ಶಿವಣ್ಣ ಏನ್ ದಡ್ಡರಾ? : ಅಭಿಮಾನಿಗಳ ಆಕ್ರೋಶಕ್ಕೆ ಸುದೀಪ್ ಪ್ರತಿಕ್ರಿಯೆ!
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಅಭಿಮಾನಿಗಳು 'ದಿ ವಿಲನ್' ಸಿನಿಮಾದ ಮೇಲೆ ಅಸಮಾಧಾನಗೊಂಡಿದ್ದಾರೆ. ಇಂದು ಮಧ್ಯಾಹ್ನ ಈ ವಿಚಾರವಾಗಿ ಶಿವರಾಜ್ ಕುಮಾರ್ ಫ್ಯಾನ್ಸ್ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.
'ದಿ ವಿಲನ್' ಸಿನಿಮಾದಲ್ಲಿ ಶಿವಣ್ಣ ಅವರ ಪಾತ್ರವನ್ನು ಕಡೆಗಣಿಸಲಾಗಿದೆ ಹಾಗೂ ಒಂದು ದೃಶ್ಯದಲ್ಲಿ ಶಿವಣ್ಣ ಅವರ ಮೇಲೆ ಸುದೀಪ್ ಕೈ ಮಾಡುವುದು ಸರಿಯಲ್ಲ' ಎಂದು ಅಭಿಮಾನಿಗಳು ಸರಣಿ ಆರೋಪಗಳನ್ನು ಮಾಡಿದ್ದಾರೆ.
ಸಿನಿಮಾ ಸೃಷ್ಟಿ ಮಾಡಿರುವ ಈ ವಿವಾದದ ಬಗ್ಗೆ ಈಗ ನಟ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ಅಂದಹಾಗೆ, ಸುದೀಪ್ ಅವರ ಮಾತುಗಳು ಮುಂದಿದೆ ಓದಿ...

ಶಿವಣ್ಣ ಏನ್ ದಡ್ಡರಾ?
''ಶಿವಣ್ಣ ಏನ್ ದಡ್ಡರಾ?. ಅವರು 36 ವರ್ಷದಿಂದ ಚಿತ್ರರಂಗದಲ್ಲಿ ಇದ್ದಾರೆ. ಅವರು ಕಥೆ ಕೇಳಿಯೇ ಒಪ್ಪಿಕೊಂಡಿದ್ದಾರೆ ಎಂದ ಮೇಲೆ ಪ್ರತಿಭಟನೆ ಮಾಡುವವರು ಶಿವಣ್ಣನ ವಿರುದ್ಧ ಮಾಡಿದ ಹಾಗೆ ಆಗುತ್ತದೆ. ಶಿವಣ್ಣ ಅವರೇ ಆ ದೃಶ್ಯವನ್ನು ಕಟ್ ಮಾಡಿ ಎಂಬ ಹೇಳಿಕೆ ನೀಡಿದರೆ ಪ್ರೇಮ್ ಆ ಸೀನ್ ಕಟ್ ಮಾಡುತ್ತಾರೆ.'' - ಸುದೀಪ್, ನಟ

ಒಂದು ಪಾತ್ರಕ್ಕೆ ಇನ್ನೊಂದು ಪಾತ್ರ ತೊಂದರೆ ನೀಡಿರುತ್ತದೆ
''ಸಿನಿಮಾದ ಇನ್ನೊಂದು ಪಾತ್ರಕ್ಕೆ (ಸುದೀಪ್ ಪಾತ್ರ) ಮತ್ತೊಂದು ಪಾತ್ರ (ಶಿವರಾಜ್ ಕುಮಾರ್) ಏನು ಅಂತ ಗೊತ್ತಿರುವುದಿಲ್ಲ. ಆ ಪಾತ್ರಕ್ಕೆ ಈ ಪಾತ್ರಕ್ಕೆ ತೊಂದರೆ ನೀಡಿರುತ್ತದೆ. ಅದ್ದರಿಂದ ಆ ಪಾತ್ರ ಹೊಡೆಯಬೇಕಾಗುತ್ತದೆ. ಸತ್ಯ ತಿಳಿದ ಮೇಲೆ ಆ ದೃಶ್ಯದ ಫೈಟ್ ನಿಂತೇ ಹೋಗುತ್ತದೆ. ಇದು ಸಿನಿಮಾ ಅಷ್ಟೇ'' - ಸುದೀಪ್, ನಟ

ಇಬ್ಬರೂ ಕಥೆ ಒಪ್ಪಿ ಸಿನಿಮಾ ಮಾಡಿದ್ದೇವೆ
''ಸಿನಿಮಾವನ್ನು ಸಿನಿಮಾವಾಗಿ ನೋಡಿ. ಶಿವಣ್ಣ ಹಾಗೂ ನಾನು ಇಬ್ಬರೂ ಕಥೆ ಹೇಳಿಯೇ ಒಪ್ಪಿ ಸಿನಿಮಾ ಮಾಡಿದ್ದೇವೆ. ಉಳಿದವರು ಅವರವರ ಸಮಸ್ಯೆಯನ್ನು ಅವರೇ ಬಗೆ ಹರಿಸಿಕೊಳ್ಳಬೇಕು. 36 ವರ್ಷದಿಂದ ಸಿನಿಮಾಗಳನ್ನು ಮಾಡುತ್ತಿರುವ ಒಬ್ಬ ದೊಡ್ಡ ನಟನ ನಿರ್ಧಾರವನ್ನು ನಾವು ಅನುಮಾನಿಸಿದ ಹಾಗೆ ಆಗುತ್ತದೆ.'' - ಸುದೀಪ್, ನಟ

ದೃಶ್ಯ ಕಟ್ ಮಾಡುವಂತೆ ಅಭಿಮಾನಿಗಳ ಒತ್ತಾಯ
''ಚಿತ್ರದ ಕೊನೆಯ ದೃಶ್ಯದಲ್ಲಿ ಶಿವರಾಜ್ ಕುಮಾರ್ ಅವರಿಗೆ ಸುದೀಪ್ ಹೊಡೆದಿದ್ದಾರೆ. ಇದು ಅನಗತ್ಯವಾಗಿದೆ. ಶಿವಣ್ಣನ ಮೇಲೆ ಸುದೀಪ್ ಪಾತ್ರದಿಂದ ಹೊಡೆಸಿದ್ದು ತಪ್ಪು. ಆ ದೃಶ್ಯವನ್ನು ಕಟ್ ಮಾಡಬೇಕು.'' ಎಂದು ಅಭಿಮಾನಿಗಳ ಆರೋಪ ಮಾಡಿದ್ದಾರೆ.

ಪ್ರೇಮ್ ವಿರುದ್ಧ ಪ್ರತಿಭಟನೆ
ನಿರ್ದೇಶಕ ಪ್ರೇಮ್ ವಿರುದ್ಧ ಶಿವರಾಜ್ ಕುಮಾರ್ ಅಭಿಮಾನಿಗಳು ಅನೇಕ ವಿಚಾರಕ್ಕೆ ಅಸಮಾಧಾನಗೊಂಡಿದ್ದಾರೆ. ಇಂದು ಮಧ್ಯಾಹ್ನ ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಪ್ರತಿಭಟನೆ ಮಾಡಲು ಶಿವಣ್ಣ ಫ್ಯಾನ್ಸ್ ನಿರ್ಧಾರ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಮ್ ವಿರುದ್ಧ ಶಿವಣ್ಣ ಫ್ಯಾನ್ಸ್ ಆಕ್ರೋಶಗೊಂಡಿದ್ದಾರೆ.


Click it and Unblock the Notifications











