ಚಿತ್ರಮಂದಿರಗಳಿಗೆ ಹಾನಿ ಮಾಡದಂತೆ ನಟ ಸುದೀಪ್ ಮನವಿ

ಬಹುನಿರೀಕ್ಷೆಯ 'ಕೋಟಿಗೊಬ್ಬ 3' ಚಿತ್ರ ಬಿಡುಗಡೆ ಆಗದಿರುವದಕ್ಕೆ ವಿಷಾದ ವ್ಯಕ್ತಪಡಿಸಿರುವ ನಟ ಸುದೀಪ್, ಚಿತ್ರಮಂದಿರಗಳಿಗೆ ಹಾನಿ ಮಾಡದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಚಿತ್ರ ಬಿಡುಗಡೆ ಆಗದಿರುವ ಹಿನ್ನೆಲೆಯಲ್ಲಿ ತಾಂತ್ರಿಕ ಕಾರಣಗಳ ಕುರಿತು ಗುರುವಾರ ಬೆಳಿಗ್ಗೆಯಿಂದಲೇ ಸಭೆಗಳನ್ನು ನಡೆಸಿದ್ದರು ನಟ ಸುದೀಪ್. ಮಧ್ಯಾಹ್ನ ಟ್ವೀಟರ್ ಮೂಲಕ ವಿಡಿಯೊ ಪೋಸ್ಟ್ ಮಾಡಿರುವ ಸುದೀಪ್ ಅಭಿಮಾನಿಗಳಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.

"ಚಿತ್ರ ಬಿಡುಗಡೆಗೆ ಯಾರಿಂದ ತೊಂದರೆ ಆಗಿದೆ ಎಂಬುದು ಗೊತ್ತಿದೆ. ಇದಕ್ಕೆ ಕಾಲವೇ ಉತ್ತರ ನೀಡುತ್ತದೆ ಎಂದು ಸುದೀಪ್ ಚಿತ್ರ ಬಿಡುಗಡೆ ಮಾಡಲು ಉಂಟಾಗಿರುವ ಅಡೆತಡೆಗಳು ಮತ್ತು ಅದಕ್ಕೆ ಕಾರಣರಾದ ವ್ಯಕ್ತಿಗಳ ಬಗ್ಗೆಯೂ ಅವರ ಹೆಸರು ಹೇಳದೆ ಬೇಸರ ವ್ಯಕ್ತಪಡಿಸಿದ್ದಾರೆ.

Sudeep regrets not releasing Kotiyogoba 3

ಗುರುವಾರ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ, ಕೆಲವು ಕಾರಣಗಳಿಂದ ಆಗಿಲ್ಲ. ಆದರೆ, ಶುಕ್ರವಾರ (ಅ.15) ಬೆಳಿಗ್ಗೆ 6 ರಿಂದಲೇ ರಾಜ್ಯದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತದೆ. ಆದಕ್ಕೆ ಬೇಕಾದ ಎಲ್ಲ ತಯಾರಿಗಳನ್ನೂ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಈ ಸಂಬಂಧ ಅವರ ನೂತನ ಪೋಸ್ಟರ್ ಒಂದನ್ನು ಸಹ ಹಂಚಿಕೊಂಡಿದ್ದಾರೆ.

ರಾಜ್ಯದ ಹಲವೆಡೆ ಚಿತ್ರಮಂದಿರಗಳ ಮೇಲೆ ದಾಳಿ ಮಾಡುತ್ತಿರುವುದರ ಬಗ್ಗೆಯೂ ಬೇಸರ ವ್ಯಕ್ತಪಡಿಸಿರುವ ನಟ ಸುದೀಪ್, ಈ ಸಮಸ್ಯೆಗೆ ಕಾರಣರಕರ್ತರಾದವರ ಬಗ್ಗೆ ನಾನು ವೈಯಕ್ತಿಕವಾಗಿ ಕ್ಷಮೆ ಯಾಚಿಸುತ್ತೇನೆ. ಇದರಲ್ಲಿ ಚಿತ್ರಮಂದಿರಗಳ ಯಾವ ತಪ್ಪೂ ಸಹ ಇಲ್ಲ. ಅವರು ಪ್ರೀತಿಯಿಂದ ನಮಗೆ ಚಿತ್ರಮಂದಿರಗಳನ್ನು ನೀಡಿದ್ದಾರೆ. ಯಾರೂ ಸಹ ಚಿತ್ರಮಂದಿರಗಳಿಗೆ ಹಾನಿ ಮಾಡಬೇಡಿ' ಎಂದು ಮನವಿ ಮಾಡಿದ್ದಾರೆ.

