For Quick Alerts
  ALLOW NOTIFICATIONS  
  For Daily Alerts

  ದಚ್ಚು ಇದ್ದ ಕಡೆ ಕಿಚ್ಚನ ಕಡೆಗಣನೆ: 'ಮುಂದುವರೆದ' ಸುದೀಪ್-ದರ್ಶನ್ ಶೀತಲ ಸಮರ 'ಅಧ್ಯಾಯ'.!

  |

  ಒಂದ್ಕಾಲ ಇತ್ತು. ಆಗ ಸುದೀಪ್ ಇದ್ದ ಕಡೆ ದರ್ಶನ್ ಇರಲೇಬೇಕಿತ್ತು. ದರ್ಶನ್ ಹೋದ ಕಡೆ ಸುದೀಪ್ ಹಾಜರಿ ಹಾಕಬೇಕಿತ್ತು. ಅಷ್ಟರಮಟ್ಟಿಗೆ 'ಅಭಿನಯ ಚಕ್ರವರ್ತಿ' ಸುದೀಪ್ ಮತ್ತು 'ಚಾಲೆಂಜಿಂಗ್ ಸ್ಟಾರ್' ದರ್ಶನ್ ನಡುವೆ ಸ್ನೇಹ, ಆತ್ಮೀಯತೆ ಇತ್ತು.

  ದುಡ್ಡು ಕೊಟ್ರೆ ದರ್ಶನ್ ಬರೀ ಕಾಚದಲ್ಲೂ ಬರ್ತಾನೆ ಅಂದಿದ್ರಂತೆ..? | Munduvareda Adhyaya | Darshan | Aditya

  ಅದ್ಯಾವ 'ಮಾರಿ' ಕಣ್ಣು ಈ ಕುಚ್ಚಿಕ್ಕು ಗೆಳೆಯರ ಗೆಳೆತನದ ಮೇಲೆ ಬಿತ್ತೋ ಗೊತ್ತಿಲ್ಲ. ಗಳಸ್ಯಕಂಠಸ್ಯದಂತೆ ಇದ್ದವರು, ದೂರ ದೂರ ಆದರು. ಹಾಗಂತ ಸುದೀಪ್ ಮತ್ತು ದರ್ಶನ್ ವೈರಿಗಳಲ್ಲ. ಆದ್ರೆ, ಇವರಿಬ್ಬರ ಮಧ್ಯೆ ಫ್ರೆಂಡ್ ಶಿಪ್ ಈಗ ಉಳಿದಿಲ್ಲ.

  ''ನಾನು ಮತ್ತು ಸುದೀಪ್ ಸ್ನೇಹಿತರಲ್ಲ. ನಾವು ಕನ್ನಡ ಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿರುವ ನಟರಷ್ಟೇ. ಇವತ್ತಿಗೆ ಎಲ್ಲವನ್ನೂ ಕೊನೆಗೊಳಿಸಿ. ಇನ್ಮುಂದೆ ನಮ್ಮಿಬ್ಬರ ಮಧ್ಯೆ ಗೆಳೆತನವಿರಲ್ಲ'' ಎಂದು ಮೂರು ವರ್ಷಗಳ ಹಿಂದೆ ಟ್ವೀಟ್ ಮಾಡಿದ್ದ ದರ್ಶನ್, ಸುದೀಪ್ ಜೊತೆಗಿನ ಸ್ನೇಹವನ್ನು ಬಹಿರಂಗವಾಗಿ ಮುರಿದುಕೊಂಡಿದ್ದರು.

  ಇದಾದ ಬಳಿಕ ಸುದೀಪ್ ಮತ್ತು ದರ್ಶನ್ ಎಲ್ಲೂ ಮುಖಾಮುಖಿ ಆಗುತ್ತಿಲ್ಲ. ದರ್ಶನ್ ಇದ್ದ ಕಡೆ ಸುದೀಪ್ ಬರಲ್ಲ. ಸುದೀಪ್ ಇದ್ದ ಜಾಗದಲ್ಲಿ ದರ್ಶನ್ ಕಾಣಿಸಿಕೊಳ್ಳಲ್ಲ. ಹೀಗಿರುವಾಗಲೇ, ದರ್ಶನ್ ಮತ್ತು ಸುದೀಪ್ ನಡುವಿನ 'ಶೀತಲ ಸಮರ' ಗಾಂಧಿನಗರದಲ್ಲಿ ಮತ್ತೆ ಸದ್ದು ಮಾಡಿದೆ. ಅದು 'ಮುಂದುವರೆದ ಅಧ್ಯಾಯ' ಚಿತ್ರದ ಟ್ರೈಲರ್ ಲಾಂಚ್ ವೇಳೆ ಆದ ಎಡವಟ್ಟಿನಿಂದ.! ಮುಂದೆ ಓದಿರಿ....

