For Quick Alerts
  ALLOW NOTIFICATIONS  
  For Daily Alerts

  ವಿಷ್ಣುವರ್ಧನ್ ಪ್ರತಿಮೆ ಧ್ವಂಸ; ಹೆಸರು ಬಯಲಾದ ದಿನ ದಯವಿಟ್ಟು ದೇಶ ಬಿಟ್ಟು ಓಡೋಗಿ ಎಂದ ಸುದೀಪ್

  |

  ಸ್ಯಾಂಡಲ್ ವುಡ್ ನ ದಾದಾ, ಸಾಹಸ ಸಿಂಹ ವಿಷ್ಣುವರ್ಧನ್ ಅವರ ಪ್ರತಿಮೆ ಧ್ವಂಸ ಮಾಡಿರುವ ಘಟನೆ ಬಗ್ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿ, ದಯವಿಟ್ಟು ಸಿಕ್ಕಿಹಾಕಿಕೊಳ್ಳಬೇಡಿ, ಒಡೆದಿರುವುದು ಯಾರು ಅಂತ ಗೊತ್ತಾದರೆ ನಿಮ್ಮನ್ನು ಹೀನಾಯವಾಗಿ ಹೊಡೆದುಹಾಕುತ್ತಾರೆ. ನಿಮ್ಮ ಹೆಸರು ಬಯಲಾದ ದಿನ ದೇಶ ಬಿಟ್ಟು ಓಡೋಗಿ ಎಂದು ಹೇಳಿದ್ದಾರೆ.

  ಸುದೀಪ್ ಈ ರೇಂಜ್ ಗೆ ಕೋಪ ಮಾಡ್ಕೊಂಡಿದ್ದು ಇದೆ ಮೊದಲು | Sudeep angry reply to Vishnu Sir statue issue

  ಕನ್ನಡ ಚಿತ್ರರಂಗದ ದಿಗ್ಗಜ ನಟ ದಿವಂಗತ ವಿಷ್ಣುವರ್ಧನ್ ಅವರ ಪುತ್ಥಳಿಯನ್ನು ಯಾರೊ ಕಿಡಿಗೇಡಿಗಳು ನೆಲಸಮ ಮಾಡಿದ್ದಾರೆ. ಈ ಘಟನೆ ಚಿತ್ರರಂಗ ಮತ್ತು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

  ಈ ಘಟನೆ ಖಂಡಿಸಿ ವಿಷ್ಣು ಅಭಿಮಾನಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಅಲ್ಲದೇ ಅನೇಕ ಗಣ್ಯರು ಈ ಘಟನೆಯನ್ನು ಖಂಡಿಸಿದ್ದಾರೆ. ದರ್ಶನ್, ಜಗ್ಗೇಶ್, ಅನಿರುದ್ಧ್ ಸೇರಿದಂತೆ ಅನೇಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಮೆ ಧ್ವಂಸ ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಮೆ ಧ್ವಂಸ ಮಾಡಿದ್ದು ಯಾರು ಎಂದು ಹೆಸರು ಬಯಲಾದ ದಿನ ದಯವಿಟ್ಟು ದೇಶ ಬಿಟ್ಟು ಓಡಿಹೋಗಿ ಎಂದಿದ್ದಾರೆ.

  ವಿಷ್ಣುವರ್ಧನ್ ಪ್ರತಿಮೆ ಧ್ವಂಸ: ಕಿಡಿಗೇಡಿಗಳನ್ನು ಶಿಕ್ಷಿಸಿ ಎಂದ ಅನಿರುದ್ಧವಿಷ್ಣುವರ್ಧನ್ ಪ್ರತಿಮೆ ಧ್ವಂಸ: ಕಿಡಿಗೇಡಿಗಳನ್ನು ಶಿಕ್ಷಿಸಿ ಎಂದ ಅನಿರುದ್ಧ

