»   » ಬೆಂಕಿ ಹೊತ್ತಿ ಉರಿಯುತ್ತಿದ್ದರೂ, ತುಟಿ ಎರಡು ಮಾಡಲು ಸುದೀಪ್ ರೆಡಿ ಇಲ್ಲ.!

ಬೆಂಕಿ ಹೊತ್ತಿ ಉರಿಯುತ್ತಿದ್ದರೂ, ತುಟಿ ಎರಡು ಮಾಡಲು ಸುದೀಪ್ ರೆಡಿ ಇಲ್ಲ.!

Posted By:
Subscribe to Filmibeat Kannada

ಕುಚ್ಚಿಕ್ಕೂ ಗೆಳೆಯರು ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬುದೀಗ ನಿಮ್ಮೆಲ್ಲರ ಪ್ರೀತಿಯ 'ದಾಸ' ದರ್ಶನ್ ರವರ ಸರಣಿ ಟ್ವೀಟ್ ಹಾಗೂ ಫೇಸ್ ಬುಕ್ ಪೋಸ್ಟ್ ಗಳಿಂದ ಜಗಜ್ಜಾಹೀರಾಗಿದೆ. ಆ ಮೂಲಕ ಇಷ್ಟು ದಿನ ಬೂದಿ ಮುಚ್ಚಿದ ಕೆಂಡದಂತಿದ್ದ ಇಬ್ಬರ ನಡುವಿನ ಮನಸ್ತಾಪ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸ್ಫೋಟಗೊಂಡಿದೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಸುದೀಪ್ ಆಡಿದ ಮಾತುಗಳು ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ ಎಂಬುದು ದರ್ಶನ್ ರವರ ಟ್ವೀಟ್ ಗಳಲ್ಲೇ ಸ್ಪಷ್ಟ.[ನಾನು ಸುದೀಪ್ ಇನ್ಮುಂದೆ ಗೆಳೆಯರಲ್ಲ : ದರ್ಶನ್ ತೂಗುದೀಪ]

ಇಷ್ಟೆಲ್ಲ ಆಗಿ ದಿನ ಕಳೆದರೂ, ಟ್ವಿಟ್ಟರ್ ನಲ್ಲಿ ಆಕ್ಟೀವ್ ಆಗಿರುವ ಸುದೀಪ್ ಮಾತ್ರ ಒಂದೇ ಒಂದು ಕಾಮೆಂಟ್ ಮಾಡಿಲ್ಲ. ಇನ್ನೂ ಮಾಧ್ಯಮಗಳ ಪ್ರಶ್ನೆಗೂ ಸುದೀಪ್ ತುಟಿ ಬಿಚ್ಚಿಲ್ಲ.

'ಹೆಬ್ಬುಲಿ' ಪ್ರಮೋಷನ್ ನಲ್ಲಿ ಬಿಜಿ ಆಗಿರುವ ಸುದೀಪ್

'ಹೆಬ್ಬುಲಿ' ಚಿತ್ರದ ಯಶಸ್ಸಿನ ಖುಷಿಯಲ್ಲಿ ತೇಲುತ್ತಿರುವ ಕಿಚ್ಚ ಸುದೀಪ್, ರಾಜ್ಯದ ಮೂಲೆಮೂಲೆಯಲ್ಲೂ 'ಹೆಬ್ಬುಲಿ' ಪ್ರಮೋಷನ್ ಮಾಡಲು ಪ್ರವಾಸ ಕೈಗೊಂಡಿದ್ದಾರೆ. ಇಂದು ಬೆಳಗ್ಗೆ ತುಮಕೂರು ಹಾಗೂ ಚಿತ್ರದುರ್ಗಕ್ಕೆ ಸುದೀಪ್ ಭೇಟಿ ನೀಡಿದ್ದರು.['ದರ್ಶನ್-ಸುದೀಪ್' ಸ್ನೇಹದ ಬಿರುಕಿಗೆ ಕಾರಣವಾಗಿದ್ದು 'ಸುದೀಪ್ ಕೊಟ್ಟ ಆ ಹೇಳಿಕೆ'!]

