twitter
    For Quick Alerts
    ALLOW NOTIFICATIONS  
    For Daily Alerts

    ಚೆನ್ನೈ ವಿರುದ್ಧ ಆರ್‌ಸಿಬಿ ಸೋಲಿನ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?

    |

    ಶನಿವಾರ ಸಿಎಸ್‌ಕೆ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲು ಕಂಡಿದೆ. ಗೆಲುವಿನ ಭರವಸೆಯೊಂದಿಗೆ ಕ್ರೀಡಾಂಗಣಕ್ಕಿಳಿದ ಕೊಹ್ಲಿ ಪಡೆ ನಿರಾಸೆಯೊಂದಿಗೆ ದಿನ ಮುಗಿಸಿದೆ. ಚೆನ್ನೈ ವಿರುದ್ಧ ಸೋಲಿನ ನಂತರವೂ ಅಂಕಪಟ್ಟಿಯಲ್ಲಿ ಆರ್‌ಸಿಬಿ ಮೂರನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ.

    ಸಿಎಸ್‌ಕೆ ಮತ್ತು ಆರ್‌ಸಿಬಿ ಪಂದ್ಯವನ್ನು ಶಾರ್ಜಾ ಸ್ಟೇಡಿಯಂನಲ್ಲಿ ಕುಳಿತು ವೀಕ್ಷಣೆ ಮಾಡಿದ ಕಿಚ್ಚ ಸುದೀಪ್ ಪಂದ್ಯದ ನಂತರ ನಿರಾಸೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಧೋನಿ ತಂಡದ ಆಟದ ಬಗ್ಗೆಯೂ ಶ್ಲಾಘಿಸಿದ್ದಾರೆ.

    ''ಆರ್‌ಸಿಬಿ ತಂಡದ ಅದ್ಭುತ ಓಪನಿಂಗ್ ನಂತರವೂ ಚೆನ್ನೈ ಚೇತರಿಸಿಕೊಂಡು ತಿರುಗಿಬಿದ್ದಿದ್ದು ನಿಜಕ್ಕೂ ಒಳ್ಳೆಯ ಆಟ. ವಿರಾಟ್ ಕೊಹ್ಲಿ ಮತ್ತೆ ಫಾರ್ಮ್‌ಗೆ ಮರಳಿದ್ದು ಖುಷಿಯ ಸಂಗತಿ. ಉಳಿದ ಐದು ಪಂದ್ಯಗಳಲ್ಲಿ ಮತ್ತೆರಡು ಗೆಲುವು ಬೇಕಾಗಿದೆ. ಆರ್‌ಸಿಬಿ ಅಭಿಮಾನಿಗಳಾದ ನಾವು ಸದಾ ನಿಮ್ಮ ಬೆಂಬಲಕ್ಕೆ ಇದ್ದೇವೆ'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

    ಮತ್ತೆ ಸದ್ದು ಮಾಡುತ್ತಿದೆ ರಾಹುಲ್ ದ್ರಾವಿಡ್ ಬಯೋಪಿಕ್? ಮತ್ತೆ ಸದ್ದು ಮಾಡುತ್ತಿದೆ ರಾಹುಲ್ ದ್ರಾವಿಡ್ ಬಯೋಪಿಕ್?

    ಅಂದ್ಹಾಗೆ, ನಟ ಸುದೀಪ್ ಕಳೆದ ಭಾನುವಾರದಿಂದ ದುಬೈನಲ್ಲಿದ್ದಾರೆ. ಐಪಿಎಲ್ ಪಂದ್ಯಗಳ ವೀಕ್ಷಣೆಗಾಗಿ ಗಲ್ಫ ದೇಶಕ್ಕೆ ಹೋಗಿರುವ ಸುದೀಪ್ ಕಳೆದ ಒಂದು ವಾರದಿಂದ ಐಪಿಎಲ್ ಪಂದ್ಯಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ. ಮುಂದೆ ಓದಿ....

    ಕೆಕೆಆರ್‌ ವಿರುದ್ಧ ಆರ್‌ಸಿಬಿ ಸೋಲಿನ ಬಗ್ಗೆ ಸುದೀಪ್ ಹೇಳಿದ್ದು ಹೀಗೆಕೆಕೆಆರ್‌ ವಿರುದ್ಧ ಆರ್‌ಸಿಬಿ ಸೋಲಿನ ಬಗ್ಗೆ ಸುದೀಪ್ ಹೇಳಿದ್ದು ಹೀಗೆ

    ಸಿಂಪಲ್ ಸುನಿ ಏನಂದ್ರು

    ಸಿಂಪಲ್ ಸುನಿ ಏನಂದ್ರು

    ಇನ್ನು ಆರ್‌ಸಿಬಿ ಮತ್ತು ಚೆನ್ನೈ ನಡುವಿನ ಪಂದ್ಯದ ಫಲಿತಾಂಶ ಬಗ್ಗೆ ಟ್ವೀಟ್ ಮಾಡಿರುವ ನಿರ್ದೇಶಕ ಸಿಂಪಲ್ ಸುನಿ ''S ನಾವಿನ್ನು ಒಂದು ಕಪ್ ಕೂಡ ಗೆದ್ದಿಲ್ಲ. ಆದರೆ ನಮ್ ಮೇಲೆ ಗೆದ್ದವರೆಲ್ಲಾ ಯಾವುದೋ ದೊಡ್ಡ ಲೆಜೆಂಡ್ ಟೀಮ್ ಮೇಲೆ ಗೆದ್ದೋ ಅನ್ನೋ ರೀತಿ ಖುಷಿಪಡ್ತರೆ. ಇದಕ್ಕೆ ಇರಬೇಕು ಸೋತರು ನಮ್ ಟೀಮ್ ಮೇಲಿರೋ ಅಭಿಮಾನ ಹೆಚ್ಚಾಗುತ್ತೆ. ಪ್ರತಿಸಲ abdಗೋಸ್ಕರ ಕಪ್ ಗೆಲ್ರಿ ಅಂತಿದ್ದೋ ಆದರೆ ಇವತ್ಯಾಕೋ Vkohli ಗೋಸ್ಕರ ಆದರೂ ಗೆಲ್ಲಿ ಅನ್ನಿಸಿತು'' ಎಂದಿದ್ದಾರೆ.

