»   » 'ಪೈಲ್ವಾನ್' ಚಿತ್ರಕ್ಕಾಗಿ ಸುದೀಪ್ ತಯಾರಿ ಹೇಗಿರಲಿದೆ?

'ಪೈಲ್ವಾನ್' ಚಿತ್ರಕ್ಕಾಗಿ ಸುದೀಪ್ ತಯಾರಿ ಹೇಗಿರಲಿದೆ?

Posted By:
Subscribe to Filmibeat Kannada

'ದಿ ವಿಲನ್' ಚಿತ್ರದ ನಂತರ ಕಿಚ್ಚ ಸುದೀಪ್ ಹೆಬ್ಬುಲಿ ಕೃಷ್ಣ ನಿರ್ದೇಶನ ಮಾಡಲಿರುವ 'ಪೈಲ್ವಾನ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಸುದೀಪ್ ಕುಸ್ತಿಪಟು ಆಗಿ ಅಭಿನಯಿಸಲಿದ್ದಾರೆ.

ಚೊಚ್ಚಲ ಬಾರಿಗೆ ಇಂತಹದೊಂದು ಪಾತ್ರ ನಿರ್ವಹಿಸುತ್ತಿರುವ ಸುದೀಪ್ ಈ ಪಾತ್ರಕ್ಕಾಗಿ ಸಂಪೂರ್ಣವಾಗಿ ಮೇಕ್ ಓವರ್ ಮಾಡಿಕೊಳ್ಳಬೇಕಿದೆ. ಬಾಕ್ಸಿಂಗ್ ಕಲಿಯಬೇಕಿದೆ. ಇದಕ್ಕಾಗಿ ನಿರ್ದೇಶಕ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ಹಾಗಿದ್ರೆ, ಪೈಲ್ವಾನ್ ಚಿತ್ರದಲ್ಲಿ ಸುದೀಪ್ ಅವರ ತಯಾರಿ ಹೇಗಿರಲಿದೆ? ಸುದೀಪ್ ಯಾರ ಬಳಿ ಟ್ರೈನಿಂಗ್ ಪಡೆಯಲಿದ್ದಾರೆ ಎಂಬುದನ್ನ ತಿಳಿಯಲು ಮುಂದೆ ಓದಿ....

ನುರಿತ ಬಾಕ್ಸರ್ ಗಳಿಂದ ತರಬೇತಿ

'ಪೈಲ್ವಾನ್' ಚಿತ್ರಕ್ಕಾಗಿ ಸುದೀಪ್ ಅವರಿಗೆ ನುರಿತ ಬಾಕ್ಸರ್ ಗಳಿಂದ ತರಬೇತಿ ನೀಡಲಾಗುವುದು. ಇದಕ್ಕಾಗಿ ಎರಡು ಕ್ರೀಡಾ ಸಂಸ್ಥೆಗಳನ್ನ ಕೂಡ ಸಂಪರ್ಕಿಸಲಾಗಿದೆಯಂತೆ.

'ಪೈಲ್ವಾನ್' ಚಿತ್ರದಲ್ಲಿ ಸುದೀಪ್ ಬರೀ ಬಾಕ್ಸರ್ ಅಲ್ಲ, ಕುಸ್ತಿಪಟು ಕೂಡ.!

ವಿದೇಶದಲ್ಲಿ ಆಕ್ಷನ್ ದೃಶ್ಯಗಳ ಶೂಟಿಂಗ್

ದಕ್ಷಿಣ ಭಾರತದ ಖ್ಯಾತ ಸಾಹಸ ನಿರ್ದೇಶಕ ರವಿವರ್ಮ 'ಪೈಲ್ವಾನ್' ಚಿತ್ರಕ್ಕೆ ಸ್ಟಂಟ್ ಡೈರೆಕ್ಟರ್ ಆಗಿದ್ದು, ಕೆಲವು ಬಾಕ್ಸಿಂಗ್ ಹಾಗೂ ಕ್ಲೈಮ್ಯಾಕ್ಸ್ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದೆಯಂತೆ.

'ಪೈಲ್ವಾನ್' ಪೋಸ್ಟರ್ ಬಗ್ಗೆ ಕನ್ನಡ ಸೆಲೆಬ್ರಿಟಿಗಳು ಏನಂದ್ರು ನೋಡಿ?

ನಾಯಕಿಗೆ ಮುಖ್ಯ ಪಾತ್ರವಿದೆ

ಸಾಮಾನ್ಯವಾಗಿ ಸ್ಟಾರ್ ನಟರ ಚಿತ್ರಗಳಲ್ಲಿ ನಾಯಕಿ ಪಾತ್ರಕ್ಕೆ ಅಷ್ಟೇನೂ ಪ್ರಾಮುಖ್ಯತೆ ಇರುವುದಿಲ್ಲ. ಆದ್ರೆ, 'ಪೈಲ್ವಾನ್' ಚಿತ್ರದಲ್ಲಿ ನಾಯಕಿಗೆ ಬಹುಮುಖ್ಯ ಪಾತ್ರವಂತೆ. ಇಡೀ ಚಿತ್ರ ನಾಯಕಿ ಸುತ್ತ ಸಾಗುತ್ತಂತೆ.

ನಾಯಕಿ ಯಾರು

ಹೀಗಾಗಿ, ನಾಯಕಿ ಪಾತ್ರಕ್ಕಾಗಿ ನಟಿಯನ್ನ ಹುಡುಕಲಾಗುತ್ತಿದೆ. ಸದ್ಯಕ್ಕೆ ಯಾವ ನಟಿಯೂ ಆಯ್ಕೆ ಆಗಿಲ್ಲ. ಕೆಲವರನ್ನ ಸಂಪರ್ಕಿಸಿದ್ದರೂ, ಇನ್ನು ಅಂತಿಮವಾಗಿಲ್ಲ.

ಯಾವಾಗ ಆರಂಭ

'ಹೆಬ್ಬುಲಿ' ಚಿತ್ರದ ನಂತರ ಕೃಷ್ಣ ಆಕ್ಷನ್ ಕಟ್ ಹೇಳುತ್ತಿದ್ದು, ತಮ್ಮದೇ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ. ಕರುಣಾಕರ್ ಕ್ಯಾಮೆರಾ ವರ್ಕ್ ಇದೆ. ಎಲ್ಲ ಅಂದುಕೊಂಡಂತೆ ಆದ್ರೆ, ಅಕ್ಟೋಬರ್ ಮೊದಲ ವಾರದಲ್ಲಿ 'ಪೈಲ್ವಾನ್' ಸೆಟ್ಟೇರಲಿದೆ.

'ಪೈಲ್ವಾನ್' ಆದ ಕಿಚ್ಚ ಸುದೀಪ್ ಪರಾಕ್ರಮಕ್ಕೆ ತಲೆ ಬಾಗಿದ ಅಭಿಮಾನಿಗಳು!

English summary
kiccha Sudeep will be trained by skilled wrestlers for 'Paivalvan' movie directed by Hebhuli Krishna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada