ಕಿಚ್ಚನಿಗೆ ಪೈಪೋಟಿ ನೀಡಿದ 'ಸೂಪರ್ ಸ್ಟಾರ್': ಸುದೀಪ್ ಫುಲ್ ಫಿದಾ
ಕಿಚ್ಚ ಸುದೀಪ್ 'ದಿ ವಿಲನ್' ಶೂಟಿಂಗ್ ಮುಗಿಸಿ 'ಪೈಲ್ವಾನ್' ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ. ಸಿನಿಮಾ ಘೋಷಣೆಯಾದಾಗ 'ಪೈಲ್ವಾನ್' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಸುದೀಪ್ ಅವರ ಈ ಲುಕ್ ಸಖತ್ ಸೌಂಡ್ ಮಾಡಿತ್ತು. ಈ ಲುಕ್ ಬಿಡುಗಡೆಯಾಗಿ ಸುಮಾರು ತಿಂಗಳು ಕಳೆದಿದೆ. ಇನ್ನು ಈ ಗೆಟಪ್ ನ ಹವಾ ಕಮ್ಮಿಯಾಗಿಲ್ಲ.
ಇದಕ್ಕೆ ಉದಾಹರಣೆ ಸುದೀಪ್ ಮಾಡಿರುವ ಕಾಮೆಂಟ್. ಹೌದು, ಕಿಚ್ಚ ಸುದೀಪ್ ಅವರ 'ವಿಲನ್' ಲುಕ್ ನಲ್ಲಿ ಅಭಿಮಾನಿಯೊಬ್ಬ ಹೇರ್ ಕಟ್ ಮಾಡಿಸಿ ಫೋಸ್ ಕೊಟ್ಟಿದ್ದಾರೆ. ಆದ್ರೆ, ಆ ವ್ಯಕ್ತಿಯ ಮಗನಿಗೆ 'ಪೈಲ್ವಾನ್' ಗೆಟಪ್ ಮಾಡಿಸಿದ್ದಾರೆ. ಈ ಫೋಟೋಗಳು ಸುದೀಪ್ ಅವರ ಕಣ್ಣಿಗೆ ಬಿದ್ದಿದೆ.
ಈ ಪುಟ್ಟ ಕಂದನ 'ಪೈಲ್ವಾನ್' ಲುಕ್ ನೋಡಿ ಅಭಿನಯ ಚಕ್ರವರ್ತಿ ಮನಸೋತಿದ್ದಾರೆ. ''ಈ ಮಗುವಿನ ಕ್ಯೂಟ್ ನೆಸ್ ಗೆ ನಾನು ಸ್ಪರ್ಧಿಯಲ್ಲ'' ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟರ ಮಟ್ಟಿಗೆ ಈ ಜೂನಿಯರ್ ಪೈಲ್ವಾನ್ ಆಕರ್ಷಣೆ ಮಾಡುತ್ತಿದ್ದಾರೆ.

ಈಗಾಗಲೇ 'ಪೈಲ್ವಾನ್' ಚಿತ್ರದ ಅಧಿಕೃತವಾಗಿ ಸೆಟ್ಟೇರಿದೆ. ಏಪ್ರಿಲ್ ತಿಂಗಳಲ್ಲಿ ಚಿತ್ರೀಕರಣ ಶುರು ಮಾಡಲಿದೆ. 'ಹೆಬ್ಬುಲಿ' ನಿರ್ದೇಶನ ಮಾಡಿದ್ದ ಕೃಷ್ಣ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನುಳಿದಂತೆ ಕಲಾವಿದರ ಬಗ್ಗೆ ಮಾಹಿತಿ ಬಿಟ್ಟುಕೊಡದ ಚಿತ್ರತಂಡ ಸ್ಟಾರ್ ಕಲಾವಿದರನ್ನ ಕರೆತರುವ ತಯಾರಿಯಲ್ಲಿದೆ.
ಮತ್ತೊಂದೆಡೆ ಪ್ರೇಮ್ ನಿರ್ದೇಶನದ 'ದಿ ವಿಲನ್' ಸಿನಿಮಾ ಶೂಟಿಂಗ್ ಬಹುತೇಕ ಮುಗಿದಿದ್ದು, ಈ ಚಿತ್ರದಲ್ಲಿ ಸುದೀಪ್ ಅವರನ್ನ ನೋಡಲು ಕಿಚ್ಚ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.


Click it and Unblock the Notifications











