫ್ಯಾಂಟಮ್' ಸಿನಿಮಾ ಚಿತ್ರೀಕರಣ ಮುಂದಕ್ಕೆ

    |

    ಸುದೀಪ್ ಅಭಿನಯಿಸುತ್ತಿರುವ ಪ್ಯಾಂಟಮ್ ಸಿನಿಮಾ ಚಿತ್ರೀಕರಣ ಪುನರ್ ಪ್ರಾರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಈಗ ಅಚಾನಕ್ಕಾಗಿ ಚಿತ್ರೀಕರಣವನ್ನು ಮುಂದೂಡಲಾಗಿದೆ.

    Recommended Video

    Susheel Kumar, ದುರಂತದ ಹಿಂದಿನ ಕಾರಣವೇನು | Filmibeat Kannada

    ರಂಗಿತರಂಗ ಖ್ಯಾತಿಯ ಅನುಪ್ ಭಂಡಾರಿ ನಿರ್ದೇಶನದ ಪ್ಯಾಂಟಮ್ ಸಿನಿಮಾ ಚಿತ್ರೀಕರಣ ಕೊರೊನಾ ಕಾರಣದಿಂದಾಗಿ ಈ ಮೊದಲು ಮುಂದೂಡಲಾಗಿತ್ತು. ಆದರೆ ರಾಜ್ಯ ಸರ್ಕಾರ ಅನುಮತಿ ನೀಡಿದ ಬಳಿ ಚಿತ್ರೀಕರಣ ಪ್ರಾರಂಭ ಮಾಡುವುದಾಗಿ ಚಿತ್ರತಂಡ ಹೇಳಿತ್ತು ಅದಕ್ಕೆ ಸೂಕ್ತ ತಯಾರಿಯನ್ನು ಮಾಡಿಕೊಂಡಿತ್ತು.

    ಶಿವಣ್ಣನ ಹುಟ್ಟುಹಬ್ಬಕ್ಕೆ ಸುದೀಪ್ ಕಡೆಯಿಂದ ಸರ್ಪ್ರೈಸ್: ಅಭಿಮಾನಿಗಳಲ್ಲಿ ಹ್ಯಾಟ್ರಿಕ್ ಹೀರೋ ಮನವಿ ಮಾಡಿದ್ದೇನು?ಶಿವಣ್ಣನ ಹುಟ್ಟುಹಬ್ಬಕ್ಕೆ ಸುದೀಪ್ ಕಡೆಯಿಂದ ಸರ್ಪ್ರೈಸ್: ಅಭಿಮಾನಿಗಳಲ್ಲಿ ಹ್ಯಾಟ್ರಿಕ್ ಹೀರೋ ಮನವಿ ಮಾಡಿದ್ದೇನು?

    ಜುಲೈ 1 ರಿಂದ ಪ್ಯಾಂಟಮ್ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುತ್ತದೆ ಎಂದು ಚಿತ್ರತಂಡ ಹೇಳಿತ್ತು. ಆದರೆ ಕೊರೊನಾ ಕಾರಣದಿಂದ ಮತ್ತೆ ಚಿತ್ರೀಕರಣ ಮುಂದಕ್ಕೆ ಹೋಗಿದೆ. ಇದು ನಿರ್ಮಾಪಕರಿಗೆ ಸಾಕಷ್ಟು ನಷ್ಟವನ್ನು ತಂದೊಗಿಸಲಿದೆ ಎನ್ನಲಾಗುತ್ತಿದೆ.

    ಸ್ಟುಡಿಯೋದಲ್ಲಿ ಸೆಟ್ ಹಾಕಲಾಗಿತ್ತು

    ಸ್ಟುಡಿಯೋದಲ್ಲಿ ಸೆಟ್ ಹಾಕಲಾಗಿತ್ತು

    ಪ್ಯಾಂಟಮ್ ಸಿನಿಮಾದ ಚಿತ್ರೀಕರಣಕ್ಕಾಗಿ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಸಾಕಷ್ಟು ಹಣ ಖರ್ಚು ಮಾಡಿ ಕಾಡಿನ ಸೆಟ್ ಅನ್ನು ಹಾಕಲಾಗಿತ್ತು. ಎಲ್ಲ ತಯಾರಿಯೂ ಆಗಿತ್ತು ಆದರೆ ಈಗ ಚಿತ್ರೀಕರಣವನ್ನು ಮುಂದಕ್ಕೆ ಹಾಕಲಾಗಿದೆ.

