For Quick Alerts
  ALLOW NOTIFICATIONS  
  For Daily Alerts

  ಐಟಿ ರೈಡ್ ಬಗ್ಗೆ ಸುದೀಪ್ ಪ್ರತಿಕ್ರಿಯೆ: ಇದು ನಮ್ಮ ಪರ್ಸನಲ್ ವಿಚಾರದ ದಾಳಿ ಅಲ್ಲ

  |
  Sandalwood IT Raid : ಐಟಿ ದಾಳಿ ಬಗ್ಗೆ ನನಗೇನು ಆತಂಕವಿಲ್ಲ : ನಟ ಸುದೀಪ್..! | FILMIBEAT KANNADA

  ಗುರುವಾರ ಬೆಳ್ಳಂಬೆಳಿಗ್ಗೆ ಸ್ಯಾಂಡಲ್ ವುಡ್ ನಟ ಮತ್ತು ನಿರ್ಮಾಪಕರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ. ಪವರ್ ಸ್ಟಾರ್ ಪುನೀತ್, ರಾಕಿಂಗ್ ಸ್ಟಾರ್ ಯಶ್, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮನೆ ಮೇಲೆ ದಾಳಿ ನಡೆದಿದೆ.

  ಜೊತೆಗೆ ಕೆಜಿಎಫ್ ಚಿತ್ರದ ನಿರ್ಮಾಪಕರಾದ ವಿಜಯ್ ಕಿರಗಂದೂರು, ಜಯಣ್ಣ, ದಿ ವಿಲನ್ ನಿರ್ಮಾಪಕ ಸಿಆರ್ ಮನೋಹರ್ ಹಾಗೂ ನಟಸಾರ್ವಭೌಮ ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗಿದೆ.

  ಸ್ಯಾಂಡಲ್ ವುಡ್ ನ '8' ಶ್ರೀಮಂತ ಮನೆಗಳ ಮೇಲೆ ಐಟಿ ರೈಡ್

  ಸುದೀಪ್ ಮನೆ ಮೇಲೆ ರೈಡ್ ಆದ ಬೆನ್ನಲ್ಲೆ ನಟ ಸುದೀಪ್ ಮೈಸೂರಿನಿಂದ ಜೆಪಿ ನಗರದ ನಿವಾಸಕ್ಕೆ ವಾಪಸ್ ಆಗಿದ್ದು, ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ದಾಳಿಯ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಐಟಿ ರೈಡ್ ಬಗ್ಗೆ ಸುದೀಪ್ ಏನಂದ್ರು? ಮುಂದೆ ಓದಿ.....

  ವೈಯಕ್ತಿಕ ದಾಳಿ ನಡೆದಿಲ್ಲ

  ವೈಯಕ್ತಿಕ ದಾಳಿ ನಡೆದಿಲ್ಲ

  ''ನಮ್ಮ ಮೇಲೆ ವೈಯಕ್ತಿಕ ದಾಳಿ ನಡೆದಿಲ್ಲ. ಐಟಿಗೆ ಅವರದ್ದೆ ಆದ ನೀತಿ ನಿಯಮಗಳಿರುತ್ತದೆ. ಅದಕ್ಕೆ ನಾವು ಸಪೋರ್ಟ್ ಮಾಡ್ತೀವಿ. ಶೂಟಿಂಗ್ ನಲ್ಲಿರುವಾಗ ಐಟಿ ದಾಳಿ ಬಗ್ಗೆ ಮಾಹಿತಿ ಸಿಕ್ಕಿತು. ನನ್ನ ತಾಯಿ ಮನೆಯಲ್ಲಿ ಒಬ್ಬರೇ ಇದ್ದರು. ಅವರಿಗೆ 70ಪ್ಲಸ್ ವಯಸ್ಸು, ಅವರಿಗೆ ತೊಂದರೆಯಾಗಬಾರದು ಎಂದು ಕೂಡಲೇ ಹೊರಟು ಬಂದೆ''

