»   » ತೆಲುಗು ಚಿತ್ರದಲ್ಲಿ ಸುದೀಪ್, ರಮ್ಯಾ ಲವ್ಲಿ ಜೋಡಿ

ತೆಲುಗು ಚಿತ್ರದಲ್ಲಿ ಸುದೀಪ್, ರಮ್ಯಾ ಲವ್ಲಿ ಜೋಡಿ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಒಂದು ಕಾಲದ ಲವ್ಲಿ ಜೋಡಿ ಕಿಚ್ಚ ಸುದೀಪ್ ಹಾಗೂ ರಮ್ಯಾ ತೆಲುಗು ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. ಅರೆ ಇಸ್ಕಿ ಅದ್ಯಾವುದಪ್ಪಾ ಇವರಿಬ್ಬರೂ ಒಟ್ಟಿಗೆ ಅಭಿನಯಿಸಿರುವ ಚಿತ್ರ ಎಂಬುದು ತಾನೆ ನಿಮ್ಮ ಡೌಟು. ಮುಂದೆ ಓದಿ ನಿಮಗೇ ಗೊತ್ತಾಗುತ್ತದೆ.

ಎಸ್ ಎಸ್ ರಾಜಮೌಳಿ ನಿರ್ದೇಶನದ 'ಈಗ' ಚಿತ್ರ ಯಶಸ್ವಿಯಾಗಿದ್ದೇ ತಡ ಸುದೀಪ್ ಅಭಿನಯದ ಕನ್ನಡ ಚಿತ್ರಗಳ ಡಬ್ಬಿಂಗ್ ರೈಟ್ಸ್ ಗೆ ಭಾರಿ ಬೇಡಿಕೆ ಬಂದಿದೆ. ತೆಲುಗು ಚಿತ್ರರಂಗದ ನಿರ್ಮಾಪಕರು ಸುದೀಪ್ ಅಭಿನಯದ ಸಾಲು ಸಾಲು ಕನ್ನಡ ಚಿತ್ರಗಳ ಡಬ್ಬಿಂಗ್ ರೈಟ್ಸ್ ಗೆ ಮುಗಿಬಿದ್ದಿದ್ದಾರೆ.

2010ರಲ್ಲಿ ತೆರೆಕಂಡಿದ್ದ ಸುದೀಪ್ ಹಾಗೂ ಗೋಲ್ಡನ್ ಗರ್ಲ್ ರಮ್ಯಾ ಅಭಿನಯದ ರೀಮೇಕ್ ಚಿತ್ರ 'ಕಿಚ್ಚ ಹುಚ್ಚ'. ಈ ಚಿತ್ರದ ಡಬ್ಬಿಂಗ್ ರೈಟ್ಸ್ ತೆಲುಗು ಚಿತ್ರಗಳ ನಿರ್ಮಾಪಕ ಅರಿಗೇಳ ಕಿಶೋರ್ ಪಾಲಾಗಿವೆ. ಇತ್ತೀಚೆಗೆ ಈ ಚಿತ್ರದ ಆಡಿಯೋ ಕೂಡ ಬಿಡುಗಡೆಯಾಗಿದ್ದು ಚಿತ್ರದ ಟ್ರೇಲರ್ ಗಳು ಆಂಧ್ರದಲ್ಲಿ ಭಾರಿ ಕ್ರೇಜ್ ಹುಟ್ಟಿಸಿವೆ.

ಗುರುದತ್ ನಿರ್ದೇಶನದ 'ಕಿಚ್ಚ ಹುಚ್ಚ' ಪಕ್ಕಾ ಆಕ್ಷನ್ ಪ್ರಧಾನ ಚಿತ್ರವಾಗಿದೆ. ಕೆ ಮಂಜು ನಿರ್ಮಾಣದ ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಕನ್ನಡದಲ್ಲಿ ಈ ಚಿತ್ರ ತಕ್ಕಮಟ್ಟಿಗೆ ದುಡ್ಡು ಮಾಡಿದರೂ ಹೇಳಿಕೊಳ್ಳುವಂತಹ ಸದ್ದು ಮಾಡಿರಲಿಲ್ಲ.

ಈಗ ತೆಲುಗಿಗೆ ಡಬ್ ಆಗಿರುವ ಈ ಚಿತ್ರ ತೆಲುಗು ಪ್ರೇಕ್ಷಕರಲ್ಲಿ ಒಂದಷ್ಟು ಕುತೂಹಲವನ್ನು ಮೂಡಿಸಿದೆ. ಹೇಳಿ ಕೇಳಿ ತೆಲುಗು ಚಿತ್ರರಂಗದ ಪ್ರೇಕ್ಷಕರು ಪಕ್ಕಾ ಮಾಸ್ ಪ್ರಿಯರು. ಹಾಗಾಗಿ ಈ ಚಿತ್ರದ ಅಡಿಬರಹವನ್ನು 'ಪಕ್ಕಾ ಮಾಸ್' ಎಂದು ಇಡಲಾಗಿದೆ.

ಪ್ರಣಯ ರಾಜ ಶ್ರೀನಾಥ್, ರಂಗಾಯಣ ರಘು, ಐಂದ್ರಿತಾ ರೇ (ಅತಿಥಿ ಪಾತ್ರ) ಮುಂತಾದವರು ಅಭಿನಯಿಸಿರುವ ಈ ಚಿತ್ರ ತಮಿಳಿನ 'ಚಿತ್ರಂ ಪೆಸುತಾಡಿ' ರೀಮೇಕ್. ತಮಿಳು ಚಿತ್ರವನ್ನು ಫ್ರೇಂ ಟು ಫ್ರೇಂ ಭಟ್ಟಿ ಇಳಿಸದೆ ಇಲ್ಲಿನ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ತೆರೆಗೆ ತಂದಿದ್ದರು ಗುರುದತ್. ತಮಿಳಿನಿಂದ ಕನ್ನಡಕ್ಕೆ ರೀಮೇಕ್ ಆಗಿ ಕನ್ನಡದಿಂದ ತೆಲುಗಿಗೆ ಡಬ್ ಆಗಿರುವುದು ವಿಚಿತ್ರ ಎನ್ನಬೇಕು. (ಒನ್ ಇಂಡಿಯಾ ಕನ್ನಡ)

English summary
Telugu films producer Arigela Kishore has bought the dubbing rights of Kannada movie "Kiccha Huccha" And Going to release in Telugu as "Kiccha", actor Sudeep and Ramya played in lead roles. This movie dubbing work is in process, Ramya acted opposite to Sudeep in this movie. Guru Dutt is the director of this film and K Manju is producer.
Please Wait while comments are loading...