    ಐವತ್ತು ಲಕ್ಷ ಖರ್ಚು ಮಾಡಲಾಗಿತ್ತು

    ಐವತ್ತು ಲಕ್ಷ ಖರ್ಚು ಮಾಡಲಾಗಿತ್ತು

    6 ಕೋಟಿ ರೂಪಾಯಿ ಖರ್ಚು ಮಾಡಿ ಅರಣ್ಯದ ಸೆಟ್ ಅನ್ನು ಚಿತ್ರತಂಡ ಹಾಕಿತ್ತು. ಇದಕ್ಕಾಗಿ ರಾಜಮಂಡ್ರಿ ಮತ್ತು ಮುಂತಾದ ಕಡೆಗಳಿಂದ ವಿವಿಧ ಬಗೆಯ ಗಿಡಗಳು, ಮರಗಳನ್ನು ತರಲಾಗಿತ್ತು, ಕೆಲವನ್ನು ಕಲಾ ತಂಡ ಸೃಷ್ಟಿ ಮಾಡಿತ್ತು. ಆದರೆ ಈಗ ಚಿತ್ರೀಕರಣ ಮುಂದೂಡಲಾಗಿದೆ.

    ಕಷ್ಟದಲ್ಲಿದ್ದ ಕುಟುಂಬಕ್ಕೆ ನೆರವಾದ ಸುದೀಪ್: ಆಟೋ ಚಾಲಕನ ತಂಗಿ ಮದುವೆಗೆ ಕಿಚ್ಚನ ಸಹಾಯಕಷ್ಟದಲ್ಲಿದ್ದ ಕುಟುಂಬಕ್ಕೆ ನೆರವಾದ ಸುದೀಪ್: ಆಟೋ ಚಾಲಕನ ತಂಗಿ ಮದುವೆಗೆ ಕಿಚ್ಚನ ಸಹಾಯ

    ಭರ್ಜರಿ ಆಕ್ಷನ್ ಸಿನಿಮಾ

    ಭರ್ಜರಿ ಆಕ್ಷನ್ ಸಿನಿಮಾ

    ಪ್ಯಾಂಟಮ್ ಸಿನಿಮಾದಲ್ಲಿ ಸುದೀಪ್ ವಿಕ್ರಂ ರೋಣ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದ್ದು, ಮೀಸೆ ಬಿಟ್ಟ ಸುದೀಪ್ ಅವರ ಅರ್ಧ ಮುಖ ಇದೊಂದು ಆಕ್ಷನ್ ಸಿನಿಮಾ ಎಂಬುದನ್ನು ಸಾರಿ ಹೇಳುತ್ತಿದೆ.

    ಗಣೇಶ್ ಜನ್ಮದಿನ ಮರೆತು ಮುಂಚಿತವಾಗಿ ವಿಶ್ ಮಾಡಿದ ಸುದೀಪ್: ಗೋಲ್ಡನ್ ಸ್ಟಾರ್ ಹೇಳಿದ್ದೇನು?ಗಣೇಶ್ ಜನ್ಮದಿನ ಮರೆತು ಮುಂಚಿತವಾಗಿ ವಿಶ್ ಮಾಡಿದ ಸುದೀಪ್: ಗೋಲ್ಡನ್ ಸ್ಟಾರ್ ಹೇಳಿದ್ದೇನು?

    ಶ್ರದ್ಧಾ ಶ್ರೀನಾಥ್ ನಾಯಕಿ

    ಶ್ರದ್ಧಾ ಶ್ರೀನಾಥ್ ನಾಯಕಿ

    ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್, ನಿರುಪ್ ಭಂಡಾರಿ ಇನ್ನೂ ಹಲವು ನಟ-ನಟಿಯರು ಇರಲಿದ್ದಾರೆ. ಸಂಗೀತವನ್ನು ಅಜನೀಶ್ ಲೋಕನಾಥ್ ನೀಡುತ್ತಿದ್ದಾರೆ. ಚಿತ್ರೀಕರಣ ಮುಂದಿನ ವಾರದಿಂದ ಪ್ರಾರಂಭವಾಗಲಿದೆ ಎಂದು ಚಿತ್ರತಂಡ ಹೇಳಿದೆ.

    'ಫ್ಯಾಂಟಮ್' ಸಿನಿಮಾಗೆ ಸಂಗೀತ ನಿರ್ದೇಶಕ ಫಿಕ್ಸ್: ಮೊದಲ ಬಾರಿಗೆ ಕಿಚ್ಚನ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ ಇವರು'ಫ್ಯಾಂಟಮ್' ಸಿನಿಮಾಗೆ ಸಂಗೀತ ನಿರ್ದೇಶಕ ಫಿಕ್ಸ್: ಮೊದಲ ಬಾರಿಗೆ ಕಿಚ್ಚನ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ ಇವರು

    English summary
    Actor Sudeep's Pantom movie filming which scheduled on July 01 has been postponed.
    Thursday, July 9, 2020, 9:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X