  ಟ್ರೈಲರ್ ಲಾಂಚ್ ಕಾರ್ಯಕ್ರಮ

  ಟ್ರೈಲರ್ ಲಾಂಚ್ ಕಾರ್ಯಕ್ರಮ

  ಬಾಲು ಚಂದ್ರಶೇಖರ್ ನಿರ್ದೇಶನದ ಆದಿತ್ಯ, ಆಶಿಕಾ ಗೌಡ, ಸಂದೀಪ್, ಜೈಜಗದೀಶ್ ಅಭಿನಯದ 'ಮುಂದುವರೆದ ಅಧ್ಯಾಯ' ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮ ನಿನ್ನೆ ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದಿತ್ತು. ಈ ವೇಳೆ ಪ್ರಸಾರ ಆದ ಒಂದು ವಿಡಿಯೋದಿಂದ ದರ್ಶನ್ ಮತ್ತು ಸುದೀಪ್ ನಡುವಿನ 'ಕಿಚ್ಚು' ಮತ್ತೆ ಹೊಗೆಯಾಡಲಾರಂಭಿಸಿದೆ.

  ಮಾರ್ಚ್ 5, ದರ್ಶನ್ ಮತ್ತು ಸುದೀಪ್ ಪಾಲಿಗೆ ಕರಾಳ ದಿನಮಾರ್ಚ್ 5, ದರ್ಶನ್ ಮತ್ತು ಸುದೀಪ್ ಪಾಲಿಗೆ ಕರಾಳ ದಿನ

  ಮುಖ್ಯ ಅತಿಥಿಯಾಗಿ ಬಂದಿದ್ದ ನಟ ದರ್ಶನ್

  ಮುಖ್ಯ ಅತಿಥಿಯಾಗಿ ಬಂದಿದ್ದ ನಟ ದರ್ಶನ್

  'ಮುಂದುವರೆದ ಅಧ್ಯಾಯ' ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಅತಿಥಿಯಾಗಿ ಬಂದಿದ್ದರು. ನಿಮಗೆಲ್ಲ ಗೊತ್ತಿರುವ ಹಾಗೆ ನಟ ದರ್ಶನ್ ಮತ್ತು ಆದಿತ್ಯ ಆತ್ಮೀಯ ಗೆಳೆಯರು. ಹೀಗಾಗಿ, ಸ್ನೇಹಿತ ಆದಿತ್ಯಗಾಗಿ 'ಮುಂದುವರೆದ ಅಧ್ಯಾಯ' ಟ್ರೈಲರ್ ಲಾಂಚ್ ಸಮಾರಂಭಕ್ಕೆ ದರ್ಶನ್ ಹಾಜರಾದರು.

  'ದರ್ಶನ್-ಸುದೀಪ್' ಸ್ನೇಹದ ಬಿರುಕಿಗೆ ಕಾರಣವಾಗಿದ್ದು 'ಸುದೀಪ್ ಕೊಟ್ಟ ಆ ಹೇಳಿಕೆ'!'ದರ್ಶನ್-ಸುದೀಪ್' ಸ್ನೇಹದ ಬಿರುಕಿಗೆ ಕಾರಣವಾಗಿದ್ದು 'ಸುದೀಪ್ ಕೊಟ್ಟ ಆ ಹೇಳಿಕೆ'!