    ಕೆಕೆಆರ್ ವಿರುದ್ಧ ಸೋತಾಗ ಸುದೀಪ್ ಏನು ಹೇಳಿದ್ದರು

    ಕೆಕೆಆರ್ ವಿರುದ್ಧ ಸೋತಾಗ ಸುದೀಪ್ ಏನು ಹೇಳಿದ್ದರು

    ಕೆಕೆಆರ್‌ ವಿರುದ್ಧ ಆರ್‌ಸಿಬಿ ಹೀನಾಯವಾಗಿ ಸೋತ ಬಗ್ಗೆ ಸಂದರ್ಶಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುದೀಪ್, ''ಎರಡು ದೇಶಗಳು ಯುದ್ಧ ಮಾಡುವಾಗ ಒಂದು ದಿನ ನಮ್ಮ ದೇಶಕ್ಕೆ ಯುದ್ಧದಲ್ಲಿ ಹಿನ್ನೆಡೆ ಆಯಿತೆಂದರೆ ನಾವು ದೇಶದ ಮೇಲಿನ ಗೌರವ, ಪ್ರೀತಿ ಕಳೆದುಕೊಳ್ಳುತ್ತೇವೆಯೇ. ಇದು ಸಹ ಹಾಗೆಯೇ ಆರ್‌ಸಿಬಿ ಮೇಲಿನ ಅಭಿಮಾನ, ಪ್ರೀತಿ ಕಡಿಮೆ ಆಗುವುದಿಲ್ಲ'' ಎಂದು ಖಡಕ್ ಉತ್ತರ ಕೊಟ್ಟಿದ್ದಾರೆ ಸುದೀಪ್.

    ಸಿಎಸ್‌ಕೆ vs ಆರ್‌ಸಿಬಿ ಸ್ಕೋರ್ ವಿವರ

    ಸಿಎಸ್‌ಕೆ vs ಆರ್‌ಸಿಬಿ ಸ್ಕೋರ್ ವಿವರ

    ಟಾಸ್ ಸೋತು ಬ್ಯಾಟಿಂಗ್‌ ಅವಕಾಶ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ನಾಯಕ ವಿರಾಟ್ ಕೊಹ್ಲಿ 53, ದೇವದತ್ ಪಡಿಕ್ಕಲ್ 70 ರನ್‌ಗಳ ನೆರವಿನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್, ಋತುರಾಜ್ ಗಾಯಕ್ವಾಡ್ 38, ಫಾಫ್ ಡು ಪ್ಲೆಸಿಸ್ 31, ಮೊಯೀಸ್ ಅಲಿ 23, ಅಂಬಾಟಿ ರಾಯುಡು 32 ರನ್‌ನೊಂದಿಗೆ 18.1 ಓವರ್‌ಗೆ 4 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಮೂರು ವಿಕೆಟ್ ತೆಗೆದು ಆರ್‌ಸಿಬಿ ರನ್ ವೇಗಕ್ಕೆ ಕಡಿವಾಣ ಹಾಕಿದ ಡ್ವೇನ್ ಬ್ರಾವೋ ಪಂದ್ಯ ಶ್ರೇಷ್ಠರೆನಿಸಿದರು.

    ರಾಹುಲ್ ದ್ರಾವಿಡ್ ಬಯೋಪಿಕ್?

    ರಾಹುಲ್ ದ್ರಾವಿಡ್ ಬಯೋಪಿಕ್?

    ಭಾರತದ ಕ್ರಿಕೆಟ್ ಲೋಕ ಕಂಡ ದಿಗ್ಗಜ ಆಟಗಾರ ರಾಹುಲ್ ದ್ರಾವಿಡ್ ಅವರ ಬಯೋಪಿಕ್ ಆಗಬೇಕು ಎಂಬ ಅಭಿಪ್ರಾಯ ಜೋರಾಗಿದ್ದು, ಒಂದು ವೇಳೆ ಈ ಪ್ರಾಜೆಕ್ಟ್‌ಗೆ ಚಾಲನೆ ಸಿಕ್ಕರೆ ಅದರಲ್ಲಿ ಕಿಚ್ಚ ಸುದೀಪ್ ನಾಯಕನಾಗಬೇಕು ಎಂಬ ಕೂಗು ಸ್ಯಾಂಡಲ್‌ವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಮತ್ತೊಂದೆಡೆ ತೆಲುಗಿನಲ್ಲಿ ಸದ್ದಿಲ್ಲದೇ ದ್ರಾವಿಡ್ ಬಯೋಪಿಕ್ ತಯಾರಿ ನಡೆದಿದೆ ಎಂದು ಸುದ್ದಿಗಳು ವರದಿಯಾಗಿದೆ. ತಮಿಳು ನಟ ಸಿದ್ಧಾರ್ಥ್ ಹೆಸರು ಹೆಚ್ಚು ಕೇಳುತ್ತಿದೆ.

    English summary
    Kannada actor Kiccha Sudeep Reaction About RCB Lose Against CSK.
    Saturday, September 25, 2021, 10:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X