ಕಿಚ್ಚ ಪರಿಚಯಿಸಿದ ಸ್ಯಾಂಡಲ್ ವುಡ್ ಯಂಗ್ ಟೈಗರ್
Recommended Video

ಸಿನಿಮಾರಂಗದಲ್ಲಿ ಈಗಾಗಲೇ 'ಹೆಬ್ಬುಲಿ', 'ರಾಜಾಹುಲಿ', ಎಂದು ಖ್ಯಾತಿ ಪಡೆದುಕೊಂಡಿರುವ ಸ್ಟಾರ್ ನಟರು ಅಭಿಮಾನಿಗಳಿಂದ ಜೈಕಾರ ಹಾಕಿಸಿಕೊಂಡಿದ್ದು ಆಗಿದೆ. ಕನ್ನಡ ಸಿನಿಮಾರಂಗಕ್ಕೆ ಈಗ 'ಪಡ್ಡೆ ಹುಲಿ' ಎಂಟ್ರಿ ಆಗಿದೆ.
ಪಡ್ಡೆ ಹುಲಿಯನ್ನ ಸಿನಿಮಾರಂಗಕ್ಕೆ ಹಾಗೂ ಪ್ರೇಕ್ಷಕರಿಗೆ ಪರಿಚಯ ಮಾಡಿದ್ದು ಚಂದನವನದ ಹೆಬ್ಬುಲಿ ಕಿಚ್ಚ ಸುದೀಪ್. ಹೌದು ಗಾಂಧಿನಗರದಲ್ಲಿ ಗಂಡುಗಲಿ ನಿರ್ಮಾಪಕ ಎಂದು ಹೆಸರು ಗಳಿಸಿರುವ ಪ್ರೊಡ್ಯೂಸರ್ ಕೆ ಮಂಜು ಅವರ ಪುತ್ರ ಶ್ರೇಯಸ್ ಸ್ಯಾಂಡಲ್ ವುಡ್ ಗೆ ನಾಯಕನಾಗಿ ಪರಿಚಯ ಆಗುತ್ತಿದ್ದಾರೆ.

ಇತ್ತಿಚಿಗಷ್ಟೇ ಅದ್ಧೂರಿಯಾಗಿ ಸಿನಿಮಾದ ಪ್ರೋಮೋ ಶೂಟ್ ಮಾಡಿದ ನಿರ್ದೇಶಕರು ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. 'ರಾಜಹುಲಿ' ಸಿನಿಮಾ ಖ್ಯಾತಿಯ ನಿರ್ದೇಶಕ ಗುರುದೇಶ್ ಪಾಂಡೆ ಶ್ರೇಯಸ್ ಅವ್ರ ಚೊಚ್ಚಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಶ್ರೇಯಸ್ ಅವರಿಗೆ 'ಯಂಗ್ ಟೈಗರ್' ಎನ್ನುವ ಬಿರುದನ್ನ ಈಗಾಗಲೇ ನೀಡಲಾಗಿದ್ದು ಕಿಚ್ಚ ಸುದೀಪ್ ಅವರಿಂದ ಸಿನಿಮಾದ ಫಸ್ಟ್ ಪೋಸ್ಟರ್ ಬಿಡುಗಡೆ ಮಾಡಿಸಲಾಗಿದೆ. ಕಿಚ್ಚ ಪೋಸ್ಟರ್ ಟ್ವಿಟ್ಟರ್ ನಲ್ಲಿ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ. ಸಾಕಷ್ಟು ಹೊಸ ನಾಯಕರ ಮಧ್ಯೆ ಶ್ರೇಯಸ್ ಯಶಸ್ಸು ಕಾಣಲಿ ಎನ್ನುವುದು ಅನೇಕ ಕಲಾವಿದರ ಬಯಕೆ.


Click it and Unblock the Notifications











