ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಸುದೀಪ್ ತಂದೆ-ತಾಯಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಂದೆ-ತಾಯಿಗೆ ಇಂದು ಮದುವೆ ವಾರ್ಷಿಕೋತ್ಸವದ ಸಂಭ್ರಮ. 54 ವರ್ಷಗಳ ಕಾಲ ಸುಖಕರ ದಾಂಪತ್ಯ ಜೀವನ ನಡೆಸಿರುವ ಸುದೀಪ್ ತಂದೆ-ತಾಯಿಗೆ, ಸ್ನೇಹಿತರು, ಅಭಿಮಾನಿಗಳು ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ.

Recommended Video

ಡಿ ಬಾಸ್ ದಾಸೋಹದ 41 ನೇ ದಿನ ನಿರಾಶ್ರಿತರಿಗೆ ಉಪಹಾರದ ಜೊತೆ ಮೊಟ್ಟೆ ವಿತರಣೆ | Darshan | Filmibeat Kannada

ಕನ್ನಡ ಚಿತ್ರರಂಗಕ್ಕೆ ಅಭಿನಯ ಚಕ್ರವರ್ತಿ ಸುದೀಪ್ ಅಂತಹ ಅದ್ಭುತ ನಟನನ್ನು ನೀಡಿದ ಸಂಜೀವ್ ಮಂಜಪ್ಪ ಮತ್ತು ಸರೋಜ ಅವರು ಮದುವೆಯಾಗಿ ಇಂದಿಗೆ 54 ವರ್ಷಗಳು ಕಳೆದಿವೆ. ಈ ಸಂಭ್ರಮವನ್ನು ಸುದೀಪ್ ಕುಟುಂಬ ಮನೆಯಲ್ಲಿಯೆ ಆಚರಿಸುತ್ತಿದೆ.

ಅಪ್ಪ-ಅಮ್ಮನ ಮದುವೆ ವಾರ್ಷಿಕೋತ್ಸವಕ್ಕೆ ಕಿಚ್ಚ ಸುದೀಪ್ ಟ್ವಿಟ್ಟರ್ ನಲ್ಲಿ ಶುಭಕೋರಿದ್ದಾರೆ. "ನನಗೆ ಜನ್ಮ ನೀಡಿ, ನನ್ನನ್ನು ದೊಡ್ಡವನಾಗಿ ಬೆಳೆಸಿ, ನನಗೆ ಬುದ್ದಿ ಕಲಿಸಿದವರು. ನನಗೆ ಆಶೀರ್ವಾದ ಮಾಡುತ್ತಾರೆ, ನನಗಾಗಿ ಪ್ರಾರ್ಥನೆ ಮಾಡುತ್ತಾರೆ. 54 ವರ್ಷ ಒಟ್ಟಿಗೆ ಜೀವನ ನಡೆಸಿದ ಅಪ್ಪ-ಅಮ್ಮನಿಗೆ ಶುಭಾಶಯ. ಇನ್ನೂ ಹಲವು ವರ್ಷಗಳು ನಮ್ಮ ಜೊತೆ ಹೀಗೆ ಇರಿ. ಯಾವಾಗಲು ನಿಮ್ಮನ್ನು ಪ್ರೀತಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

Sudeep Parents Sanjeev And Saroja Celebrating 54th Wedding Anniversary

ಸುದೀಪ್ ಅಭಿಮಾನಿಗಳು ಸಹ ಮದುವೆ ವಾರ್ಷಿಕೋತ್ಸವದ ಶುಭಾಶಯ ತಿಳಿಸುತ್ತಿದ್ದಾರೆ. ಕಿಚ್ಚನಿಗೆ ತಂದೆ-ತಾಯಿಯೇ ದೊಡ್ಡ ಶಕ್ತಿ. ಅಪ್ಪ-ಅಮ್ಮನನ್ನು ತುಂಬಾ ಪ್ರೀತಿಸುವ ಕಿಚ್ಚ ಮನೆಯಿಂದ ಹೊರಗೆ ಹೋಗುವಾಗ ಅವರ ಆಶೀರ್ವಾದ ಪಡೆಯದೆ ಹೋಗುವುದಿಲ್ಲ. ಕಿಚ್ಚನಿಗೆ ದೊಡ್ಡ ಶಕ್ತಿಯಾಗಿ, ಅವರ ಬೆನ್ನಹಿಂದೆ ನಿಂತಿದ್ದರೆ.

More from Filmibeat

English summary
Kannada Actor Sudeep Parents Sanjeev and Saroja celebrating 54th wedding anniversary.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X