ರಿಷಬ್ ಶೆಟ್ಟಿಯ 'ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ' ಮೆಚ್ಚಿದ ಸುದೀಪ್

By Bharath Kumar

'ಕಿರಿಕ್ ಪಾರ್ಟಿ' ಖ್ಯಾತಿಯ ರಿಷಬ್ ಶೆಟ್ಟಿ ನಿರ್ದೇಶನದ 'ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕಾಸರಗೂಡು' ಚಿತ್ರದ ಆಡಿಯೋ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಕೋರಿದರು. ಬೆಲ್ ಹೊಡೆಯುವ ಮೂಲಕ ಬಹಳ ವಿಭಿನ್ನವಾಗಿ ಚಿತ್ರ ಆಡಿಯೋ ರಿಲೀಸ್ ಮಾಡಿದ ಸುದೀಪ್ ಸ್ವತಃ ಖುಷಿಯಾದರು.

ಬಳಿಕ ಮಾತನಾಡಿದ ಸುದೀಪ್ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ''ಚಿತ್ರದ ದೃಶ್ಯಗಳನ್ನ ನೋಡಿದಾಗ ತುಂಬಾ ಖುಷಿ ಆಗುತ್ತೆ. ತುಂಬಾ ಚೆನ್ನಾಗಿ ಸೆರೆ ಹಿಡಿದಿದ್ದಾರೆ. ಈ ರೀತಿ ಸಿನಿಮಾ ಮಾಡ್ಬೇಕು ಅಂದ್ರೆ ಸುಲಭವಲ್ಲ. ಅದನ್ನ ಅನುಭವಿಸಿ ಚಿತ್ರ ಮಾಡಿದ್ದಾರೆ ಅಂತ ಅನಿಸ್ತಿದೆ. ಚಿತ್ರದ ಎರಡು ಹಾಡುಗಳಲ್ಲಿಯೂ ಕೂಡ ಅಷ್ಟೇ ಅದ್ಭುತವಾಗಿ ಮೇಕಿಂಗ್ ಮಾಡಿದ್ದಾರೆ'' ಎಂದು ಶ್ಲಾಘಿಸಿದರು.

Sudeep praise director rishab shetty

''ರಿಷಬ್ ಶೆಟ್ಟಿ ಅವರ ಜೀವನದಲ್ಲಿ ಒಳ್ಳೆಯ ಬೆಳವಣಿಗೆ ಕಾಣ್ತಿದ್ದಾರೆ. ತುಂಬಾ ಹಳೆಯ ಪರಿಚಯ. ಒಂದು ಕಡೆ ಮಕ್ಕಳ ಸಿನಿಮಾ ಮಾಡಿದ್ದಾರೆ, ಅದೇ ರೀತಿ ನಾಯಕನಾಗಿ ಎರಡು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಒಳ್ಳೆಯದಾಗಲಿ'' ಎಂದು ಸುದೀಪ್ ಶುಭಕೋರಿದರು.

ಈಗಾಗಲೇ ಚಿತ್ರದ ಶೂಟಿಂಗ್ ಮುಗಿದಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾದ ಮೂರು ಹಾಡುಗಳು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿ ಆನ್‌ ಲೈನ್‌ನಲ್ಲಿ ಹಿಟ್‌ ಆಗಿದೆ.

Sudeep praise director rishab shetty

ಅದರಲ್ಲೂ 'ದಡ್ಡ ದಡ್ಡ ಸಾಂಗ್' ಅಂತೂ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಸಂಗೀತ ನಿರ್ದೇಶಕ ವಾಸುಕಿ ವೈಭವ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನುಳಿದಂತೆ ಅನಂತ್ ನಾಗ್ ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

More from Filmibeat

English summary
Kannada actor sudeep has praise director rishab shetty's sarkari hiriya prathamika shale movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X