ಬಾಲಿವುಡ್ ಸಂದರ್ಶನದಲ್ಲಿ 'ಹುಚ್ಚ' ಸಿನಿಮಾ ನೆನೆದ ಸುದೀಪ್
Recommended Video
ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾದ ಟ್ರೈಲರ್ ಇಂದು ಬಹುಭಾಷೆಯಲ್ಲಿ ಬಿಡುಗಡೆಯಾಗಿದೆ. ಕನ್ನಡ, ತೆಲುಗು, ಹಿಂದಿ, ಮಲಯಾಳಂ ಮತ್ತು ತಮಿಳು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು, ಮುಂಬೈನಲ್ಲಿ ಪ್ರೆಸ್ ಮೀಟ್ ಮಾಡಿದ್ರು.
ಕಿಚ್ಚನ ಹೊತೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದು, ಸಹಜವಾಗಿ ಹಿಂದಿ ಇಂಡಸ್ಟ್ರಿಯಲ್ಲಿ ಪೈಲ್ವಾನ್ ಅಬ್ಬರ ಜೋರಾಗಿದೆ.
ಇಂತಹ ಸಂದರ್ಭದಲ್ಲಿ ಸುದೀಪ್ ಬಾಲಿವುಡ್ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಜೀ ಇಟಿಸಿ ಟಿವಿಯಲ್ಲಿ ಪ್ರಸಾರವಾಗುವ ಇಟಿಸಿ ಬಾಲಿವುಡ್ ಶೋನಲ್ಲಿ ಸುದೀಪ್ ಪಾಲ್ಗೊಂಡಿದ್ದು, ಈ ವೇಳೆ ಹುಚ್ಚ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಕೋಮಲ್ ನೆಹ್ತಾ ನಿರೂಪಣೆಯ ಈ ಶೋನಲ್ಲಿ ಸುದೀಪ್ ತಮ್ಮ ವೃತ್ತಿ ಜೀವನದ ಅತಿ ದೊಡ್ಡ ಹಿಟ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ''ನಾನೊಂದು ಸಿನಿಮಾ ಮಾಡಿದ್ದೆ. ಆ ಚಿತ್ರದಲ್ಲಿ ಹೀರೋ ತಲೆ ಬೋಳಿಸಬೇಕಿತ್ತು. ನಮ್ಮಲ್ಲಿ ಅರ್ಧಕ್ಕಿಂತ ಹೆಚ್ಚು ಕಲಾವಿದರು ತಲೆ ಕೂದಲನ್ನ ತೆಗೆಯಲು ಹಿಂಜರಿಯುತ್ತಾರೆ. ಬಟ್, ಮಾಡಲೇಬೇಕಿತ್ತು ಮಾಡಿದೆ. ಆ ಚಿತ್ರವನ್ನೇ ಸಲ್ಮಾನ್ ಖಾನ್ ಅವರು 'ತೇರೆ ನಾಮ್' ಹೆಸರಿನಲ್ಲಿ ಮಾಡಿದ್ರು. ನಮ್ಮಲ್ಲಿ ಆ ಸಿನಿಮಾ 32 ವಾರ ಪ್ರದರ್ಶನ ಕಂಡಿದೆ'' ಎಂದು ಸುದೀಪ್ ಹೇಳಿಕೊಂಡರು.
ಈ ಸಂದರ್ಶನದ ಪ್ರೋಮೋ ಬಿಡುಗಡೆಯಾಗಿದ್ದು, ಇದರಲ್ಲಿ ಹುಚ್ಚ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಪೂರ್ತಿ ಎಪಿಸೋಡ್ ಇಂದು ರಾತ್ರಿ 10 ಗಂಟೆಗೆ ಜೀ ಇಟಿಸಿ ಟಿವಿಯಲ್ಲಿ ಪ್ರಸಾರವಾಗುತ್ತಿದೆ.
ಪೈಲ್ವಾನ್ ಸಿನಿಮಾ ಬಿಟ್ಟು ಸಲ್ಮಾನ್ ಖಾನ್ ಅಭಿನಯದ 'ದಬಾಂಗ್-3' ಚಿತ್ರದಲ್ಲೂ ನಟಿಸಿದ್ದಾರೆ. ಈ ಸಿನಿಮಾ ಡಿಸೆಂಬರ್ 20 ರಂದು ಬಿಡುಗಡೆಯಾಗುತ್ತಿದೆ.


Click it and Unblock the Notifications











