For Quick Alerts
  ALLOW NOTIFICATIONS  
  For Daily Alerts

  ಕೋಟಿಗೊಬ್ಬ ಟ್ರೈಲರ್ ನೋಡಿ ರಮ್ಯಾ ಕೇಳಿದ್ದ ಪ್ರಶ್ನೆಗೆ ಸುದೀಪ್ ಪ್ರತಿಕ್ರಿಯೆ

  |

  ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಟ್ರೈಲರ್‌ಗೆ ಬಗ್ಗೆ ಮೋಹಕ ತಾರೆ ನಟಿ ರಮ್ಯಾ ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಮ್ಯಾ ಅವರ ಮೆಚ್ಚುಗೆ ಬಗ್ಗೆ ನಟ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ಕೋಟಿಗೊಬ್ಬ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, 'ರಾಜಕೀಯದಲ್ಲಿದ್ದರೂ ರಮ್ಯಾ ಅವರು ನಮ್ಮ ಬಗ್ಗೆ ಮಾತನಾಡಿದ್ದು ಖುಷಿ ತಂದಿದೆ' ಎಂದಿದ್ದಾರೆ.

  ಕೋಟಿಗೊಬ್ಬ 3 ಚಿತ್ರದ ಟ್ರೈಲರ್ ವೀಕ್ಷಣೆ ಮಾಡಿದ್ದ ರಮ್ಯಾ, ಸುದೀಪ್ ಅವರನ್ನು ಹಾಲಿವುಡ್ ಸಿನಿಮಾದಲ್ಲಿ ಬರುವ ಬೆಂಜಮಿನ್ ಬಟನ್ ಪಾತ್ರಕ್ಕೆ ಹೋಲಿಸಿದ್ದರು.

  ಕೋಟಿಗೊಬ್ಬ 3 ಟ್ರೈಲರ್: ಸುದೀಪ್ ವಯಸ್ಸಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಮ್ಯಾಕೋಟಿಗೊಬ್ಬ 3 ಟ್ರೈಲರ್: ಸುದೀಪ್ ವಯಸ್ಸಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಮ್ಯಾ

  ''ನಮ್ಮ ಹೊಸ ಬೆಂಜಮಿನ್ ಬಟನ್ ಕಿಚ್ಚ ಸುದೀಪ್, ನಿಮಗೆ ವಯಸ್ಸೇ ಆಗಲ್ವಾ? ವಾಹ್ ಅದ್ಭುತ ಟ್ರೈಲರ್' ಎಂದು ರಮ್ಯಾ ಇನ್ಸ್ಟಾಗ್ರಾಂದಲ್ಲಿ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಬಗ್ಗೆ ಪ್ರೆಸ್‌ಮೀಟ್‌ನಲ್ಲಿ ಪ್ರತಿಕ್ರಿಯಿಸಿರುವ ಸುದೀಪ್, ''ಸಿನಿಮಾದಿಂದ ದೂರವಿದ್ದು ರಾಜಕೀಯದಲ್ಲಿದ್ದರೂ ನಮ್ಮ ಬಗ್ಗೆ ಮಾತನಾಡಿರುವುದು ನಿಜಕ್ಕೂ ಖುಷಿ ತಂದಿದೆ'' ಎಂದರು.

  ಹಾಗೆ ವಯಸ್ಸಿನ ಬಗ್ಗೆ ಮಾತನಾಡಿರುವ ರಮ್ಯಾ ಅವರ ಪ್ರಶ್ನೆಗೆ ಉತ್ತರಿಸಿದ ಸುದೀಪ್, ''50 ವಯಸ್ಸು ದಾಟಿದರೂ ಕೆಲವು ನಟರು ಅಷ್ಟು ಫಿಟ್ ಆಗಿರುವುದು ನಮಗೆ ಸ್ಫೂರ್ತಿ. ಕೆಲವರು 30 ವಯಸ್ಸು ಆಗಿದ್ದರೂ 50 ಆಗಿರೋಥರ ಆಗಿರ್ತಾರೆ. ಎರಡೂ ನಮಗೆ ಒಂದು ರೀತಿ ಸ್ಫೂರ್ತಿಯಾಗಿದೆ'' ಎಂದರು.