ಅಭಿಮಾನಿಗಳ ಪ್ರೀತಿಗೆ ಚಿರಋಣಿ

''ಹೆಬ್ಬುಲಿ' ಚಿತ್ರಕ್ಕೆ ಅಭೂತಪೂರ್ವ ಯಶಸ್ಸು ತಂದುಕೊಟ್ಟ ಅಭಿಮಾನಿಗಳಿಗೆ ನಾನು ಸದಾ ಚಿರಋಣಿ'' ಎಂದಷ್ಟೇ ಮಾಧ್ಯಮ ಪ್ರತಿನಿಧಿಗಳಿಗೆ ಸುದೀಪ್ ಪ್ರತಿಕ್ರಿಯೆ ನೀಡಿದರು.[ದರ್ಶನ್ 'ಮೆಜೆಸ್ಟಿಕ್' ಬಗ್ಗೆ ಸಂದರ್ಶನದಲ್ಲಿ ಸುದೀಪ್ ಹೇಳಿದ್ದೇನು? ಇಲ್ಲಿದೆ ನೋಡಿ]

ದರ್ಶನ್ ಬಗ್ಗೆ ಪ್ರಶ್ನೆ ತೂರಿಬಂದ ಕೂಡಲೆ

ಇದೇ ವೇಳೆ ''ದರ್ಶನ್'' ಅಂತ ಮಾಧ್ಯಮ ಪ್ರತಿನಿಧಿಗಳು ಬಾಯಿ ತೆರೆಯುತ್ತಿದ್ದಂತೆಯೇ ಸುದೀಪ್ ಹೊರಟು ಬಿಟ್ಟರು. ದರ್ಶನ್ ಮಾಡಿರುವ ಟ್ವೀಟ್ ಕುರಿತು ಪ್ರತಿಕ್ರಿಯೆ ನೀಡಲು ಸುದೀಪ್ ನಿರಾಕರಿಸಿದರು.[ದರ್ಶನ್ ಗೆ ಟ್ವಿಟ್ಟರ್, ಫೇಸ್ ಬುಕ್ ಬಳಸಲು ಬರಲ್ವಂತೆ! ಟ್ವೀಟ್ ಮಾಡೋದ್ಯಾರು?]

ಒಂದೇ ಒಂದು ಟ್ವೀಟ್ ಕೂಡ ಮಾಡಿಲ್ಲ

'ಹೆಬ್ಬುಲಿ' ವಿಜಯಯಾತ್ರೆಯಲ್ಲಿ ಬಿಜಿ ಆಗಿರುವ ಸುದೀಪ್, ದರ್ಶನ್ ರವರ ಟ್ವೀಟ್ ಪ್ರಹಾರಕ್ಕೆ ಸ್ಪಷ್ಟನೆ ಕೂಡ ಕೊಟ್ಟಿಲ್ಲ.

ಇಷ್ಟೆಲ್ಲ ಶುರು ಆಗುವ ಮುನ್ನ

ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಸುದೀಪ್ ವಿರುದ್ಧ ದರ್ಶನ್ ಟ್ವೀಟ್ ಮಾಡುವ ಮುನ್ನ ಏನಾಗಿತ್ತು ಗೊತ್ತಾ.?

ಒಂದೇ ವೇದಿಕೆಯಲ್ಲಿ ನೋಡುವ ಅಸೆ

''ದರ್ಶನ್ ಹಾಗೂ ನಿಮ್ಮನ್ನ ಒಂದೇ ವೇದಿಕೆಯಲ್ಲಿ ನೋಡುವಾಸೆ'' ಅಂತ ಅಭಿಮಾನಿಯೊಬ್ಬರು ಸುದೀಪ್ ಗೆ ಟ್ವೀಟ್ ಮಾಡಿದ್ದರು. ಅದಕ್ಕೆ ಕಿಚ್ಚ ಸುದೀಪ್ ಸ್ಮೈಲಿ ಹಾಕಿದ್ದರು. ಆದ್ರೆ, ನಂತರ ನಡೆದ ಬೆಳವಣಿಗೆ ನಿಮಗೆ ಗೊತ್ತಲ್ವಾ.?

English summary
Kannada Actor Kiccha Sudeep refused to answer when quizzed about Challenging Star Darshan's tweet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada