ವಿಶ್ವಕಪ್ ಸಮಯದಲ್ಲೇ ಇಂಗ್ಲೆಂಡ್ ಗೆ ಹಾರಲಿದ್ದಾರೆ ಕಿಚ್ಚ ಸುದೀಪ್
Recommended Video
ಕಿಚ್ಚ ಸುದೀಪ್ ಗೆ ಕ್ರಿಕೆಟ್ ಅಂದ್ರೆ ತುಂಬಾ ಇಷ್ಟ. ಸಿನಿಮಾ ನಟ ಆಗುವುದಕ್ಕೂ ಮುಂಚೆ ಕ್ರಿಕೆಟರ್ ಆಗಬೇಕು ಎಂಬ ಆಸೆಯನ್ನೂ ಸುದೀಪ್ ಹೊಂದಿದ್ದರಂತೆ. ಆದ್ರೆ, ಆಸೆ ನೆರವೇರವಲಿಲ್ಲ. ಸ್ಯಾಂಡಲ್ ವುಡ್ ನಲ್ಲಿ ಒಂದು ಹಂತಕ್ಕೆ ಬಂದು ನಿಂತ ಕಿಚ್ಚ, ನಂತರ ಸಿಸಿಎಲ್, ಕೆಪಿಎಲ್, ಕೆಸಿಸಿ ಅಂತಹ ಟೂರ್ನಿಗಳಲ್ಲಿ ತಂಡ ಕಟ್ಟಿ ಆಡಿದರು.
ಅದಕ್ಕು ಒಂದು ಹೆಜ್ಜೆ ಮುಂದೆ ಹೋಗಿದ್ದ ಸುದೀಪ್ ಇಂಗ್ಲೆಂಡ್ ನಲ್ಲಿ ನಡೆಯುವ ಕಾರ್ಪೊರೇಟ್ ಕ್ರಿಕೆಟ್ ಡೇ ಟೂರ್ನಿಯಲ್ಲಿ ಕೂಡ ಭಾಗವಹಿಸಿದ್ದರು. 2017ನೇ ವರ್ಷದಲ್ಲಿ ವಿಷನೈರ್ ತಂಡದ ಪರವಾಗಿ ಆಡಿ ಚಾಂಪಿಷನ್ ಆಗಿದ್ದರು.
ಇದೀಗ, ಎರಡು ವರ್ಷದ ನಂತರ ಮತ್ತೆ ಕಾರ್ಪೊರೇಟ್ ಕ್ರಿಕೆಟ್ ಡೇ ಟೂರ್ನಿ ಆಡಲು ಹೋಗುತ್ತಿದ್ದಾರೆ ಕನ್ನಡದ ನಟ. ಕಳೆದ ಬಾರಿ ರಾಜೀವ್, ಧ್ರುವ ಶರ್ಮಾ ಕೂಡ ಭಾಗವಹಿಸಿದ್ದರು. ಆದ್ರೆ, ಈ ಸಲ ಸುದೀಪ್ ಒಬ್ಬರೇ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಹೌದು, ಜೂನ್ 12 ರಂದು ಇಂಗ್ಲೆಂಡ್ ನಲ್ಲಿ ಕಾರ್ಪೊರೇಟ್ ಕ್ರಿಕೆಟ್ ಡೇ ಟೂರ್ನಿ ನಡೆಯುತ್ತಿದ್ದು, ಇದರಲ್ಲಿ ಭಾರತದಿಂದ ಏಕೈಕ ನಟ ಸುದೀಪ್ ಆಡುತ್ತಿರುವುದು ವಿಶೇಷ. ಈ ಬಗ್ಗೆ ಸ್ವತಃ ಸುದೀಪ್ ಕೂಡ ಸಂತಸ ಹಂಚಿಕೊಂಡಿದ್ದಾರೆ.
ಇನ್ನುಳಿದಂತೆ ಪೈಲ್ವಾನ್ ಸಿನಿಮಾ ಚಿತ್ರೀಕರಣ ಮುಗಿಸಿ ಕೋಟಿಗೊಬ್ಬ 3 ಮಾಡುತ್ತಿದ್ದ ಸುದೀಪ್ ಈಗ ಸಲ್ಮಾನ್ ಖಾನ್ ಅವರ ದಬಾಂಗ್ 3 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಒಂದು ಬ್ರೇಕ್ ತಗೊಂಡು ಇಂಗ್ಲೆಂಡ್ ಗೆ ಹಾರಲಿದ್ದಾರೆ.
ಮತ್ತೊಂದು ವಿಶೇಷ ಅಂದ್ರೆ ಈ ಸಲ ಇಂಗ್ಲೆಂಡ್ ನಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ನಡೆಯುತ್ತಿದೆ. ಮೇ 30 ರಿಂದ ಅಧಿಕೃತವಾಗಿ ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು, ಇದೇ ಸಮಯದಲ್ಲಿ ಸುದೀಪ್ ಕೂಡ ಇಂಗ್ಲೆಂಡ್ ನಲ್ಲಿ ಕ್ರಿಕೆಟ್ ಆಡಲಿದ್ದಾರೆ.


Click it and Unblock the Notifications











