»   » ತೆಲುಗು ಸಿನಿಮಾ ಮಾಡಿ ಎಂದ ಅಭಿಮಾನಿಗೆ ಸುದೀಪ್ ಏನಂದ್ರು.?

ತೆಲುಗು ಸಿನಿಮಾ ಮಾಡಿ ಎಂದ ಅಭಿಮಾನಿಗೆ ಸುದೀಪ್ ಏನಂದ್ರು.?

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅವರಿಗೆ ಕರ್ನಾಟಕದಲ್ಲಿ ಮಾತ್ರವಲ್ಲ, ತಮಿಳುನಾಡು, ಆಂಧ್ರ, ತೆಲಂಗಾಣಗಳಲ್ಲೂ ಅಭಿಮಾನಿಗಳಿದ್ದಾರೆ. ತಮಿಳು ಮತ್ತು ತೆಲುಗು ಭಾಷೆಯಲ್ಲೂ ಸುದೀಪ್ ಅಭಿನಯಿಸಿ ಅಭಿಮಾನ ಗಳಿಸಿದ್ದಾರೆ.

ಸಾಮಾನ್ಯವಾಗಿ ಸುದೀಪ್ ಅವರ ಸಿನಿಮಾ ಬಂದಿಲ್ಲವಂದ್ರೆ ಸ್ಯಾಂಡಲ್ ವುಡ್ ಅಭಿಮಾನಿಗಳು ಕಿಚ್ಚನನ್ನ ಮಿಸ್ ಮಾಡಿಕೊಳ್ಳುತ್ತಾರೆ. ಆದ್ರೆ, ತೆಲುಗು ಫ್ಯಾನ್ಸ್ ಕೂಡ ಸುದೀಪ್ ಅವರ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ ಸಿಕ್ಕಿದೆ.

ಹೌದು, ತೆಲುಗು ಅಭಿಮಾನಿಯೊಬ್ಬ ಕಿಚ್ಚನಿಗೆ ಟ್ವೀಟ್ ಮಾಡಿದ್ದು, ''ಸುದೀಪ್ ಅಣ್ಣ ನಾನು ಆಂಧ್ರದವರು. ನಿಮ್ಮ ಸಿನಿಮಾಗಳನ್ನ ಹೆಚ್ಚು ಇಷ್ಟ ಪಡ್ತೀನಿ. ಅದರಲ್ಲೂ 'ಹೆಬ್ಬುಲಿ' ಅಂದ್ರೆ ತುಂಬ ಇಷ್ಟ. ದಯವಿಟ್ಟು ತೆಲುಗು ಸಿನಿಮಾ ಮಾಡಿ. ನಾವು ನಿಮ್ಮನ್ನ ಮತ್ತು ನಿಮ್ಮ ಧ್ವನಿಯನ್ನ ಹೆಚ್ಚು ಮಿಸ್ ಮಾಡಿಕೊಳ್ಳುತ್ತಿದ್ದೇವೆ'' ಎಂದು ಕೇಳಿಕೊಂಡಿದ್ದಾರೆ.

ಶಿವಣ್ಣ-ಅಪ್ಪು-ಸುದೀಪ್-ದರ್ಶನ್ ಈ ಗುಣಗಳನ್ನ ಬದಲಿಸಿಕೊಳ್ಳಬೇಕಂತೆ.!

Sudeep reaction to his telugu fan

ಇದಕ್ಕೆ ಪ್ರತಿಕ್ರಿಯಿಸಿರುವ ಸುದೀಪ್ ''ಒಳ್ಳೆ ಸ್ಕ್ರಿಪ್ಟ್ ಸಿಕ್ಕರೇ ಖಂಡಿತವಾಗಿಯೂ ತೆಲುಗು ಸಿನಿಮಾ ಮಾಡುತ್ತೇನೆ'' ಎಂದು ಅಭಿಮಾನಿಯ ಮನವಿಗೆ ಉತ್ತರಿಸಿದ್ದಾರೆ.

ಕಿಚ್ಚನಿಗೆ ಪೈಪೋಟಿ ನೀಡಿದ 'ಸೂಪರ್ ಸ್ಟಾರ್': ಸುದೀಪ್ ಫುಲ್ ಫಿದಾ

ಎಸ್.ಎಸ್ ರಾಜಮೌಳಿ ನಿರ್ದೇಶನದ 'ಈಗ' ಚಿತ್ರದ ಮೂಲಕ ತೆಲುಗು ಸಿನಿರಂಗ ಪ್ರವೇಶಿಸಿದ್ದ ಸುದೀಪ್ ನಂತರ 'ಬಾಹುಬಲಿ ದಿ ಬಿಗಿನಿಂಗ್' ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಿಸಿದ್ದರು. 'ಕೋಟಿಗೊಬ್ಬ-2' ಸಿನಿಮಾ ತೆಲುಗಿನಲ್ಲಿ ಡಬ್ಬಿಂಗ್ ಆಗಿ ಯಶಸ್ಸು ಕಂಡಿತ್ತು. ಇದೀಗ, ಮೆಗಾಸ್ಟಾರ್ ಚಿರಂಜೀವಿ ಅವರ 151ನೇ ಚಿತ್ರ 'ಸೈರಾ ನರಸಿಂಹ ರೆಡ್ಡಿ'ಯಲ್ಲಿ ಸುದೀಪ್ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ.

English summary
Telugu fan asked to sudeep ''Please do a telugu film, because we are missing you and your Voice''. now, Actor kiccha Sudeep has given reaction to that fan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X