  ದಯವಿಟ್ಟು ಸಿಕ್ಕಿಹಾಕಿಕೊಳ್ಳಬೇಡಿ

  ದಯವಿಟ್ಟು ಸಿಕ್ಕಿಹಾಕಿಕೊಳ್ಳಬೇಡಿ

  'ಒಡೆದು ಹಾಕಿರೊ ಮಹಾನುಭವರಿಗೆ, ವಿಷ್ಣು ಸರ್ ಅಭಿಮಾನಿಯಾಗಿ ಒಂದಿಷ್ಟು ವಿಷಯ ಹೇಳಲು ಇಷ್ಟಪಡುತ್ತೇನೆ. ದಯವಿಟ್ಟು ಸಿಕ್ಕಿಹಾಕಿಕೊಳ್ಳಬೇಡಿ. ಒಡೆದಿರುವುದು ಯಾರು ಅಂತ ಗೊತ್ತಾದರೆ, ಅಷ್ಟು ಜನ ಅಭಿಮಾನಿಗಳನ್ನು ಸಂಪಾದಿಸಿದ್ದಾರಲ್ಲ ಅವರೆಲ್ಲ ಹೀನಾಯವಾಗಿ ಹೊಡೆದುಹಾಕುತ್ತಾರೆ. ಒಡೆದು ಹಾಕಿರುವ ಉದ್ದೇಶ ಅರ್ಥ ಆಗಲ್ಲ, ಅರ್ಥ ಆಗಲಿಕ್ಕೂ ಸಾಧ್ಯವಿಲ್ಲ. ಮನುಷ್ಯರಾದವರಿಗೆ ಇದು ಅರ್ಥವಾಗಲ್ಲ.'

  ಮನುಷ್ಯರಾಗಿ ಮಾಡುವ ಕೆಲಸವೇ ಅಲ್ಲ

  ಮನುಷ್ಯರಾಗಿ ಮಾಡುವ ಕೆಲಸವೇ ಅಲ್ಲ

  'ಎಲ್ಲೆ ಕೂತಿದ್ದರೂ ಸಿಕ್ಕಿಹಾಕಿಕೊಳ್ಳದೆ ಇರುವ ಹಾಗೆ ನೋಡಿಕೊಳ್ಳಿ. ನಿಮ್ಮ ಹೆಸರು ಹೊರಬಂದ ದಿನ ಏನಾಗುತ್ತೆ ಎನ್ನುವುದನ್ನು ಯಾರು ತಡೆಯಲು ಸಾಧ್ಯವಿಲ್ಲ, ನಿಮಗೆ ಮನಸ್ಸು ಬಂತಲ್ಲ, ಆ ಮೂರ್ತಿನ ಒಡೆಯುವ ಮುಂಚೆ ಯೋಚನೆ ಮಾಡಿದರೆ ಗೊತ್ತಾಗಿರುವುದು, ಮನುಷ್ಯನಾಗಿ ಮಾಡುವ ಕೆಲಸವೇ ಅಲ್ಲ ಇದು. ಎಂಥವರು ಮಾಡುವ ಕೆಲಸ ಅಂದರೆ, ಬಾಯಿಯಿಂದ ಹೇಳಲು ಹೋದರೆ ಸೆನ್ಸಾರ್ ಆಗುತ್ತೆ.'

  ವಿಷ್ಣು ಸತ್ತ ಮೇಲೂ ನಿಲ್ಲದ ಅಪಮಾನ: ಮಾಗಡಿ ರಸ್ತೆಯಲ್ಲಿ ದಾದಾ ಪುತ್ಥಳಿ ಧ್ವಂಸವಿಷ್ಣು ಸತ್ತ ಮೇಲೂ ನಿಲ್ಲದ ಅಪಮಾನ: ಮಾಗಡಿ ರಸ್ತೆಯಲ್ಲಿ ದಾದಾ ಪುತ್ಥಳಿ ಧ್ವಂಸ

