ಮತ್ತೆ ಅಮಿತಾಭ್ ಜೊತೆಗೆ ನಟಿಸುತ್ತಿದ್ದಾರೆ ಕಿಚ್ಚ ಸುದೀಪ್
ನಟ ಸುದೀಪ್ ಅವರಿಗೆ ಬಾಲಿವುಡ್ ಚಿತ್ರರಂಗ ಹೊಸದೇನು ಅಲ್ಲ. ಹಿಂದಿ ಚಿತ್ರರಂಗದಲ್ಲಿ ಈಗಾಗಲೇ ಮೂರು ಸಿನಿಮಾ ಮಾಡಿರುವ ಕಿಚ್ಚ ಅಲ್ಲಿನ ಕೆಲವು ಕಲಾವಿದರ ಜೊತೆಗೆ ಒಳ್ಳೆಯ ಸ್ನೇಹ ಹೊಂದಿದ್ದಾರೆ. ಹೀಗಿರುವಾಗಲೇ, ಬಾಲಿವುಡ್ ನಿಂದ ಸುದೀಪ್ ಗೆ ಬುಲಾವ್ ಬಂದಿದೆ.
ಸುದೀಪ್ ಈಗ ಮತ್ತೆ ಅಮಿತಾಬ್ ಬಚ್ಚನ್ ಜೊತೆಗೆ ನಟಿಸಲಿದ್ದಾರೆ. 2002 ಬಿಡುಗಡೆಯಾಗಿದ್ದ 'ಆಂಖೇ' ಸಿನಿಮಾದ ಪಾರ್ಟ್ 2 ಚಿತ್ರದಲ್ಲಿ ಸುದೀಪ್ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರಂತೆ.

ಅಂದಹಾಗೆ, 'ಆಂಖೇ 2' ಸಿನಿಮಾ ಮುಂದಿನ ವರ್ಷ ಪ್ರಾರಂಭ ಆಗಲಿದ್ದು, 2020ಕ್ಕೆ ಬಿಡುಗಡೆ ಮಾಡುವ ಯೋಜನೆ ಇದೆಯಂತೆ. ಅನೀಸ್ ಬಾಜ್ಮೀ ಈ ಚಿತ್ರವನ್ನ ನಿರ್ದೇಶನ ಮಾಡಲಿದ್ದಾರೆ. ಕೆಲವು ದಿನಗಳ ನಂತರ ಚಿತ್ರದ ಇನ್ನಷ್ಟು ಮಾಹಿತಿ ತಿಳಿಯಲಿದೆ.

ಇನ್ನು ಈ ಹಿಂದೆ ಅಮಿತಾಬ್ ಬಚ್ಚನ್ ಅವರ ಚಿತ್ರದಲ್ಲಿಯೇ ಸುದೀಪ್ ನಟಿಸಿದ್ದರು. 'ರಣ್' ಸಿನಿಮಾದ ಮೂಲಕ ಬಾಲಿವುಡ್ ನ ಬಿಗ್ ಬಿ ಜೊತೆಗೆ ಸುದೀಪ್ ತೆರೆ ಹಂಚಿಕೊಂಡಿದ್ದರು.
English summary
Kannada actor Sudeep playing important role in Amitabh Bachchan's 'Aankhen 2' movie.


Click it and Unblock the Notifications