ಬೆಲ್ ಗ್ರೇಡ್ ತಲುಪಿದ 'ಕೋಟಿಗೊಬ್ಬ'ನಿಗೆ ಸಾಂಪ್ರದಾಯಿಕ ಸ್ವಾಗತ
Recommended Video

'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಶೂಟಿಂಗ್ ಮುಗಿಸಿ 'ಪೈಲ್ವಾನ್' ಸಿನಿಮಾದ ಮೊದಲ ಶೆಡ್ಯೂಲ್ ಕಂಪ್ಲೀಟ್ ಮಾಡಿರುವ ಸುದೀಪ್ ವಿದೇಶಕ್ಕೆ ಹಾರಿದ್ದಾರೆ. ಹೊಸ ಚಿತ್ರದ ಶೂಟಿಂಗ್ ಕಾರಣದಿಂದ ಸುದೀಪ್ ಹೊರದೇಶಕ್ಕೆ ಹೋಗಲಿದ್ದಾರೆ ಎನ್ನಲಾಗಿತ್ತು.
ಅದರಂತಯೇ ಇಂದು ಅಭಿನಯ ಚಕ್ರವರ್ತಿ ಸರ್ಬಿಯಾದ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಸರ್ಬಿಯಾದ ರಾಜಧಾನಿ ಬೆಲ್ ಗ್ರೇಡ್ ನಗರಕ್ಕೆ ಬಂದ ಸುದೀಪ್ ಅವರಿಗೆ ಅಲ್ಲಿನ ಸಂಪ್ರದಾಯದಂತೆ ಸ್ವಾಗತ ಮಾಡಲಾಯಿತು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೂನ್ 17 ರಂದು ಬೆಲ್ ಗ್ರೇಡ್ ನಲ್ಲಿ 'ಕೋಟಿಗೊಬ್ಬ-3' ಚಿತ್ರದ ಚಿತ್ರೀಕರಣ ನಡೆಯಲಿದ್ದು, ಒಂದು ದಿನದ ಮುಂಚೇಯೆ ಅಲ್ಲಿಗೆ ಹೋಗಿದ್ದಾರೆ ಸುದೀಪ್. ಸದ್ಯದ ಮಾಹಿತಿ ಪ್ರಕಾರ ಸುಮಾರು 25 ದಿನಗಳ ಕಾಲ ಬೆಲ್ ಗ್ರೇಡ್ ನಗರದಲ್ಲಿ 'ಕೋಟಿಗೊಬ್ಬ-3' ಚಿತ್ರದ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ.

ಈ ಬಗ್ಗೆ ಎರಡು ದಿನ ಹಿಂದೆಯೇ ಟ್ವೀಟ್ ಮಾಡಿದ್ದ ಸುದೀಪ್ ''ಕೋಟಿಗೊಬ್ಬ-2 ಚಿತ್ರದ ಸತ್ಯ ಪಾತ್ರವನ್ನ ಮತ್ತೆ ಶಿವ ಪಾತ್ರವನ್ನಾಗಿ ರೀ-ಕ್ರಿಯೇಟ್ ಮಾಡುತ್ತಿದ್ದೇವೆ'' ಎಂದು ಚಿತ್ರದ ಕಥೆ ಬಗ್ಗೆ ಸಣ್ಣದೊಂದು ಸುಳಿವು ನೀಡಿದ್ದರು.
ಇನ್ನುಳಿದಂತೆ ಈ ಚಿತ್ರದಲ್ಲಿ ಕಿಚ್ಚನ ಜೋಡಿಯಾಗಿ ಮಾಲಿವುಡ್ ಮತ್ತು ಕಾಲಿವುಡ್ ಚಿತ್ರದಲ್ಲಿ ನಟಿಸಿರುವ ಮಡೋನ ಸೆಬಾಸ್ಟಿಯನ್ ಕಾಣಿಸಿಕೊಳ್ಳಲಿದ್ದಾರೆ. ಇದು ಮಡೋನ ಅವರ ಮೊದಲ ಕನ್ನಡ ಸಿನಿಮಾ ಆಗಿದೆ. ಕಾರ್ತಿಕ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು ಸೂರಪ್ಪ ಬಾಬು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.


Click it and Unblock the Notifications