  ವಿಡಿಯೋದಿಂದ ಮತ್ತೆ ವಿವಾದ

  ವಿಡಿಯೋದಿಂದ ಮತ್ತೆ ವಿವಾದ

  'ಮುಂದುವರೆದ ಅಧ್ಯಾಯ' ಚಿತ್ರದ ಟ್ರೈಲರ್ ಲಾಂಚ್ ವೇಳೆ ಕನ್ನಡ ಸಿನಿಮಾ ರಂಗದ ನಿರ್ದೇಶಕರ ಬಗ್ಗೆ ಚಿತ್ರತಂಡ ಒಂದು ವಿಡಿಯೋ ಪ್ರಸಾರ ಮಾಡಿತ್ತು. ಆ ವಿಡಿಯೋದಲ್ಲಿ ನಟ, ನಿರ್ದೇಶಕ ಸುದೀಪ್ ಅವರ ಫೋಟೋ ಮಾತ್ರ ಇರಲಿಲ್ಲ. ಇದರಿಂದ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ವಿವಾದ ಸೃಷ್ಟಿಯಾಗಿದೆ.

  ನಾನು ಸುದೀಪ್ ಇನ್ಮುಂದೆ ಗೆಳೆಯರಲ್ಲ : ದರ್ಶನ್ ತೂಗುದೀಪನಾನು ಸುದೀಪ್ ಇನ್ಮುಂದೆ ಗೆಳೆಯರಲ್ಲ : ದರ್ಶನ್ ತೂಗುದೀಪ

  ಆ ವಿಡಿಯೋದಲ್ಲಿ ಏನಿತ್ತು.?

  ಆ ವಿಡಿಯೋದಲ್ಲಿ ಏನಿತ್ತು.?

  'ಮುಂದುವರೆದ ಅಧ್ಯಾಯ' ಚಿತ್ರತಂಡ ಪ್ರಸಾರ ಮಾಡಿದ ವಿಡಿಯೋದಲ್ಲಿ, ''ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್, ಹಿರಿಯ ನಿರ್ದೇಶಕ ಸಿದ್ಧಲಿಂಗಯ್ಯ, ಭಗವಾನ್, ಭಾರ್ಗವ, ಗೀತ ಪ್ರಿಯಾ, ಗಿರೀಶ್ ಕಾರ್ನಾಡ್, ಗಿರೀಶ್ ಕಾಸರವಳ್ಳಿ, ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ದಿನೇಶ್ ಬಾಬು, ಟಿ.ಎಸ್.ನಾಗಾಭರಣ, ಕಾಶೀನಾಥ್, ಪಿ.ಶೇಷಾದ್ರಿ, ಎಂ.ಎಸ್.ರಮೇಶ್, ಸುನೀಲ್ ಕುಮಾರ್ ದೇಸಾಯಿ, ರವಿ ಶ್ರೀವತ್ಸ, ಜೈ ಜಗದೀಶ್, ನಾಗತಿಹಳ್ಳಿ ಚಂದ್ರಶೇಖರ್, ಶಿವಮಣಿ, ಉಪೇಂದ್ರ, ರಮೇಶ್ ಅರವಿಂದ್, ಸಾಧು ಕೋಕಿಲ, ದುನಿಯಾ ಸೂರಿ'' ಸೇರಿದಂತೆ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಿಂದ ಹಿಡಿದು ಇತ್ತೀಚೆಗಿನ ನಿರ್ದೇಶಕರವರೆಗಿನ ಬಹುತೇಕರ ಹೆಸರು ಮತ್ತು ಫೋಟೋ ಹೊತ್ತ ವಿಡಿಯೋ ಪ್ರಸಾರ ಮಾಡಿ ಎಲ್ಲಾ ನಿರ್ದೇಶಕರಿಗೆ ಧನ್ಯವಾದ ಅರ್ಪಿಸಿದ್ದರು. ಆದರೆ ಈ ವಿಡಿಯೋದಲ್ಲಿ ಸುದೀಪ್ ಹೆಸರು ಮತ್ತು ಫೋಟೋ ಮಿಸ್ ಆಗಿತ್ತು.

  ಸುದೀಪ್ ಎರಡನೇ ಟ್ವೀಟ್: ದರ್ಶನ್ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಕಿಚ್ಚಸುದೀಪ್ ಎರಡನೇ ಟ್ವೀಟ್: ದರ್ಶನ್ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಕಿಚ್ಚ

  ಸುದೀಪ್ ಕೂಡ ನಿರ್ದೇಶಕ ಅಲ್ಲವೇ.?

  ಸುದೀಪ್ ಕೂಡ ನಿರ್ದೇಶಕ ಅಲ್ಲವೇ.?

