For Quick Alerts
  ALLOW NOTIFICATIONS  
  For Daily Alerts

  ಸಂಚಾರಿ ವಿಜಯ್ ಜೊತೆ ಬ್ಯಾಡ್ಮಿಂಟನ್ ಆಡಿದ ನಟ ಸುದೀಪ್

  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅದ್ಭುತ ಕ್ರೀಡಾಪಟು. ಅದರಲ್ಲೂ ಕ್ರಿಕೆಟ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ನಟ. ಭಾರತ ಕ್ರಿಕೆಟ್ ತಂಡದಲ್ಲಿ ಆಡಬೇಕು ಎಂಬ ಕನಸು ಹೊಂದಿದ್ದರು. ಆದರೆ, ಕಾರಣಾತರಗಳಿಂದ ಆ ಆಸೆ ನೆರವೇರಿಸಿಕೊಳ್ಳಲು ಸಾಧ್ಯವಿಲ್ಲ.

  ಸಿಸಿಲ್, ಕೆಸಿಸಿ, ರಾಜ್ ಕಪ್, ಕೆಪಿಎಲ್ ಹೀಗೆ ಅನೇಕ ಟೂರ್ನಿಗಳಲ್ಲಿ ಪಾಲ್ಗೊಂಡಿರುವ ಸುದೀಪ್ ಹಲರಿಗೆ ಸ್ಫೂರ್ತಿ. ಸುದೀಪ್ ಓರ್ವ ಕ್ರಿಕೆಟ್ ಆಟಗಾರ ಎನ್ನುವುದು ಗೊತ್ತಿತ್ತು. ಆದರೆ, ಬ್ಯಾಡ್ಮಿಂಟನ್ ಆಟವನ್ನು ಸಹ ಸುದೀಪ್ ಆಡುತ್ತಾರೆ ಎನ್ನುವುದು ತಿಳಿದಿರಲಿಲ್ಲ.

  ಹಿರಿಯ ನಿರ್ದೇಶಕ ಎ.ಟಿ ರಘು ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ ಕಿಚ್ಚ ಸುದೀಪ್ಹಿರಿಯ ನಿರ್ದೇಶಕ ಎ.ಟಿ ರಘು ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ ಕಿಚ್ಚ ಸುದೀಪ್

  ಇತ್ತೀಚಿಗಷ್ಟೆ ಸುದೀಪ್ ಬ್ಯಾಡ್ಮಿಂಟನ್ ಆಟ ಆಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಜೊತೆ ಬ್ಯಾಡ್ಮಿಂಟನ್ ಆಡುವ ಮೂಲಕ ಸುದೀಪ್ ಸುದ್ದಿಯಾಗಿದ್ದಾರೆ. ಈ ಫೋಟೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಜೆಪಿ ನಗರದ ಕ್ಲಬ್‌ನಲ್ಲಿ ಸುದೀಪ್ ಬ್ಯಾಡ್ಮಿಂಟನ್ ಆಡಿದ್ದು, ಫ್ಯಾಂಟಮ್ ನಿರ್ದೇಶಕ ಅನೂಪ್ ಭಂಡಾರಿ ಸಹ ಸಾಥ್ ನೀಡಿದ್ದಾರೆ. ಫಿಟ್ನೆಸ್ ಕಾರಣದಿಂದ ಸುದೀಪ್ ಅವರು ಜಿಮ್ ಜೊತೆ ಜೊತೆಗೆ ಕ್ರಿಕೆಟ್, ಬ್ಯಾಡ್ಮಿಂಟನ್ ಆಡುವುದು ವೃತ್ತಿಯಾಗಿಸಿಕೊಂಡಿದ್ದಾರೆ.

  ಈ ಕುರಿತು ಸಂಚಾರಿ ವಿಜಯ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಶೇರ್ ಮಾಡಿದ್ದು '' ಅಪರೂಪದ ಸಂಜೆ, ಕಿಚ್ಚ ಸುದೀಪ್ ಅವರ ಜೊತೆ ಬ್ಯಾಡ್ಮಿಂಟನ್ ಆಡುವ ಅವಕಾಶ ಸಿಕ್ತು. ನಮಗೆ ಸ್ಫೂರ್ತಿಯಾಗಿದ್ದಕ್ಕೆ ಧನ್ಯವಾದ ಸರ್'' ಎಂದು ಥ್ಯಾಂಕ್ಸ್ ಹೇಳಿದ್ದಾರೆ.

  "ಮಡದಿಯೋ ಗೆಳತಿಯೋ ಏನೆಂದು ಕರೆಯಲಿ ನಿನ್ನ": ಪತ್ನಿ ಬರ್ತಡೇಗೆ ಸುದೀಪ್ ಭರ್ಜರಿ ಗಿಫ್ಟ್

  ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಸಿನಿಮಾ ಚಿತ್ರೀಕರಣ ಮುಗಿಸಿರುವ ಸುದೀಪ್ ಬಿಗ್ ಬಾಸ್ ಕನ್ನಡ ಹೊಸ ಆವೃತ್ತಿ ಆರಂಭಿಸಲು ತಯಾರಾಗುತ್ತಿದ್ದಾರೆ. ಕೋಟಿಗೊಬ್ಬ 3 ಸಿನಿಮಾ ಸಹ ಬಿಡುಗಡೆಗೆ ಸಜ್ಜಾಗಿದೆ.

  K P Srikanth On Theatre Release & OTT:ನಾಳೆ ಸಂಜೆ 6 ಗಂಟೆಗೆ Vijay ಎಲ್ಲವನ್ನು ಹೇಳ್ತಾರೆ | FilmibeatKannada
  English summary
  Abhinaya Chakravarthi Kiccha sudeep plays badminton with national award winning actor Sanchari Vijay.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X