»   » ದರ್ಶನ್ ಪ್ರಶ್ನೆಗೆ ಹುಬ್ಬಳಿಯಲ್ಲಿ ಘರ್ಜಿಸಿದ ಸುದೀಪ್!

ದರ್ಶನ್ ಪ್ರಶ್ನೆಗೆ ಹುಬ್ಬಳಿಯಲ್ಲಿ ಘರ್ಜಿಸಿದ ಸುದೀಪ್!

Posted By:
Subscribe to Filmibeat Kannada

ಕೊನೆಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸರಣಿ ಟ್ವೀಟ್ ಗಳಿಗೆ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ಹುಬ್ಬಳ್ಳಿಯಲ್ಲಿ 'ಹೆಬ್ಬುಲಿ' ಚಿತ್ರದ ಪ್ರಮೋಷನ್ ನಲ್ಲಿ ಭಾಗವಹಿಸಿದ್ದ ಸುದೀಪ್, ದರ್ಶನ್ ಕುರಿತಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಖಾರವಾಗಿ ತಿರುಗೇಟು ನೀಡಿದ್ದಾರೆ.

ದರ್ಶನ್ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿದ ಕಿಚ್ಚ!

ನಟ ದರ್ಶನ್ ತಮ್ಮ ಟ್ವಿಟ್ಟರ್ ನಲ್ಲಿ ಸಿಡಿಸಿದ ಬಾಂಬ್ ಗೆ ಮೌನವಾಗಿದ್ದ ಸುದೀಪ್, ಇಂದು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಆದ್ರೆ, ದರ್ಶನ್ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದೀಪ್ ಹೇಳಿದ್ದೇನು?

ದರ್ಶನ್ ಕುರಿತಂತೆ ಮಾಧ್ಯಮದವರು ಕಿಚ್ಚನನ್ನ ಕೇಳಿದಾಗ, ''ಐ ವುಡ್ ರೆಸ್ಪೆಕ್ಟ್, ಇಫ್ ಯೂ ವುಡ್ ರೆಸ್ಪೆಕ್ಟ್ ಮಿ.....'' ಎಂದು ಒಂದೇ ವಾಕ್ಯದಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ತುಮಕೂರಿನಲ್ಲಿ ಪ್ರತಿಕ್ರಿಯೆ ಕೊಟ್ಟಿರಲಿಲ್ಲ!

ರಾಜ್ಯಾದ್ಯಂತ 'ಹೆಬ್ಬುಲಿ' ಚಿತ್ರದ ಪ್ರಮೋಷನ್ ನಲ್ಲಿ ಭಾಗಿವಹಿಸಿರುವ ಸುದೀಪ್ ಗೆ, ನಿನ್ನೆ ತುಮಕೂರಿನಲ್ಲೂ ಮಾಧ್ಯಮದವರು ದರ್ಶನ್ ಕುರಿತಂತೆ ಪ್ರಶ್ನೆ ಕೇಳಿದ್ದರು. ಆದ್ರೆ, ಯಾವುದೇ ರಿಯಾಕ್ಷನ್ ಕೊಡದೆ ಸುಮ್ಮನೆ ಹೋಗಿದ್ದರು.

ದರ್ಶನ್ ವರ್ಸಸ್ ಸುದೀಪ್!

'ಮೆಜೆಸ್ಟಿಕ್' ಚಿತ್ರಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಸುದೀಪ್ ಅವರ ಮಧ್ಯೆ ಮನಸ್ತಾಪ ಉಂಟಾಗಿದೆ ಎನ್ನಲಾಗುತ್ತಿದ್ದು, ಇದನ್ನ ನಟ ದರ್ಶನ್ ಅವರು ಬಹಿರಂಗವಾಗಿ, ತಮ್ಮ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದರು. 'ಮೆಜೆಸ್ಟಿಕ್' ಚಿತ್ರಕ್ಕೆ ದರ್ಶನ್ ಅವರನ್ನ, ಸುದೀಪ್ ಸೂಚಿಸಿದ್ದರು ಎಂಬ ಹೇಳಿಕೆಯನ್ನ ಸಾಬೀತು ಪಡಿಸಿ ಎಂದು ಸುದೀಪ್ ಗೆ ದರ್ಶನ್ ಚಾಲೆಂಜ್ ಮಾಡಿದ್ದರು.

ಸುದೀಪ್ ಖಾರ ಪ್ರತಿಕ್ರಿಯೆ ದರ್ಶನ್ ಗೋ, ಮಾಧ್ಯಮದವರಿಗೋ.?

ದರ್ಶನ್ ಕುರಿತು ಮಾಧ್ಯಮದವರು ಪ್ರಶ್ನೆ ಕೇಳುತ್ತಿದ್ದಂತೆಯೇ, 'ಐ ವುಡ್ ರೆಸ್ಪೆಕ್ಟ್.. ಇಫ್ ಯು ವುಡ್ ರೆಸ್ಪೆಕ್ಟ್ ಮಿ'' (ನೀವು ನನ್ನನ್ನ ಗೌರವಿಸಿದರೆ, ನಿಮ್ಮನ್ನ ನಾನು ಗೌರವಿಸುತ್ತೇನೆ) ಎಂದು ಸುದೀಪ್ ಹೇಳಿದರು. ಈ ಖಾರ ಪ್ರತಿಕ್ರಿಯೆ ಮಾಧ್ಯಮದವರಿಗೋ.. ಅಥವಾ ದರ್ಶನ್ ರವರಿಗೋ.?

ಬಂದ ವಿಷ್ಯದ ಬಗ್ಗೆ ಬಿಟ್ಟು ಬೇರೆ ಪ್ರಶ್ನೆ ಕೇಳಿದರೆ..?

'ಹೆಬ್ಬುಲಿ' ಪ್ರಮೋಷನ್ ಬಗ್ಗೆ ಮಾತನಾಡದೆ, ದರ್ಶನ್ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ, ''ನೀವು ನನ್ನನ್ನ ಗೌರವಿಸಿದರೆ, ನಿಮ್ಮನ್ನ ನಾನು ಗೌರವಿಸುತ್ತೇನೆ'' ಎಂಬ ಅರ್ಥದಲ್ಲಿ ಮಾಧ್ಯಮದವರಿಗೆ ಸುದೀಪ್ ತಿರುಗೇಟು ನೀಡಿರಬಹುದು.

English summary
Kannada Actor Kiccha Sudeep Gives Reaction to answer when quizzed about Challenging Star Darshan's tweet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada