ದಾದಾ ಸಾಹೇಬ್ ಫಾಲ್ಕೆ ಭರವಸೆ ನಟ ಪ್ರಶಸ್ತಿ ಸ್ವೀಕರಿಸಿದ ಕಿಚ್ಚ ಸುದೀಪ್

ಕನ್ನಡ ನಟ ಕಿಚ್ಚ ಸುದೀಪ್ ದಾದಾ ಸಾಹೇಬ್ ಫಾಲ್ಕೆ ಭರವಸೆಯ ನಟ ಪ್ರಶಸ್ತಿ ಸ್ವೀಕರಿಸಿದ್ದಾರೆ. ಜನವರಿ ತಿಂಗಳಿನಲ್ಲಿ ಪ್ರಶಸ್ತಿ ಘೋಷಣೆಯಾಗಿದ್ದು, ಇಂದು (ಫೆಬ್ರವರಿ 20) ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದೀಪ್ ಭಾಗಿಯಾಗಿದ್ದರು.

'ದಬಾಂಗ್ 3' ಸಿನಿಮಾದ ನಟನೆಗಾಗಿ ಸುದೀಪ್ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. 2020ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಭರವಸೆಯ ನಟ' ಪ್ರಶಸ್ತಿ ಅವರಿಗೆ ಸಿಕ್ಕಿದೆ. ಪ್ರಶಸ್ತಿ ಸ್ವೀಕರಿಸಿದ ಸುದೀಪ್ ಟ್ವಿಟ್ಟರ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ.

''ಎಲ್ಲ ಸ್ನೇಹಿತರಿಗೆ, ಮಾಧ್ಯಮ ಸ್ನೇಹಿತರಿಗೆ, ಸಹ ನಟರಿಗೆ, ಅದ್ಭುತ ತಂತ್ರಜ್ಞರಿಗೆ, ನಮ್ಮ ಕುಟುಂಬ, ನಮ್ಮ ತಂಡ, ನನ್ನ ಸಿಬ್ಬಂದಿ... ನನ್ನನ್ನು ಪರಿಪೂರ್ಣ ಮಾಡಿದ ಎಲ್ಲರಿಗೂ, ನಾನು ಉತ್ತಮವಾಗಲು ಸ್ಫೂರ್ತಿ ನೀಡಿದ ಎಲ್ಲರಿಗೂ, ನಾನು ಮನರಂಜನೆ ನೀಡುವ ಎಲ್ಲರಿಗೂ'' ಎಂದು ಈ ಪ್ರಶಸ್ತಿ ಕಾರಣರಾದವರಿಗೆ ಧನ್ಯವಾದ ಹೇಳಿದ್ದಾರೆ.

Sudeep Received Dadasaheb Phalke International Film Festival Award

ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ದೇಶ ವಿದೇಶದ ಅನೇಕ ಸಿನಿಮಾಗಳು ಪ್ರದರ್ಶನ ಆಗಿದ್ದವು. ಈ ಪೈಕಿ ಸುದೀಪ್ 'ದಬಾಂಗ್ 3' ಚಿತ್ರದ ಅತ್ಯುತ್ತಮ ನಟನೆಗೆ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ.

'ದಬಾಂಗ್ 3' ಸಿನಿಮಾದಲ್ಲಿ ಸುದೀಪ್ ಖಳನಾಯಕನ ಪಾತ್ರ ಮಾಡಿದ್ದರು. ಸಲ್ಮಾನ್ ಖಾನ್ ಚಿತ್ರದ ನಾಯಕನಾಗಿದ್ದರು. ಪ್ರಭುದೇವ ಸಿನಿಮಾದ ನಿರ್ದೇಶನ ಮಾಡಿದ್ದಾರೆ.

More from Filmibeat

English summary
Kannada actor Kiccha Sudeep received the Dadasaheb Phalke International Film Festival's most promising actor award for his role in Dabangg3.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X