  ಹೆಸರು ಗೊತ್ತಾದ ದಿನ ದಯವಿಟ್ಟು ದೇಶಬಿಟ್ಟು ಓಡಿಹೋಗಿ

  ಹೆಸರು ಗೊತ್ತಾದ ದಿನ ದಯವಿಟ್ಟು ದೇಶಬಿಟ್ಟು ಓಡಿಹೋಗಿ

  'ಸಿಕ್ಕಿಹಾಕಿಕೊಳ್ಳದೆ ಇರುವ ಹಾಗೆ ನೋಡಿ. ಹೆಸರು ಗೊತ್ತಾದ ದಿನ ದಯವಿಟ್ಟು ದೇಶಬಿಟ್ಟು ಓಡಿಹೋಗಿ. ಇದು ನಾನು ನಿಮಗೆ ಕೊಡ್ತಿರುವ ಸಲಹೆ. ಆ ಮೂರ್ತಿನ ಬಿಡಿ. ಅದರ ಅಪ್ಪನ ಹಾಗೆ ಇರುವ ಇನ್ನೊಂದು ಮೂರ್ತಿ ಕಟ್ಟುತ್ತೇವೆ. ಅದು ಬೇರೆ ವಿಚಾರ. ಆದರೆ ಸಿಕ್ಕಿಹಾಕಿಕೊಳ್ಳಬೇಡಿ' ಎಂದು ಸುದೀಪ್ ವಿಡಿಯೋ ಮೂಲಕ ಸಲಹೆ ನೀಡಿದ್ದಾರೆ.

  ಮಾಗಡಿ ರಸ್ತೆಯಲ್ಲಿರುವ ವಿಷ್ಣುವರ್ಧನ್ ಪ್ರತಿಮೆ ಧ್ವಂಸ

  ಮಾಗಡಿ ರಸ್ತೆಯಲ್ಲಿರುವ ವಿಷ್ಣುವರ್ಧನ್ ಪ್ರತಿಮೆ ಧ್ವಂಸ

  ಮಾಗಡಿ ರಸ್ತೆಯ ಬಾಲಗಂಗಾಧರ ಸ್ವಾಮೀಜಿ ವೃತ್ತದಲ್ಲಿ ವಿಷ್ಣುವರ್ಧನ್ ಅವರ ಪ್ರತಿಮೆ ಇತ್ತು. ಈ ಪ್ರತಿಮೆಯನ್ನು ಶುಕ್ರವಾರ (ಡಿ.25) ರಾತ್ರಿ ಯಾರೊ ಕಿಡಿಗೇಡಿಗಳು ಕೆಡವಿ ಕೊಂಡೊಯ್ದಿದ್ದಾರೆ. ಈ ಘಟನೆಯನ್ನು ಖಂಡಿಸಿ ಅಭಿಮಾನಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಕಿಡಿಗೇಡಿಗಳಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆ. ಇತ್ತೀಚಿಗಷ್ಟೆ ತೆಲುಗು ನಟನೊಬ್ಬ ವಿಷ್ಣುವರ್ಧನ್ ಬಗ್ಗೆ ಕೆಟ್ಟದಾಗಿ ಮಾತನಾಡಿ, ಕನ್ನಡಿಗರ ಕಂಗಣ್ಣಿಗೆ ಗುರಿಯಾಗಿದ್ದರು. ಈ ಸಮಯದಲ್ಲಿ ಇಡೀ ಚಿತ್ರರಂಗ ಒಟ್ಟಿಗೆ ನಿಂತಿತ್ತು. ಇದೀಗ ಮತ್ತೆ ಚಿತ್ರರಂಗ ವಿಷ್ಣುದಾದಾನ ಪರವಾಗಿ ನಿಂತಿದೆ.

  English summary
  Kannada Actor Sudeep reaction about demolition of legendary actor Vishnuvardhan statue.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X