  ನಟ ಶಿವರಾಜ್ ಕುಮಾರ್ ಮನೆ ಮೇಲೆಯೂ ಐಟಿ ರೇಡ್

  ನಾನೇನು ತಪ್ಪು ಮಾಡಿಲ್ಲ, ನನಗೆ ಭಯವಿಲ್ಲ

  ನಾನೇನು ತಪ್ಪು ಮಾಡಿಲ್ಲ, ನನಗೆ ಭಯವಿಲ್ಲ

  ''ಮೂರು ಸಿನಿಮಾಗಳ ಬಜೆಟ್ ಇರಬಹುದು, ಕೆಜಿಎಫ್, ದಿ ವಿಲನ್, ನಟಸಾರ್ವಭೌಮ ಬಿಗ್ ಬಜೆಟ್ ಸಂಬಂಧಪಟ್ಟಂತೆ ವಿಚಾರಣೆ ನಡೆದಿದೆ. ಇದು ಎಕಾನಾಮಿ ಬಗ್ಗೆ ಸಂಬಂಧಿಸಿದ್ದು, ಪರ್ಸನಲ್ ದಾಳಿ ಅಲ್ಲ, ನಾನು ಏನಾದರೂ ತಪ್ಪು ಮಾಡಿದ್ದರೆ ಭಯ ಪಡಬೇಕು, ನಾನೇನು ತಪ್ಪು ಮಾಡಿಲ್ಲ, ನನಗೆ ಭಯವಿಲ್ಲ''

  ನಟ ಪುನೀತ್ ರಾಜ್ ಕುಮಾರ್ ಮನೆ ಮೇಲೆ ಐಟಿ ದಾಳಿ

  ರಾಜಕೀಯ ಪ್ರೇರಿತವಲ್ಲ

  ರಾಜಕೀಯ ಪ್ರೇರಿತವಲ್ಲ

  ಇನ್ನು ಈ ಐಟಿ ದಾಳಿ ರಾಜಕೀಯ ಪ್ರೇರಿತವಾಗಿ ನಡೆದಿದೆ ಎಂಬ ಮಾತುಗಳು ಕೂಡ ಕೇಳಿಬರ್ತಿದೆ. ಈ ಬಗ್ಗೆ ಮಾತನಾಡಿದ ಸುದೀಪ್ ''ಇದು ಯಾವ ಪಕ್ಷಕ್ಕೆ ಸಂಬಂಧಪಟ್ಟಿಲ್ಲ, ಇದನ್ನು ರಾಜಕೀಯ ಉದ್ದೇಶಿತ ದಾಳಿ ಎಂದು ಹೇಳಲಾರೆ ''ಎಂದಿದ್ದಾರೆ.

  ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮನೆ ಮೇಲೆ ಐಟಿ ದಾಳಿ

  ದಾಳಿಯ ಕಾರಣ ಇದು ಎನ್ನಲಾಗಿದೆ

  ದಾಳಿಯ ಕಾರಣ ಇದು ಎನ್ನಲಾಗಿದೆ

  ಜಿ ಎಸ್ ಟಿ ಹೊಸ ನಿಯಾಮಾವಳಿಗಳ ಪ್ರಕಾರ 20 ಲಕ್ಷಕ್ಕೂ ಹೆಚ್ಚು ಅದಾಯ ಪಡೆದುಕೊಳ್ಳುವ ಕಲಾವಿದರು ಶೇಕಡಾ 28 ರಷ್ಟು ತೆರಿಗೆ ಪಾವತಿ ಮಾಡಬೇಕು. ಆದರೆ ಸಂಭಾವನೆಯನ್ನು ನಿಯಮಿತವಾಗಿ ಪಡೆದು ಸಿನಿಮಾದ ಒಟ್ಟು ಆದಾಯದಲ್ಲಿ ಇಂತಿಷ್ಟು ‌ಅಂತಾ ಪಡೆದುಕೊಳ್ಳುವ ನಟರಿಂದ ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂಬ ಅಂಶವನ್ನು ಮುಂದಿಟ್ಟುಕೊಂಡು ಐಟಿ ಅಧಿಕಾರಿಗಳು ಕೋರ್ಟಿನಿಂದ ಆದೇಶ ಪಡೆದು ಈ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

  English summary
  Sandalwood super star who returned to Bengaluru home after hearing about IT raid on his JP Nagar house. Sudeep said he has not afraid and will co operate with Income Tax department.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X