ಫೆಬ್ರವರಿಯಲ್ಲೇ 'ರನ್ನ' ಬಿಡುಗಡೆಯಾಗುತ್ತಿದೆ ಚಿನ್ನಾ

By Rajendra

ಸ್ಯಾಂಡಲ್ ವುಡ್ ಚಿತ್ರರಂಗ ಮತ್ತೊಂದು ಭಾರಿ ಬಜೆಟ್ ಚಿತ್ರಕ್ಕೆ ಸಜ್ಜಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಹುನಿರೀಕ್ಷೆಯ ರನ್ನ ಚಿತ್ರ ಫೆಬ್ರವರಿಯಲ್ಲಿ ಬಿಡುಗಡೆ ಮಾಡಲು ಭರ್ಜರಿ ತಯಾರಿ ನಡೆದಿದೆ.

ಥೈಲ್ಯಾಂಡ್, ಮಲೇಷ್ಯಾದಲ್ಲಿ ಚಿತ್ರೀಕರಣ ಮುಗಿಸಿಕೊಂಡು ಸುದೀಪ್ ವಾಪಸ್ಸಾಗಿದ್ದಾರೆ. ಇನ್ನೇನಿದ್ದರೂ ನಿರ್ಮಾಣನಂತರದ ಕೆಲಸಗಳಷ್ಟೇ ಬಾಕಿ ಇವೆ. ಥೈಲ್ಯಾಂಡ್ ನಲ್ಲಿ ಫೈಟಿಂಗ್ ಸನ್ನಿವೇಶವನ್ನು ಖ್ಯಾತ ಸ್ಟಂಟ್ ಮಾಸ್ಟರ್ ಪೀಟರ್ ಹೇನ್ ಅವರ ನಿರ್ದೇಶನದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. [ಕಿಚ್ಚ ಸುದೀಪ್ 'ರನ್ನ' ಶೀರ್ಷಿಕೆ ಅಂತರಾರ್ಥ ಏನು?]

Sudeep's Ranna to release in February

ರನ್ನ ಚಿತ್ರವು ತೆಲುಗಿನ ಯಶಸ್ವಿ ಚಿತ್ರ 'ಅತ್ತಾರಿಂಟಿಕಿ ದಾರೇದಿ' ಚಿತ್ರದ ರೀಮೇಕ್. ಪವನ್ ಕಲ್ಯಾಣ್ ಅಭಿನಯಿಸಿದ್ದ ಈ ಚಿತ್ರಕ್ಕೆ ತ್ರಿವಿಕ್ರಮ್ ಆಕ್ಷನ್ ಕಟ್ ಹೇಳಿದ್ದಾರೆ. ತೆಲುಗಿನಲ್ಲಿ ಏಕತಾನತೆಯನ್ನು ಮುರಿದಂತಹ ಚಿತ್ರ ಇದು. ಸರಿಸುಮಾರು ರು.55 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ ಚಿತ್ರ ಬಾಕ್ಸ್ ಆಫೀಸಲ್ಲಿ ರು.85 ಕೋಟಿ ಬಾಚಿತು. ಕನ್ನಡದಲ್ಲಿ ನಂದಕಿಶೋರ್ ಆಕ್ಷನ್ ಕಟ್ ಹೇಳಿದ್ದಾರೆ.

ಸಾಕಷ್ಟು ಹಿಂದೆಯೇ 'ರನ್ನ' ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿತ್ತು. ಅದರ ಒಂದು ಭರ್ಜರಿ ಡೈಲಾಗ್ ಹೀಗಿದೆ, "ನಾನೊಂಥರಾ ತ್ರಿಡಿ ಪಿಕ್ಚರ್ ಇದ್ದಾಗೆ. ಹತ್ತಿರದಿಂದ ನೋಡಿದರೂ ದೂರದಿಂದ ನೋಡಿದರೂ ಮಂಜು ಮಂಜಾಗೇ ಕಾಣಿಸ್ತೀನಿ. ತಾಳ್ಮೆ ಎಂಬ ಕನ್ನಡಕ ಹಾಕಿಕೊಂಡು ಕರೆಕ್ಟಗಾಗಿ ನೋಡಿದರೆ ಮಾತ್ರ ಈ ಆರಡಿ ಕಟೌಟ್ ಗೆ ಒಂದು ಕ್ಲಾರಿಟಿ ಸಿಗೋದು".

ರಚಿತಾ ರಾಮ್, ಹರಿಪ್ರಿಯಾ ಚಿತ್ರದ ನಾಯಕಿಯರು. ಸುದೀಪ್ ಅವರಿಗೆ ಸೋದರತ್ತೆಯಾಗಿ ರೋಜಾ ಖ್ಯಾತಿಯ ಮಧು ಕಾಣಿಸಲಿದ್ದಾರೆ. ವಿ ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದ್ದು ಎಂ ಚಂದ್ರಶೇಖರ್ ಛಾಯಾಗ್ರಹಣವಿದೆ. (ಫಿಲ್ಮಿಬೀಟ್ ಕನ್ನಡ)

More from Filmibeat

English summary
Kichcha Sudeep's upcoming Kannada movie 'Ranna' is all set for a late February release. It is a remake of the Telugu film Attarintiki Daredi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X