'ನಾನ್ ಯಾವಾಗ ಏನ್ ಕೇಳಿದ್ರು ಸುದೀಪ್ ಇಲ್ಲ ಎಂದಿಲ್ಲ' ರವಿಚಂದ್ರನ್
Recommended Video
ಸ್ಯಾಂಡಲ್ ವುಡ್ ನ ಆರಡಿ ಕಟೌಟ್ ಸುದೀಪ್ ಮತ್ತು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರನ್ನು ಒಟ್ಟಿಗೆ ಸಿನಿಮಾದಲ್ಲಿ ನೋಡುವುದೆ ಅಭಿಮಾನಿಗಳಿಗೆ ದೊಡ್ಡ ಹಬ್ಬ. ರವಿಚಂದ್ರನ್ ಯಾವಾಗಲು ಸುದೀಪ್ ಅವರನ್ನು ದೊಡ್ಡ ಮಗ ಅಂತಾನೆ ಕರೆಯುತ್ತಾರೆ. ಇಬ್ಬರ ನಡುವೆ ಉತ್ತಮವಾದ ಬಾಂಧವ್ಯವಿದೆ.
ಮಾಣಿಕ್ಯ, ಹೆಬ್ಬುಲಿ ಸಿನಿಮಾದಲ್ಲಿ ಇಬ್ಬರನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ಮತ್ತೊಮ್ಮೆ ಇಬ್ಬರನ್ನು ಒಟ್ಟಿಗೆ ತೆರೆ ಮೇಲೆ ನೋಡಲು ಕಾಯುತ್ತಿದ್ದಾರೆ. ಅಭಿಮಾನಿಗಳ ಆಸೆಯಂತೆ ಆ ಸಮಯ ಕೂಡ ಬಂದಿದೆ. ಹೌದು ರವಿಚಂದ್ರನ್ ಸಿನಿಮಾದಲ್ಲಿ ಸುದೀಪ್ ಅಭಿನಯಿಸುತ್ತಿದ್ದಾರೆ.
ಈ ಬಗ್ಗೆ ರವಿಚಂದ್ರನ್ ಅವರೇ ಹೇಳಿದ್ದಾರೆ. ರವಿಚಂದ್ರನ್ ಅಭಿನಯದ ರವಿ ಬೋಪಣ್ಣ ಸಿನಿಮಾದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಮಾತನಾಡಿದ ರವಿಚಂದ್ರನ್ "ಸುದೀಪ್ ಯಾವಾಗ ಏನು ಕೇಳಿದ್ರು ಇಲ್ಲ ಅನ್ನಲ್ಲ. ರವಿಚಂದ್ರನ್ ಅನ್ನು ಹೈಲೆಟ್ ಮಾಡೋದು ಅಂದ್ರೆ ಅದು ಸುದೀಪ್. ಸಿನಿಮಾದಲ್ಲಿ ಅಭಿನಯಿಸುತ್ತೀರಾ ಅಂತ ಕೇಳಿದ್ದು ಅಷ್ಟೆ, ಯಾವಾಗ ಬರ್ಬೇಕು, ಎಲ್ಲಿ ಬರ್ಬೇಕು ಹೇಳಿ ಬರ್ತೀನಿ, ಅಂತ ಹೇಳಿದ್ರು. ನನ್ನ ಮಾತಿಗೆ ಯಾವತ್ತು ಇಲ್ಲ ಅಂತ ಹೇಳಲ್ಲ" ಎಂದು ಹೇಳುತ್ತ ಸುದೀಪ್ ಬಗ್ಗೆ ಗುಣಗಾನ ಮಾಡಿದ್ರು ರವಿಚಂದ್ರನ್.

ಅಂದ್ಹಾಗೆ ರವಿಬೋಪಣ್ಣ ಸಸ್ಪೆನ್ಸ್ ಜಾನರ್ ಸಿನಿಮಾ. ಈಗಾಗಲೆ ಚಿತ್ರೀಕರಣ ಪ್ರಾರಂಭವಾಗಿದ್ದು ಬಹುತೇಕ ಚಿತ್ರೀಕರಣ ಮಡಿಕೇರಿಯಲ್ಲೆ ನಡೆಯುತ್ತಿದೆ. ಇದೊಂದು ಸೈಬರ್ ಕ್ರೈಮ್ ಸುತ್ತಾ ನಡೆಯುವ ಕಥೆ. ಸೈಬರ್ ಸೆಲ್ ಪೊಲೀಸ್ ಅಧಿಕಾರಿಯಾಗಿ ರವಿಚಂದ್ರನ್ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಚಿತ್ರಕ್ಕಾಗಿ ರವಿಚಂದ್ರನ್ ಹೊಸ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ಉದ್ದನೆಯ ಹಣ್ಣುಹಣ್ಣು ಗಡ್ಡದಲ್ಲಿ ರವಿಚಂದ್ರನ್ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ರವಿ ಬೋಪಣ್ಣ ಸಿನಿಮಾ ಮಲಯಾಳಂನ ಜೋಸೆಪ್ ಸಿನಿಮಾದ ರಿಮೇಕ್ ಆಗಿದೆ. ಈ ಚಿತ್ರದಲ್ಲಿ ಸುದೀಪ್ ಯಾವ ಪಾತ್ರದಲ್ಲಿ ಮಿಂಚಲಿದ್ದಾರೆ ಎನ್ನುವುದನ್ನು ಕಾತದುನೋಡಬೇಕು.


Click it and Unblock the Notifications











