'ಪೈಲ್ವಾನ್' ಸೀಕ್ವೆಲ್ ಗೆ ಸಿದ್ಧತೆ: ಪಾರ್ಟ್-2 ನಲ್ಲಿ ಬದಲಾದ ಸುದೀಪ್ ಪಾತ್ರ
Recommended Video
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಕೋಟಿಗೊಬ್ಬ-3 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪೈರಸಿ ಸಮಸ್ಯೆ ನಡುವೆಯೂ ಪೈಲ್ವಾನ್ ಸಕ್ಸಸ್ ನ ಸಂತದಲ್ಲಿದ್ದಾರೆ ಕಿಚ್ಚ. ಇದೇ ಖುಷಿಯಲ್ಲಿ ಸುದೀಪ್ ಪೈಲ್ವಾನ್ ಸೀಕ್ವೆಲ್ ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹೌದು, ಪೈಲ್ವಾನ್ ಪಾರ್ಟ್-2ಗೆ ತಯಾರಿ ನಡೆಯುತ್ತಿದೆಯಂತೆ.
ಈಗಾಗಲೆ ನಿರ್ದೇಶಕ ಕೃಷ್ಣ ಸುದೀಪ್ ಗೆ ಕಥೆ ಹೇಳಿದ್ದಾರಂತೆ. ಕಥೆ ಕೇಳಿ ಸುದೀಪ್ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಆದ್ರೆ ಪಾರ್ಟ್-2ನಲ್ಲಿ ಸುದೀಪ್ ಪೈಲ್ವಾನ್ ಆಗಿ ಕಾಣಿಸಿಕೊಳ್ಳುವುದಿಲ್ಲ ಎಂದು ಕಂಡೀಷನ್ ಹಾಕಿದ್ದಾರಂತೆ. ಈ ಮೊದಲೆ ಸುದೀಪ್ ಮತ್ತೊಮ್ಮೆ ಇಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು.
ಸೀಕ್ವೆಲ್ ಮಾಡಿದ್ರು ಪೈಲ್ವಾನ್ ಆಗಿ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಗುರು ಪಾತ್ರ ನಿಭಾಯಿಸುವೆ ಎಂದು ಹೇಳಿದ್ದರು. ಹಾಗಾಗಿ ಪೈಲ್ವಾನ್ ನಲ್ಲಿ ಸುದೀಪ್ ಗುರು ಆಗಲಿದ್ದಾರಾ ಎನ್ನುವುದು ಕುತೂಹಲ ಮೂಡಿಸಿದೆ. ಪೈಲ್ವಾನ್ ಓಪನ್ ಎಂಡಿಂಗ್ ಸಿನಿಮಾ ಆಗಿದೆ. ಸಿನಿಮಾ ಕೊನೆಯಲ್ಲಿ ಸುದೀಪ್ ಬಾಕ್ಸಿಂಗ್ ಗೆದ್ದು ಚಾಂಪಿಯನ್ ಆಗುತ್ತಾರೆ. ಮೊದಲ ಭಾಗದಲ್ಲಿ ಸೀಕ್ವೆಲ್ ಮಾಡುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಹಾಗಾಗಿ ಮುುಂದಿನ ಭಾಗದಲ್ಲಿ ಸುದೀಪ್ ಕೋಚ್ ಆದರೂ ಆಗಬಹುದು.

"ಈ ಬಗ್ಗೆ ಸುದೀಪ್ ಸಹ ಟ್ವೀಟ್ ಮಾಡಿದ್ದಾರೆ. ಡಯಟ್, 4.30ಕ್ಕೆ ಎದ್ದೇಳುವುದು. ಗಂಟೆಗಟ್ಟಲೆ ವರ್ಕೌಟ್ ಮತ್ತೆ 8.30ಕ್ಕೆ ಮಲಗೋದು. ಇನ್ನೇನು ಇಲ್ಲ. ಮತ್ತೆ ಬಾಕ್ಸಿಂಗ್ ಅಥವಾ ಕುಸ್ತಿನಾ? ಪೈರಸಿ ಟಾಪ್ ಲ್ಲಿ ಇದೆ. ಬನ್ನಿ ಕೃಷ್ಣ ಮತ್ತೆ ಸಿನಿಮಾ ಮಾಡೋಣ" ಹೇಳಿದ್ದಾರೆ.
ಸುದೀಪ್ ಟ್ವೀಟ್ ಕೂಡ ಕುತೂಹಲ ಮೂಡಿಸಿದೆ. ಕೋಟಿಗೊಬ್ಬ-3 ಚಿತ್ರೀಕರಣ ಮುಗಿಸಿ ನಂತರ ಸುದೀಪ್ ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ. ಆ ನಂತರ ಪೈಲ್ವಾನ್-2 ಮಾಡಿದರು ಅಚ್ಚರಿ ಇಲ್ಲ. ಪೈಲ್ವಾನ್ ಸಿನಿಮಾ ಐದು ಭಾಷೆಯಲ್ಲಿ ತೆರೆಕಂಡು ದೇಶ ವಿದೇಶದಲ್ಲಿ ಸದ್ದು ಮಾಡಿತ್ತು.


Click it and Unblock the Notifications