"ನಿರ್ಮಾಪಕ ಸೂರಪ್ಪ ಬಾಬು ಅವರ ವಿಡಿಯೊ ನೋಡಿದೆ. ಬಾಬು ನೀವು ಒಬ್ಬರೇ ಇಲ್ಲ. ಯಾರಿಂದ ಈ ತೊಂದರೆ ಆಗಿದೆ, ಯಾರಿಂದ ತೊಂದರೆ ಸಿಲುಕಿಕೊಂಡಿದ್ದೀರಿ ಎಂಬುದು ನಮಗೆಲ್ಲ ಗೊತ್ತಿದೆ. ನಾವೆಲ್ಲ ನಿಮ್ಮ ಜೊತೆಗೆ ಇದ್ದೀವಿ" ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.

Sudeep regrets not releasing Kotiyogoba 3

ಸೂರಪ್ಪ ಬಾಬು ಪ್ರಾರ್ಥನೆ:

'ಕೋಟಿಗೊಬ್ಬ 3' ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಅವರೂ ಸಹ ಗುರುವಾರ ಬೆಳಿಗ್ಗೆ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಕೈಮಗಿದು ಮನವಿ ಮಾಡಿದ್ದರು. ''ಬೆಳಿಗ್ಗೆ ಆರು ಗಂಟೆಯಿಂದ ಕಿಚ್ಚನ ಅಭಿಮಾನಿಗಳಿಗೆ ಫ್ಯಾನ್ಸ್ ಶೋ ಪ್ರಾರಂಭ ಮಾಡುತ್ತಿದ್ದೇವೆ. ದಯವಿಟ್ಟು ಕ್ಷಮಿಸಿ, ಇದರಲ್ಲಿ ನನ್ನದು ಯಾವುದೇ ತಪ್ಪಿಲ್ಲ. ಸುದೀಪ್ ಅಭಿಮಾನಿಗಳಿಗೆ, ಕನ್ನಡ ಕಲಾಭಿಮಾನಿಗಳಿಗೆ ಕ್ಷಮೆ ಕೋರುತ್ತಿದ್ದೇನೆ'' ಎಂದಿದ್ದಾರೆ ಸೂರಪ್ಪ ಬಾಬು.

''ಸುದೀಪ್ ಸರ್, ಘಟನೆಯ ಬಗ್ಗೆ ಸಂಪೂರ್ಣ ಸತ್ಯ ನಿಮಗೂ ಗೊತ್ತಿದೆ. ಎಲ್ಲ ರೀತಿಯ ಅಭಿಮಾನಿಗಳಿಗೆ ಸಿನಿಮಾದ ರಸದೌತಣ ನೀಡಲು ಸಕಲ ವ್ಯವಸ್ಥೆ ಮಾಡುತ್ತಿದ್ದೇನೆ. ಎಲ್ಲರೂ ನಾಳೆ ಚಿತ್ರಮಂದಿರದಲ್ಲಿ ಸಿನಿಮಾ ನೋಡಿರೆಂದು ದಯವಿಟ್ಟು ನೀವು ಟ್ವೀಟ್‌ ಮೂಲಕ ತಿಳಿಸಬೇಕೆಂದು ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ. ದಯವಿಟ್ಟು ಕ್ಷಮೆ ಇರಲಿ ಸರ್'' ಎಂದು ಸೂರಪ್ಪ ಬಾಬು ದೈನ್ಯದಿಂದ ಮನವಿ ಮಾಡಿದ್ದರು.

More from Filmibeat

English summary
Sudeep regrets not releasing 'Kotiyogoba 3'. Film release on Oct 15.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X