  ಅಂದ್ಹಾಗೆ, ರಮ್ಯಾ ಅವರು ಉಲ್ಲೇಖಿಸಿರುವ ಬೆಂಜಮಿನ್ ಬಟನ್ ಪಾತ್ರ ಏನಪ್ಪಾ ಅಂದ್ರೆ ಚಿತ್ರವೊಂದರಲ್ಲಿ ಮುದುಕನಾಗಿ ಹುಟ್ಟಿ ಮಗುವಾಗಿ ಅಂತ್ಯವಾಗುವ ಕಥೆ. ಅಂದ್ರೆ ದಿನ ಕಳೆದಂತೆ ವಯಸ್ಸು ಹೆಚ್ಚಾಗಬೇಕು ಆದರೆ ಈ ಪಾತ್ರದಲ್ಲಿ ವಯಸ್ಸು ಕಡಿಮೆಯಾಗುತ್ತದೆ. ಅದನ್ನೆ ಸುದೀಪ್ ಅವರಿಗೆ ಹೋಲಿಸಿ, ಸುದೀಪ್ ಚಿರುಯುವಕನಂತೆ ಕಾಣ್ತಿದ್ದಾರೆ ಎಂಬರ್ಥದಲ್ಲಿ ರಮ್ಯಾ ಮೆಚ್ಚುಗೆ ವ್ಯಕ್ತಪಡಿಸಿದ್ದರು.

   Sudeep React to Actress Ramya tweet about Kotigobba 3 trailer

  ಕೋಟಿಗೊಬ್ಬ 2 ಚಿತ್ರದ ಸೀಕ್ವೆಲ್ ಇದಾಗಿದ್ದು, ಆ ಚಿತ್ರದಂತೆ ಈ ಚಿತ್ರವೂ ಭರಪೂರ ಮನರಂಜನೆಯಿಂದ ಕೂಡಿದೆ ಎನ್ನುವುದಕ್ಕೆ ಈ ಟ್ರೈಲರ್ ಸಾಕ್ಷಿಯಾಗಿದೆ. ಸತ್ಯ ಮತ್ತು ಶಿವನ ಪಾತ್ರ ಇಲ್ಲಿಯೂ ಮುಂದುವರಿದಿದ್ದು, ಈ ಸಲ ಸುದೀಪ್ ಮತ್ತಷ್ಟು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಕೋಟಿಗೊಬ್ಬ 3 ಟ್ರೈಲರ್‌ಗೆ ಒಳ್ಳೆಯ ರೆಸ್‌ಪಾನ್ಸ್ ಸಿಕ್ಕಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ.

  ದಸರಾ ಹಬ್ಬದ ವಿಶೇಷವಾಗಿ ಅಕ್ಟೋಬರ್ 14 ರಂದು ಕೋಟಿಗೊಬ್ಬ 3 ತೆರೆಗೆ ಬರ್ತಿದೆ. ಕೋಟಿಗೊಬ್ಬ 3 ಚಿತ್ರದಲ್ಲಿ ಸುದೀಪ್‌ಗೆ ನಾಯಕಿಯಾಗಿ ಮಲಯಾಳಂ ನಟಿ ಮಡೋನ್ನಾ ಸಬಾಸ್ಟಿಯನ್ ನಟಿಸಿದ್ದಾರೆ. ರವಿಶಂಕರ್, ಅಫ್ತಾಬ್ ಶಿವ ದಾಸನಿ, ಶ್ರದ್ಧಾ ದಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸೂರಪ್ಪ ಬಾಬು ಬಂಡವಾಳ ಹಾಕಿದ್ದಾರೆ.

  ಅದೇ ದಿನ ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ಸಲಗ ಚಿತ್ರ ಬಿಡುಗಡೆಯಾಗುತ್ತಿದೆ. ದುನಿಯಾ ವಿಜಯ್ ಜೊತೆ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಂಜನಾ ಪ್ರಕಾಶ್ ನಾಯಕಿ. ಕಾಕ್ರೋಚ್ ಖ್ಯಾತಿಯ ಸುಧೀ, ಯಶ್ ಶೆಟ್ಟಿ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದು, ಕೆಪಿ ಶ್ರೀಕಾಂತ್ ನಿರ್ಮಿಸಿದ್ದಾರೆ.

  ಇನ್ನು ರಮ್ಯಾ ಮತ್ತು ಸುದೀಪ್ ಅವರು ರಂಗ ಎಸ್‌ಎಸ್‌ಎಲ್‌ಸಿ, ಜಸ್ಟ್ ಮಾತ್ ಮಾತಲ್ಲಿ, ಮುಸ್ಸಂಜೆ ಮಾತು ಅಂತಹ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಕನ್ನಡದ ಅತ್ಯುತ್ತಮ ಜೋಡಿಗಳ ಪೈಕಿ ಸುದೀಪ್ ಮತ್ತು ರಮ್ಯಾ ಜೋಡಿಯೂ ಒಂದಾಗಿದೆ. ರಮ್ಯಾ ಕಂಬ್ಯಾಕ್‌ಗಾಗಿ ಕಾಯುತ್ತಿರುವ ಫ್ಯಾನ್ಸ್ ಸುದೀಪ್ ಜೊತೆ ಸಿನಿಮಾ ಮಾಡಲಿ ಎಂದು ಆಸೆ ಪಟ್ಟಿರುವ ಕಾಮೆಂಟ್‌ಗಳು ಸಹ ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು.

  English summary
  Kiccha Sudeep react to actress Ramya tweet about Kotigobba 3 trailer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X