Just In
Don't Miss!
- Sports
ಕೊಹ್ಲಿ ನೀಡಿದ್ದ ಬ್ಯಾಟಿಂಗ್ ಟಿಪ್ಸ್ ನೆನೆದ ಬಾಬರ್ ಅಜಂ
- Automobiles
199 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ನಟಿಯ ಕಾರನ್ನು ವಶಕ್ಕೆ ಪಡೆದ ಪೊಲೀಸರು
- News
ಭಾರತದಲ್ಲಿ ರಾಜಕೀಯ ನಾಯಕರ ಬೆನ್ನೇರಿದ ಕೊರೊನಾವೈರಸ್
- Lifestyle
ರಂಜಾನ್ 2021: ಉಪವಾಸ ಮಾಡುವುದರಿಂದ ಸಿಗುವ ಪ್ರಯೋಜನಗಳಿವು
- Education
KOF Hubli Recruitment 2021: 15 ಸಾಮಾನ್ಯ ಕೆಲಸಗಾರ ಮತ್ತು ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಏಪ್ರಿಲ್ 15ರ ಬಿಟ್ಕಾಯಿನ್ ರೇಟ್ ಎಷ್ಟಿದೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸರ್ಕಾರದ ನಿರ್ಧಾರವನ್ನು ಗೌರವಿಸುವುದು ನಮ್ಮ ಕರ್ತವ್ಯ; ಕೊರೊನಾ ನಿಯಮದ ಬಗ್ಗೆ ಸುದೀಪ್ ಪ್ರತಿಕ್ರಿಯೆ
ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಕಾರಣ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಸರ್ಕಾರ ಹೊಸ ಕೊರೊನಾ ನಿಯಮ ಬಿಡುಗಡೆ ಮಾಡಿದೆ. ಈಗತಾನೆ ಚೇತರಿಸಿಕೊಳ್ಳುತ್ತಿದ್ದ ಚಿತ್ರರಂಗಕ್ಕೆ ಸರ್ಕಾರದ ನಿರ್ಧಾರ ದೊಡ್ಡ ಶಾಕ್ ನೀಡಿದೆ.
ಚಿತ್ರಮಂದಿರಗಳಲ್ಲಿ ಮತ್ತೆ ಶೇ.50 ಆಸನ ಭರ್ತಿಗೆ ಅವಕಾಶ ನೀಡಿರುವುದು ಚಿತ್ರರಂಗಕ್ಕೆ ದೊಡ್ಡ ಆಘಾತ ತಂದಿದೆ. ಸದ್ಯ ರಿಲೀಸ್ ಆಗಿರುವ ಮತ್ತು ಬಿಡುಗಡೆಗೆ ಸಿದ್ಧವಾಗಿರುವ ಚಿತ್ರಗಳಿಗೆ ಈ ನಿರ್ಧಾರ ದೊಡ್ಡ ಪೆಟ್ಟು ನೀಡಿದೆ. ಏಪ್ರಿಲ್ 1ಕ್ಕೆ ಬಿಡುಗಡೆಯಾಗಿರುವ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ಈಗ ಸಂಕಷ್ಟದಲ್ಲಿ ಸಿಲುಕಿದೆ.
ಚಿತ್ರಮಂದಿರಗಳಲ್ಲಿ ಮತ್ತೆ 50 ಪರ್ಸೆಂಟ್: ಪುನೀತ್ ರಾಜ್ ಕುಮಾರ್ ವಿರೋಧ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುನೀತ್ ಸರ್ಕಾರದ ದಢೀರ್ ನಿರ್ಧಾರರ ವಿರುದ್ಧ ಬೇಸರ ಹೊರಹಾಕಿದ್ದಾರೆ. ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀರ್ ಟ್ವೀಟ್ ಮಾಡಿ, ಈ ನಿರ್ಧಾರ ಶಾಕ್ ಆಗಿದೆ. ಆದರೂ ಸರ್ಕಾರದ ನಿಯಮವನ್ನು ಅನುಸರಿಸುವುದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ.
'ಮತ್ತೆ ಚಿತ್ರಮಂದಿರಗಳಲ್ಲಿ ಶೇ 50 ಆಸನ ಭರ್ತಿಗೆ ಅವಕಾಶ ನೀಡಿರುವುದು ಸದ್ಯ ರಿಲೀಸ್ ಆಗಿರುವ ಚಿತ್ರಗಳಿಗೆ ಶಾಕ್ ಆಗಿದೆ. ಸರ್ಕಾರ ನಿರ್ಧಾರವನ್ನು ಗೌರವಿಸುವುದು ನಮ್ಮ ಕರ್ತವ್ಯ ಕೂಡ ಹೌದು. ಈ ಸಂದರ್ಭವನ್ನು ಎದುರಿಸಿ ಯುವರತ್ನ ಸಿನಿಮಾ ಗೆಲವು ಸಾಧಿಸಲಿ ಎಂದು ಹಾರೈಸುತ್ತೇನೆ' ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.
ಕೊರೊನಾ ನಿಯಮ ಸಲಿಕೆ ಆಗುತ್ತಿದ್ದಂತೆ ಸಾಲು ಸಾಲು ಸಿನಿಮಾಗಳು ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿವೆ. ಈಗಾಗಲೇ ಕನ್ನಡದಲ್ಲಿ ಬಿಗ್ ಬಜೆಟ್ ಚಿತ್ರಗಳಾದ ಪೊಗರು ಮತ್ತು ರಾಬರ್ಟ್ ಸಿನಿಮಾಗಳು ಬಿಡುಗಡೆಯಾಗಿ ಉತ್ತಮ ಕಮಾಯಿ ಮಾಡಿವೆ.
ಆದರೀಗ ರಿಲೀಸ್ ಆಗಿರುವ ಯುವರತ್ನ ಸಿನಿಮಾ ಸಂಕಷ್ಟಕ್ಕೆ ಸಿಲುಕಿದೆ. ಇನ್ನು ರಿಲೀಸ್ ಗೆ ರೆಡಿಯಾಗಿರುವ ಕೋಟಿಗೊಬ್ಬ-3, ಸಲಗ, ಭಜರಂಗಿ-2 ಸೇರಿದಂತೆ ಅನೇಕ ಸಿನಿಮಾಗಳ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಸದ್ಯ ಚಿತ್ರರಂಗ ಶೇ.100 ಆಸನ ಭರ್ತಿಗೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ಹಾಗಾಗಿ ಚಿತ್ರರಂಗದ ಒತ್ತಡಕ್ಕೆ ಮಣಿದು ಸರ್ಕಾರ ನಿರ್ಧಾರ ಸಡಿಲಿಕೆ ಮಾಡುತ್ತಾ ಎಂದು ಕಾದುನೋಡಬೇಕು.