'ಕೋಟಿಗೊಬ್ಬ' ತಂಡ ಬಿಟ್ಟು ಹೋದ ಪೋಸ್ಟರ್ ಡಿಸೈನರ್ ಕುರಿತು ಕಾಳಜಿ ತೋರಿದ ಸುದೀಪ್

ಕೋಟಿಗೊಬ್ಬ 3 ಚಿತ್ರದ ನಿರ್ಮಾಣ ಸಂಸ್ಥೆ ಜೊತೆಗಿನ ಮನಸ್ತಾಪ ಹಿನ್ನೆಲೆ ನಾನು ಇನ್ಮುಂದೆ ಚಿತ್ರತಂಡದೊಂದಿಗೆ ಇರುವುದಿಲ್ಲ ಎಂದು ಪೋಸ್ಟರ್ ಡಿಸೈನರ್ ಸಾಯಿ ಕೃಷ್ಣ ಎನ್ರೆಡ್ಡಿ ಟ್ವಿಟ್ಟರ್‌ನಲ್ಲಿ ಖಾತ್ರಿ ಪಡಿಸಿದ್ದರು.

Recommended Video

ಕೋಟಿಗೊಬ್ಬ ಪೋಸ್ಟರ್ ಡಿಸೈನರ್‌ನ ಮತ್ತೆ ಕರೆ ತರ್ತಾರಾ ಕಿಚ್ಚ ಸುದೀಪ್ | Filmibeat kannada

ಸಾಯಿ ಕೃಷ್ಣ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್ ''ನೀವು ನಮ್ಮ ಜೊತೆ ಇಡೀ ಜರ್ನಿ ಇರಬೇಕು'' ಎಂದು ಹೇಳುವ ಮೂಲಕ ನಿರ್ಮಾಣ ಸಂಸ್ಥೆ ಮತ್ತು ಸಾಯಿ ಕೃಷ್ಣ ಅವರ ನಡುವೆ ಉಂಟಾಗಿರುವ ಸಮಸ್ಯೆ ಬಗೆಹರಿಸುವ ಸೂಚನೆ ನೀಡಿದ್ದಾರೆ.

''ಕಿಚ್ಚನ ಅಭಿಮಾನಿಗಳಿಗೆ, ಇಂದಿನಿಂದ ನಾನು ಕೋಟಿಗೊಬ್ಬ-3 ಚಿತ್ರದ ಅಧಿಕೃತ ಪೋಸ್ಟರ್ ಡಿಸೈನರ್ ಅಲ್ಲ, ಕಾರಣ ಮತ್ತು ಅಂತರಗಳಿಂದ ನನಗೆ ಮಾಹಿತಿ ಕೂಡಾ ನೀಡದೆ ನಿರ್ಮಾಣ ಸಂಸ್ಥೆ ನಿರ್ಣಯಿಸಿದೆ, ಈ ಚಿತ್ರವನ್ನು ಒಪ್ಪಿಕೊಳ್ಳಲು ಕಾರಣಗಳು.1-ಸುದೀಪ್ ಸರ್, 2-ಅವರ ಅಭಿಮಾನಿಗಳು, 3-ದುಡ್ಡು (ಕೋವಿಡ್ ಪ್ರಭಾ). ಇನ್ಯಾರೂ ಅಲ್ಲ. ಕ್ಷಮೆ ಇರಲಿ ಗೆಳೆಯರೇ'' ಎಂದು ಸಾಯಿ ಕೃಷ್ಣ ಬೇಸರ ವ್ಯಕ್ತಪಡಿಸಿದ್ದರು.

Sudeep React To poster designer Sai Krishna Enreddy Tweet

ಇದಕ್ಕೆ ಸುದೀಪ್ ಪ್ರತಿಕ್ರಿಯಿಸಿ ''ಕೋಟಿಗೊಬ್ಬ 3 ಜೊತೆ ನೀವು ಇಷ್ಟು ದೂರ ಪ್ರಯಾಣಿಸಿದ್ದೀರಿ. ನಮ್ಮ ಜೊತೆ ಕೊನೆಯವರೆಗೂ ಪ್ರಯಾಣ ಮುಂದುವರಿಸಬೇಕು ಎಂಬ ಆಶಯ ನಮ್ಮದು. ನಿಮ್ಮ ಸದ್ಯದ ನಿಮ್ಮ ನಿರ್ಧಾರವನ್ನು ಗೌರವಿಸುತ್ತೇವೆ. ಆದರೆ ನಿಮ್ಮ ಈ ಟ್ವೀಟ್‌ಗೆ ಕಾರಣವಾದ ವಿಷಯದ ಬಗ್ಗೆ ನಾನು ಖಂಡಿತವಾಗಿಯೂ ತಿಳಿದುಕೊಳ್ಳುತ್ತೇನೆ. ಯುಗಾದಿ ಹಬ್ಬದ ಶುಭಾಶಯಗಳು'' ಎಂದಿದ್ದಾರೆ.

ಕೋಟಿಗೊಬ್ಬ 3 ಬಿಡುಗಡೆ ಮುಂದಕ್ಕೆ?

ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ-3' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಎಲ್ಲಾ ಅಂದುಕೊಂಡಂತೆ ಇದ್ದಿದ್ದರೆ ಏಪ್ರಿಲ್ ಕೊನೆಯಲ್ಲಿ ಬೆಳ್ಳಿತೆರೆ ಮೇಲೆ ಕೋಟಿಗೊಬ್ಬ ಭರ್ಜರಿ ಎಂಟ್ರಿ ಕೊಡಬೇಕಿದೆ. ದೇಶದಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಿನಿಮಾರಂಗದ ಮೇಲೂ ಪ್ರಭಾವ ಬೀರಿದೆ. ಹೀಗಾಗಿ, ಕೋಟಿಗೊಬ್ಬ ರಿಲೀಸ್ ದಿನಾಂಕವೂ ಮುಂದಕ್ಕೆ ಹೋಗುವ ಸಾಧ್ಯತೆ ಹೆಚ್ಚಿದೆ.

More from Filmibeat

English summary
Kotigobba 3 Hero Sudeep React to poster designer Sai Krishna Enreddy tweet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X