  ಕಿಚ್ಚ ಸುದೀಪ್ ಕೂಡ ನಿರ್ದೇಶಕ. 'ಮೈ ಆಟೋಗ್ರಾಫ್', 'ವೀರ ಮದಕರಿ', 'ಜಸ್ಟ್ ಮಾತ್ ಮಾತಲ್ಲಿ', 'ಕೆಂಪೇಗೌಡ', 'ಮಾಣಿಕ್ಯ' ಸೇರಿದಂತೆ ಹಲವು ಸಿನಿಮಾಗಳನ್ನು ಸುದೀಪ್ ನಿರ್ದೇಶಿಸಿದ್ದಾರೆ. ಹೀಗಿರುವಾಗ, ನಿರ್ದೇಶಕರ ಕುರಿತಾದ ವಿಡಿಯೋದಲ್ಲಿ ಸುದೀಪ್ ಹೆಸರು ಮತ್ತು ಫೋಟೋ ಮಿಸ್ ಆಗಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಉದ್ಭವವಾಗಿದೆ.

  ಸುದೀಪ್-ದರ್ಶನ್ ಮಧ್ಯೆ ಮಾತ್ರ ಅಲ್ಲ, 'ಮೆಜೆಸ್ಟಿಕ್' ನಿರ್ಮಾಪಕರ ನಡುವೆಯೂ ಕಿತ್ತಾಟ.!ಸುದೀಪ್-ದರ್ಶನ್ ಮಧ್ಯೆ ಮಾತ್ರ ಅಲ್ಲ, 'ಮೆಜೆಸ್ಟಿಕ್' ನಿರ್ಮಾಪಕರ ನಡುವೆಯೂ ಕಿತ್ತಾಟ.!

  ಬೇಕು ಅಂತ ಹೀಗೆ ಮಾಡಲಾಗಿದ್ಯಾ.?

  ಬೇಕು ಅಂತ ಹೀಗೆ ಮಾಡಲಾಗಿದ್ಯಾ.?

  ಟ್ರೈಲರ್ ಲಾಂಚ್ ಗೆ ದರ್ಶನ್ ಮುಖ್ಯ ಅತಿಥಿಯಾಗಿ ಬರ್ತಾರೆ ಎಂಬ ಕಾರಣಕ್ಕೋ, ಅಥವಾ ಬೇಕು ಅಂತಲೋ, ಕಣ್ತಪ್ಪಿನಿಂದಲೋ, ಗೊತ್ತಿಲ್ಲದೆಯೋ... ವಿಡಿಯೋದಲ್ಲಿ ಸುದೀಪ್ ಹೆಸರು ಮತ್ತು ಫೋಟೋನ ಮಿಸ್ ಮಾಡಲಿದ್ಯಾ.? ನಮಗಂತೂ ತಿಳಿದಿಲ್ಲ. ಆದ್ರೆ, ಇದರಿಂದ ಗಾಂಧಿನಗರದಲ್ಲಿ ದೊಡ್ಡ ವಿವಾದವಂತೂ ಶುರುವಾಗಿದೆ.

  ದರ್ಶನ್ ಬರೋಕು ಮುನ್ನವೇ ಪ್ರಸಾರ ಮಾಡಲಾಗಿತ್ತು.!

  ದರ್ಶನ್ ಬರೋಕು ಮುನ್ನವೇ ಪ್ರಸಾರ ಮಾಡಲಾಗಿತ್ತು.!

  ಹಾಗ್ನೋಡಿದ್ರೆ, 'ಮುಂದುವರೆದ ಅಧ್ಯಾಯ' ಚಿತ್ರದ ಟ್ರೈಲರ್ ಲಾಂಚ್ ಗೆ ದರ್ಶನ್ ಆಗಮಿಸುವ ಮುನ್ನವೇ 'ನಿರ್ದೇಶಕರ ಕುರಿತಾದ ವಿಡಿಯೋ' ಪ್ರಸಾರ ಮಾಡಲಾಗಿತ್ತು. ಹೀಗಿರುವಾಗ, ಸುದೀಪ್ ರನ್ನ ಕಡೆಗಣಿಸಿದ್ದು ಯಾಕೆ.? ಎಂಬುದೇ ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ.

  English summary
  Kannada Actor, Director Kiccha Sudeep photo not seen in Director's video by 'Munduvareda Adhyaya' movie team stirs controversy in Sandalwood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X